ಮೈಸೂರು | ಅಣ್ಣಾವ್ರ ಅಭಿನಯದಲ್ಲಿ ಇತಿಹಾಸ ಪುರುಷರ ಕಾಣುವಂತಾಯಿತು; ನಟ ಮಂಡ್ಯ ರಮೇಶ್

Date:

Advertisements

ಮೈಸೂರಿನ, ಹೆಬ್ಬಾಳ ಹೊರ ವರ್ತುಲದಲ್ಲಿರುವ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಮತ್ತು ಶೇಷಾದ್ರಿಪುರಂ ಪದವಿ ಕಾಲೇಜು ಸಹಯೋಗದಲ್ಲಿ ‘ ಸಾಕ್ಷ್ಯಚಿತ್ರ ಮತ್ತು ಪುಸ್ತಕಗಳ ಲೋಕಾರ್ಪಣೆ ‘ ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಕರ್ಮಿ, ಹಾಸ್ಯ ನಟ ಮಂಡ್ಯ ರಮೇಶ್ ‘ ಅಣ್ಣಾವ್ರ ಅಭಿನಯದಲ್ಲಿ ಇತಿಹಾಸ ಪುರುಷರ ಕಾಣುವಂತಾಯಿತು ‘ ಎಂದರು.

ಬಾಲ್ಯದ ಜೀವನದಲ್ಲಿ ಡಾ. ರಾಜಕುಮಾರ್ ಎಂದರೆ ಅದೊಂದು ತರಹದ ಹುಚ್ಚು. ಭಕ್ತ ಎನ್ನುವ ಪದ ಬಳಕೆಯು ಇತ್ತು. ನನಗೆ ನಟನಾಗುವ ಯಾವುದೇ ಆಸಕ್ತಿ ಇರಲಿಲ್ಲ. ಆದರೆ, ಅಣ್ಣಾವ್ರ ದೊಡ್ಡ ಅಭಿಮಾನಿ. ಅಂದಿನ ವಿದ್ಯಾರ್ಥಿ ದೆಸೆಯಲ್ಲಿ ನೋಟ್ ಪುಸ್ತಕದಲ್ಲಿ ಅಣ್ಣಾವ್ರ ಸಿನಿಮಾ ಫೋಟೋ ಕಟಿಂಗ್ಸ್ ಅಂಟಿಸಿ, ಯಾವ, ಸಿನಿಮಾ, ನಿರ್ದೇಶಕರು ಯಾರು? ಸಂಗೀತ ನಿರ್ದೇಶಕರು ಯಾರು? ಯಾವ ವರ್ಷ ಬಿಡುಗಡೆ ಆಯಿತು? ಎಷ್ಟು ಹಣ ಗಳಿಕೆ ಮಾಡಿತು ಹೀಗೆಲ್ಲ ಬರೆದಿಟ್ಟುಕೊಳ್ಳುವ ಹುಚ್ಚುತನ ನನ್ನಲ್ಲಿತ್ತು. ಎಲ್ಲರೂ ಹಾಗೆಯೇ ಕರೆಯುತ್ತಿದ್ದರು.

” ಜನುಮದ ಜೋಡಿ ಚಿತ್ರದ ಮೂಲಕ ಆಕಸ್ಮಿಕವಾಗಿ ಚಿತ್ರ ರಂಗಕ್ಕೆ ಬಂದಾಗ ಮಹಾನ್ ಮೇರು ನಟ ಡಾ. ರಾಜಕುಮಾರ್ ಅವರನ್ನು ನೋಡುವ, ಮಾತಾಡುವ ಅವಕಾಶ ನನ್ನದಾಯಿತು. ಅಂದು ಅವರಿಂದ ಪಡೆದ ಆಶೀರ್ವಾದ ಇಂದು 30 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಉಳಿಯುವಂತೆ ಮಾಡಿದೆ ಎಂದರು. ಅಭಿನಯ ಅಂದರೇ ಅದುವೇ ಅಣ್ಣಾವ್ರದ್ದು. ಯಾವ ವಯಸ್ಸಿಗೆ ಯಾವ ರೀತಿ ಹೊಂದಬೇಕು, ರಾಗ ಬದಲಾವಣೆಯ ಹಿಡಿತ ಅವರಲ್ಲಿತ್ತು. ಇತಿಹಾಸ ಪುರುಷರಾದ ಮಯೂರ, ಸತ್ಯ ಹರಿಶ್ಚಂದ್ರ, ಬಬ್ರುವಾಹನ, ಇಮ್ಮಡಿ ಪುಲಿಕೇಶಿ ನಮಗೆ ಗೊತ್ತಿಲ್ಲ. ನೋಡಿಲ್ಲ, ಅವರನ್ನೆಲ್ಲ ಹೀಗಿದ್ದರು ಎಂದು ಕಂಡಿದ್ದೆ ಡಾ. ರಾಜಕುಮಾರ್ ಅವರ ಮೂಲಕ, ಅವರ ಅಭಿನಯದ ಮೂಲಕ ಎಂದು ಹೇಳಿದರು.”

Advertisements

ಪ್ರೊ. ಎಂ. ಕೃಷ್ಣೆಗೌಡ ಮಾತನಾಡಿ ” ಮೈಸೂರು ಬೆಂಗಳೂರು ರಸ್ತೆಯ ಮಣಿಪಾಲ ಜಂಕ್ಷನ್ ನಲ್ಲಿ ಬಹು ವರ್ಷಗಳಿಂದ ಖ್ಯಾತ ವ್ಯಕ್ತಿಯೊಬ್ಬರ ಭಾರಿ ಗಾತ್ರದ ಫ್ಲೆಕ್ಸ್ ಇತ್ತು. ಇತ್ತೀಚಿಗೆ ತಿಂಗಳ ಅವಧಿಯಲ್ಲಿ ತೆರವು ಮಾಡಿದ್ದಾರೆ. ಆ ವ್ಯಕ್ತಿ ಇನ್ಯಾರು ಅಲ್ಲ ಅದುವೇ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್. ಜಾಹೀರಾತು ಭಾಗವಾಗಿ ಇದ್ದ ಫ್ಲೆಕ್ಸ್ ನಲ್ಲಿ ಗುಟ್ಕಾ ಪ್ಯಾಕೆಟ್ ಹಿಡಿದು ನಿಂತ ಚಿತ್ರವದು. ಈ ದೇಶ ಏನೆಲ್ಲ ಕೊಟ್ಟಿದೆ. ಎಷ್ಟೆಲ್ಲ ದುಡ್ಡು ಕೊಟ್ಟಿದೆ. ಆದರೂ, ಜನರ ಆರೋಗ್ಯ ಹಾಳು ಮಾಡುವ ಗುಟ್ಕಾ ಹಿಡಿದು ಪ್ರಚಾರ ಮಾಡುವ ಚಿತ್ರ ನೋಡಿ ತೀರ ಅಸಹ್ಯ ತರಿಸಿತ್ತು. ಅದೇ ಹಾದಿಯಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್ ಹೀಗೆ ಎಲ್ಲರೂ ಸಹ ದುಡ್ಡಿಗಾಗಿ ಇಂತಹ ಜಾಹೀರಾತು ಹಿಂದೆ ಬಿದ್ದಿದ್ದರು. ಆಗಲೇ ನಮ್ಮ ಕಣ್ಣ ಮುಂದೆ ಬರುವ ವಿಶಿಷ್ಟ ವ್ಯಕ್ತಿ ಅಂದರೇ ಅವರೇ ಡಾ. ರಾಜಕುಮಾರ್.”

” ಸರಳ ವ್ಯಕ್ತಿತ್ವದ, ಬಹು ಪ್ರತಿಭೆ. ಸಮಾಜ ಬದಲಾವಣೆ ಬಯಸುವಾಗ ಅಗತ್ಯ ವ್ಯಕ್ತಿಯನ್ನ ಕಾಲಾನುಸಾರ ಹುಟ್ಟಿಸಿಕೊಳ್ಳುತ್ತೇ. ಅಂತಹದ್ದೇ ಆಗಿರಬೇಕು ಡಾ. ರಾಜಕುಮಾರ್ ಚಿತ್ರರಂಗಕ್ಕೆ ಬಂದಹಾದಿ. 1954 ರಲ್ಲಿ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟರು. ಅದಕ್ಕೂ ಮುನ್ನ 20 ವರ್ಷಗಳ ಕಾಲ ಕೇವಲ 32 ಸಿನಿಮಾಗಳು ಮಾತ್ರ ಕನ್ನಡದಲ್ಲಿ ನಿರ್ಮಾಣಗೊಂಡಿದ್ದವು. ಆದರೇ, ಅಣ್ಣಾವ್ರು ಬಂದು 14 ವರ್ಷ ಕಳೆಯುವ ಹೊತ್ತಿಗೆ ಅಂದರೇ 1968 ಕ್ಕೆ ಅಣ್ಣಾವ್ರೇ ಅಭಿನಯಿಸಿದ ಚಿತ್ರ ನೂರಾಗಿತ್ತು. 20 ವರ್ಷದಲ್ಲಿ 32 ಚಲನಚಿತ್ರ ಕಂಡಿದ್ದ ಸಿನಿ ರಂಗ ಅಣ್ಣಾವ್ರು ಬಂದಮೇಲೆ 14 ವರ್ಷದಲ್ಲಿ 300 ಚಿತ್ರಗಳು ತೆರೆಕಂಡವು. ಅಂದರೇ, ಸಿನಿ ರಂಗದ ಬೆಳವಣಿಗೆಗೆ ಡಾ. ರಾಜಕುಮಾರ್ ಅವರೇ ಬರಬೇಕಾಯಿತು ” ಎಂದು ನೆನಪಿಸಿಕೊಂಡರು.

ಡಾ. ಎ. ಎಸ್. ಪ್ರಭಾಕರ್ ಮಾತನಾಡಿ ಹಂಪಿ ಕನ್ನಡ ವಿದ್ಯಾಲಯದಲ್ಲಿ ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠವನ್ನು ದಿನಾಂಕ-18-04-2006 ರಲ್ಲಿ ಆರಂಭಿಸಲಾಯಿತು. ಕನ್ನಡ ಚಲನಚಿತ್ರ, ರಂಗಭೂಮಿ ಮತ್ತು ಅಭಿನಯ ಕಲೆಗೆ ಸಂಭಂದಿಸಿದ ವಿವಿಧ ರಂಗಗಳನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಪೀಠವು ಮುಂದಡಿ ಇಟ್ಟಿದೆ. ಪೀಠದ ಮೂಲಕ ಆನೇಕಾನೇಕ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಕಳೆದ ಎರೆಡು ದಶಕಗಳಿಂದ ಹಮ್ಮಿಕೊಳ್ಳಲಾಗಿದೆ.

” ಡಾ. ರಾಜಕುಮಾರ್ ಅವರು ಕನ್ನಡ ರಂಗಭೂಮಿ ಮತ್ತು ಸಿನೆಮಾ ರಂಗಗಳ ನಡುವೆ ಒಂದು ಸೇತುವೆ ಎಂಬಂತೆ ಪರಿಭಾವಿಸಲ್ಪಟ್ಟಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕನ್ನಡದ ಭಾಷಿಕ ಪರಿಸರ ಮತ್ತು ಕಲಾಜಗತ್ತು ಹೇಗೆ ರೂಪುಗೊಳ್ಳುತ್ತಾ ಬಂದಿದೆ ಎಂಬುದನ್ನು ವಿಶ್ಲೇಷಿಸಬೇಕಿದೆ. ಕನ್ನಡವನ್ನೂ ಒಳಗೊಂಡಂತೆ ಭಾರತದ ಅಭಿನಯ ಮತ್ತು ಗಾಯನ ಪರಂಪರೆಗಳಿಗೆ ಮಹೋನ್ನತ ಕೊಡುಗೆಗಳನ್ನು ನೀಡಿದ್ದಾರೆ. ಜನಪ್ರಿಯ ಕಲಾಪ್ರಕಾರದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ರಾಜಕುಮಾರ್ ಅವರ ಬದುಕನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. “

” ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ನಾಡಿನ ಸಮಾಜ ಮತ್ತು ಸಂಸ್ಕೃತಿಗಳನ್ನು ಪರಿಭಾವಿಸುವ ಕ್ರಮವೊಂದಿದೆ. ಅದರಲ್ಲೂ, ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಭಾವುಕ ನೆಲೆಯಲ್ಲಿ ಕಲ್ಪಿಸಿಕೊಳ್ಳುವ ಪರಿಪಾಠವೊಂದು ಬೆಳೆದು ಬಂದಿದೆ. ಕನ್ನಡ ರಾಷ್ಟ್ರೀಯತೆ ಎಂಬ ಒಂದು ರಾಜಕೀಯ ರಚನೆಯನ್ನು ಭಾವುಕವಾಗಿ ಪರಿಭಾವಿಸುವ ಹಿಂದಿರುವ ಒತ್ತಾಸೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಮನರಂಜನೆಯ ಅತ್ಯಂತ ಪ್ರಭಾವಶಾಲಿ ಮಾಧ್ಯಮವೆಂದರೆ ಸಿನಿಮಾ. ಈ ಮಾಧ್ಯಮವು ಜನಸಾಮಾನ್ಯರಲ್ಲಿ ಪ್ರಭಾವ ಬೀರಿದ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ, ಸಾಂಸ್ಕೃತಿಕ ವಿಮರ್ಶೆಯಾಗಿಯೂ, ನಮ್ಮ ನಾಡಿನ ಸಮಾಜಗಳ ವಿವಿಧ ವಲಯಗಳ ಮೇಲೆ ಅದರ ಪ್ರಭಾವವನ್ನು ಬಿಚ್ಚಿಡಲು ಪೀಠವು ಕೆಲಸ ಮಾಡಬೇಕಾಗಿದೆ. ಈ ಎಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಪೀಠವು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ ” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಲೈವ್ ವೀಕ್ಷಿಸಿ https://www.youtube.com/live/DIoty94rioU?si=b5suHnm8-vadlUbF

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ, ಕುಲ ಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಡ, ನಾಡೋಜ ವೂಡೇ ಪಿ. ಕೃಷ್ಣ, ಪ್ರೊ. ಜಿ. ಪ್ರಶಾಂತ್ ನಾಯಕ್, ಪ್ರೊ. ಡಿ. ಸತೀಶ್ ಚಂದ್ರ, ನಿರ್ದೇಶಕರಾದ ಬಿ. ಎಂ. ಗಿರಿರಾಜ್,ಪ್ರಕಾಶ್ ರಾಜ್ ಮೇಹು, ಬಿ. ಎ. ಅನಂತರಾಮ, ಪ್ರಾಶುಪಾಲರಾದ ಡಾ. ಕೆ. ಸೌಮ್ಯ ಈರಪ್ಪ, ಡಾ. ಸಿ. ಪಿ. ಲಾವಣ್ಯ ಸೇರಿದಂತೆ ವಿದ್ಯಾರ್ಥಿಗಳು, ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X