ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರೆಮಟ್ಟಿ ಗ್ರಾಮದ ಅಂಗನವಾಡಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆನ್ನೆ ದಿವಸ ಮಿಷನ್ ಸುರಕ್ಷಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವನಮಾಲ ರವರು ಮಾತನಾಡಿ ಮಿಷನ್ ಸುರಕ್ಷಾ ಅಭಿಯಾನ ಕುರಿತು ಬಾಲ ಕಾರ್ಮಿಕರು, ಗರ್ಭಿಣಿಯರು, ಪೋಕ್ಸೋ ಪ್ರಕರಣ,ಅಪೌಷ್ಟಿಕತೆ, ಬಾಲ್ಯ ವಿವಾಹ,ಮೊಬೈಲ್ ಬಳಕೆ,ಹಾಗೂ ದೈಹಿಕ ಮಾನಸಿಕ ಬೆಳವಣಿಗೆ ಕುರಿತಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಹಾಗೂ ಅರಿವಿನ ಮಾಹಿತಿ ನೀಡಿದರು.

ಮತ್ತೊಬ್ಬ ಅತಿಥಿ ಆಶಾರಾಣಿ ಮಾತನಾಡಿ ಗುಡ್ ಟಚ್ ಹಾಗೂ ಬ್ಯಾಡ ಟಚ್ ಎಂದರೆ ಏನು ಎಂಬುದರ ಅರಿವನ್ನು ಮಕ್ಕಳಿಗೆ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಮಾತನಾಡಿ ಹದಿಹರೆಯದ ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಮಾಹಿತಿ ನೀಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಅಂಗನವಾಡಿಯ ಸತ್ಯ ನಾಗರತ್ನ ಮಾಡಿದರು ಹಾಗೂ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.