ಮೈಸೂರು | ಅರಣ್ಯ ಇಲಾಖೆಯಿಂದ ಭಿಕ್ಷಾ ಪರಿಹಾರ : ಬಡಗಲಪುರ ನಾಗೇಂದ್ರ

Date:

Advertisements

ಮೈಸೂರು ಜಿಲ್ಲೆ, ಹುಣಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ವನ್ಯ ಜೀವಿಗಳ ದಾಳಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾನವ – ವನ್ಯಜೀವಿ ಸಂಘರ್ಷ ತಪ್ಪಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಅರಣ್ಯ ಇಲಾಖೆ ಪ್ರಾಣಿ ದಾಳಿಯಿಂದ ಸತ್ತವರ ಕುಟುಂಬಕ್ಕೆ ಭಿಕ್ಷಾ ಪರಿಹಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

” ಮಾನವ – ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಅದರಲ್ಲೂ, ಇತ್ತೀಚಿಗೆ ಹುಲಿ ದಾಳಿ, ಆನೆ ತುಳಿತಕ್ಕೆ ಹಲವರು ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಮಾನವೀಯತೆ ಮರೆತು ಮೃತರ ಕುಟುಂಬಕ್ಕೆ ಭಿಕ್ಷಾ ಪರಿಹಾರ ನೀಡುತ್ತಿದೆ. ಅದುವೇ, ಕೊಡಲು ಮನಸಿಲ್ಲ, ಕಾಡಿ ಬೇಡಿ ಮನಸಿಲ್ಲದೆ ಕೊಡುವ ಪರಿಸ್ಥಿತಿ. ಪ್ರಾಣಿ ದಾಳಿಯಿಂದ ಸತ್ತವರ ಕುಟುಂಬಕ್ಕೆ 7 ಲಕ್ಷ ಪರಿಹಾರ ಇತ್ತು. ರೈತ ಸಂಘದ ಹೋರಾಟದ ಮೂಲಕ 15 ಲಕ್ಷ ಪರಿಹಾರ ಲಭಿಸುವಂತೆ ಆಗಿದೆ. ಅದಲ್ಲದೆ, ರೈತ ಸಂಘದ ಆಗ್ರಹ ಇರೋದು 50 ಲಕ್ಷ ಪರಿಹಾರಕ್ಕೆ
ಏರಿಸಬೇಕು. ಮೃತರ ಕುಟುಂಬದಲ್ಲಿ ಓರ್ವರಿಗೆ ಕೆಲಸ ನೀಡಬೇಕು. ಮಕ್ಕಳ ಓದಿನ ಜವಾಬ್ದಾರಿ ನಿಭಾಯಿಸಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಚರ್ಚಿಸಲಿದ್ದಾರೆ ” ಎಂದರು.

ವಿಪರ್ಯಾಸ ಎಂದರೆ ಅರಿವಿಲ್ಲದ ಮಂತ್ರಿಗಳ ಕೆಲವು ನಿರ್ಧಾರಗಳು ಬೇಸರ ತರಿಸುವಂತಿವೆ. ಅದರಲ್ಲಿ ಪ್ರಮುಖವಾಗಿ ಜಾನುವಾರು ಮೇಯಿಸುವುದರಿಂದ ವನ್ಯ ಜೀವಿಗಳಿಗೆ ಕಾಲುಬಾಯಿ ರೋಗ ಹರಡುತ್ತದೆ ಎನ್ನುವ ಮೂರ್ಖತನದ ಮಾತುಗಳು. ಇದರ ಜೊತೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಲೆಯಲ್ಲಿ ಬುದ್ದಿಯಿರದಂತೆ ಕಾಡಲ್ಲಿ, ಕಾಡಂಚಲ್ಲಿ ಜಾನುವಾರು ಮೇಯಿಸುವಂತಿಲ್ಲ ಎನ್ನುವ ಆದೇಶ ಮಾಡಿದ್ದು. ಇದೆಲ್ಲಾ ನಗೆಪಾಟಲಿನ ವಿಚಾರ. ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದವರು ಮಂತ್ರಿಗಳಾಗಿದ್ದು ನಮ್ಮಗಳ ದುರ್ದೈವ.

Advertisements

ರೈತರಿಗೆ ಕಾಡಿನ ಜೊತೆಗೆ ನಂಟಿದೆ. ನೂರಾರು ರಾಸುಗಳು, ಆಡುಕುರಿ ಕಾಡಲ್ಲಿ ಗೋಮಾಳ, ತೋಪು, ಹುಲ್ಲುಬನೆ, ಬಾಣೆ ಇತ್ಯಾದಿ ಜಾನುವಾರುಗೆ ಮೀಸಲಾದಲ್ಲಿ ಮೇಯಿಸಲು ಬಿಡುತಿದ್ದೋ. ಈಗ ಅಲ್ಲಿಯೂ ಹೋಗುವಂತಿಲ್ಲ ಅನ್ನುವುದಾದರೆ ರೈತರ ಪರಿಸ್ಥಿತಿ ಏನು? ಜಾನುವಾರು ನಿರ್ವಹಣೆ ಇವಾಗಿನ ಖರ್ಚಿನಲ್ಲಿ ಅಸಾಧ್ಯವಾದ ಮಾತು. ಹೀಗಿರುವಾಗ ವೈಜನಿಕವಾಗಿ ಯೋಚನೆ ಮಾಡದೆ ಸಿಕ್ಕ ಸಿಕ್ಕ ಹಾಗೆಲ್ಲ ನಿರ್ಧಾರ ಪ್ರಕಟಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ” ವನ್ಯ ಜೀವಿ ಉಪಟಳ ತಪ್ಪಿಸಲು ಆಧುನಿಕತೆಯ ತಾಂತ್ರಿಕ ವಿಧಾನಗಳನ್ನು ಅನುಸರಣೆ ಮಾಡಬೇಕು. ಅದರಲ್ಲೂ ಆನೆ ದಾಳಿ ನಿಯಂತ್ರಣಕ್ಕೆ ರೈಲ್ವೇ ಕಂಬಿ ಅಳವಡಿಕೆ, ಟ್ರಂಚ್ ವೊಂದೇ ಪರಿಹಾರವಲ್ಲ. ಪರಿಸರ ಸ್ನೇಹಿಯಾಗಿ ಕಾಡಂಚಿನ ಗಡಿಭಾಗಗಳಲ್ಲಿ ಜೇನು ಕೃಷಿ ನಿರ್ವಹಣೆ ಮಾಡುವುದು, ಸೋಲಾರ್ ತಂತಿ ಬೇಲಿ ಅಳವಡಿಕೆ ಮೂಲಕ ಸಾಕಷ್ಟು ಬದಲಾದ ವ್ಯವಸ್ಥೆಯಲ್ಲಿ ಮಾರ್ಗೋಪಾಯ ಕಂಡುಕೊಳ್ಳಬೇಕು. ವನ್ಯ ಜೀವಿಗಳಿಂದ ಹಾಳಾದ ಬೆಳೆ, ಜೀವ ಹಾನಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರವನ್ನು ಸರಿಯಾದ ಸಮಯಕ್ಕೆ ನೊಂದ ಕುಟುಂಬಗಳಿಗೆ ವಿತರಿಸಬೇಕು ” ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ” ನಮ್ಮ ಭಾಗದಲ್ಲಿ ಆನೆ ಉಪಟಳ ಹೆಚ್ಚಿದ್ದು ರೈಲ್ವೇ ಬ್ಯಾರೀಕೆಡ್ ಅಗತ್ಯವಿದೆ. ಇದಕ್ಕಾಗಿಯೇ ಹಲವು ಬಾರಿ ಹೋರಾಟ ಮಾಡಿದ್ದೇವೆ. 8ಕಿಮೀ ರೈಲ್ವೇ ಕಂಬಿ ಅಳವಡಿಕೆ ಕಾರ್ಯ ಇದುವರೆಗೆ ಆಗಲಿಲ್ಲ, ಹಾಗೆಯೇ ಉಳಿದಿದೆ. ಇವತ್ತು ರೈತ ಪ್ರಾಣಿ ಹಾವಳಿ ನಡುವೆಯೂ ತನ್ನ ಪ್ರಾಣದ ಹಂಗು ತೊರೆದು ದುಡಿಮೆ ಮಾಡುತ್ತಿದ್ದಾನೆ. ಇದರ ಜೊತೆಗೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾದ ಪರಿಸ್ಥಿತಿ. ಕೋತಿಗಳ ಸಂಖ್ಯೆ ಹೆಚ್ಚಿದ್ದು ತೋಟದಲ್ಲಿ ಹತೋಟಿ ಮಾಡಲು ಆಗುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದು ಸರಿಯಾದ ನಡುವಳಿಕೆಯಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸಹ ರೈತರ ಮಕ್ಕಳೇ ಎನ್ನುವುದನ್ನು ಮರೆತಿದ್ದೀರಿ. ರೈತರ ಬಗ್ಗೆ ಹಗುರತೆ ಬಿಟ್ಟು ಕೆಲಸ ಮಾಡುವಂತೆ ಕಿಡಿಕಾರಿದರು.”

ಅರಣ್ಯ ಉಪ ಸಂರಕ್ಷಣಾಧಿಕಾರಿ ಸೀಮಾ ಅವರು ಮನವಿ ಸ್ವೀಕರಿಸಿ ಆಗಸ್ಟ್.11 ರಂದು ರೈತ ಮುಖಂಡರೊಂದಿಗೆ ಸಭೆ ಆಯೋಜಿಸಿ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ಮಾಡುವುದಾಗಿ ಹೇಳಿದರು.

ಸಂವಿಧಾನ ವೃತ್ತದಿಂದ ಕಲ್ಪತರು ವೃತ್ತ, ಬಸ್ ನಿಲ್ದಾಣದ ಮಾರ್ಗವಾಗಿ ಹಳೇ ಸೇತುವೆ ಮೂಲಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಹಕ್ಕೋತ್ತಾಯ ಮಂಡಿಸಿದರು.

ಪ್ರತಿಭಟನೆ ಲೈವ್ ವೀಕ್ಷಿಸಿ : https://www.youtube.com/live/cEnCEIKpmgs?si=RqN_jmwReI9e9YM9

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನೇತ್ರಾವತಿ, ಪ್ರಗತಿಪರ ಸಂಘಟನೆ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಅಗ್ರಹಾರ ರಾಮಕೃಷ್ಣ, ಚಿಕ್ಕ ಹುಣಸೂರು ರಾಜು, ಸಿಪಿಐಎಂ ಮುಖಂಡ ಕಲ್ಕುಣಿಕೆ ಬಸವರಾಜು, ಅತ್ತಿಕುಪ್ಪೆ ಸಿದ್ದೇಶ್, ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್, ತಾಲ್ಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಮಹದೇವ ನಾಯಕ, ಮಲ್ಲೇಶ್, ಉಂಡುವಾಡಿ ಸಿ ಚಂದ್ರೆಗೌಡ,
ಮೋದೂರು ಶಿವಣ್ಣ,ನಂದೀಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಹಕ್ಕೋತ್ತಾಯ:

  • ಕಾಡಾನೆ ಹಾವಳಿಯನ್ನು ತಪ್ಪಿಸಲು ಕಾಡಂಚಿನ ಪ್ರದೇಶದಲ್ಲಿ ಉಳಿದಿರುವ ರೈಲು ಕಂಬಿಯನ್ನು ಅಳವಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
  • ಕಾಡಾನೆ-ಹುಲಿ-ಚಿರತೆ ಹಾವಳಿಯನ್ನು ನಿಯಂತ್ರಿಸಲು ಪರಿಣಿತರು ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ಹೆಚ್ಚಿನ ಸಿಬ್ಬಂದಿ ತಂಡವನ್ನು ರಚಿಸಬೇಕು. ವಲಯ ಅರಣ್ಯ ವನ್ಯಜೀವಿ ವಿಭಾಗಗಳ ತಾರತಮ್ಯಗಳ ನೀತಿಯನ್ನು ಬಿಟ್ಟು ಜಂಟಿ ಕಾರ್ಯಾಚರಣೆಯಿಂದ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವುದು.
  • ಕಾಡಾನೆ ಮತ್ತು ಹುಲಿ ಹಾವಳಿಯಿಂದ ಪ್ರಾಣ ಹಾನಿಯಾದಲ್ಲಿ 25 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಖಾಯಂ ಸರ್ಕಾರಿ ಉದ್ಯೋಗ ದೊರಕಿಸಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸಬೇಕು.
  • ಕಾಡಾನೆ ಹಾವಳಿಯಿಂದ ಫಸಲು ನಷ್ಟವಾದಲ್ಲಿ ವೈಜ್ಞಾನಿಕ ಪರಿಹಾರ ನೀಡಬೇಕು. ಹಂದಿ ಮತ್ತು ಕೋತಿಗಳಿಂದಲೂ ಫಸಲು ನಷ್ಟವಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು. ಹಾಗೂ ಕಳೆದ 2 ವರ್ಷಗಳಿಂದ ಕಾಡುಪ್ರಾಣಿಯಿಂದ ಜಾನುವಾರು ಹಾಗೂ ಆಡುಕುರಿಗಳಿಗೆ ಪರಿಹಾರದ ಹಣ ನೀಡದೇ ಇರುವುದರಿಂದ ತಕ್ಷಣ ಬಿಡುಗಡೆ ಮಾಡಬೇಕು.
  • ಕಾಡಂಚಿನ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು.
  • ವನ್ಯಜೀವಿ ವಿಭಾಗದಿಂದ ಪ್ರಾಣಿ ರಕ್ಷಣೆ ಹಾಗೂ ಅರಣ್ಯ ರಕ್ಷಣೆಗಾಗಿ ಕಳೆದ 15 ವರ್ಷಗಳಿಂದ ECO ಡೆವಲಪ್‌ಮೆಂಟ್ ಸಮಿತಿಯನ್ನು ರಚಿಸಿ ಕಾಡಂಚಿನ ವನ್ಯಜೀವಿ ಮತ್ತು ಕಾಡಿಗೆ ಮಾರಕವಾಗಬಾರದೆಂದು ಹಲವಾರು ಸವಲತ್ತುಗಳನ್ನು ಗ್ರಾಮಗಳಿಗೆ ನೀಡಿ ಅರಣ್ಯ ಇಲಾಖೆಯು ಸಮಿತಿಯ ಸಹಕಾರದೊಂದಿಗೆ ಕಾರ್ಯಚಟುವಟಿಕೆಗೆ ಬಳಕೆಯಾಗುತ್ತಿದ್ದ ಈ ಸಮಿತಿಯನ್ನು ಇಂದು ಬಳಕೆ ಮಾಡಿಕೊಳ್ಳದೆ ಈ ಸಮಿತಿಯ ಹೆಸರಿನಲ್ಲಿದ್ದ ಲಕ್ಷಾಂತರ ಠೇವಣಿ ಹಣ ಬ್ಯಾಂಕಿಗೆ ಜಮಾಗೊಂಡಿದ್ದು, ಈ ಹಣವು ಯಾವುದಕ್ಕೂ ಬಳಕೆಯಾಗದೆ ಉಳಿಸಿಕೊಂಡಿದ್ದಾರೋ ಅಥವಾ ವ್ಯಯ ಮಾಡಿದ್ದಾರೋ ತಿಳಿಯದು. ಆದ್ದರಿಂದ ಈ ಸಮಿತಿಯನ್ನು ಪುನರ್‌ರಚಿಸಬೇಕೆಂದು ಒತ್ತಾಯಿಸುತ್ತೇವೆ.
  • ವಲಯ ಅರಣ್ಯ ವತಿಯಿಂದ ರಚನೆಯಾಗಿರುವ ಗ್ರಾಮ ಅರಣ್ಯ ಸಮಿತಿಗಳಿದ್ದು, ಇವುಗಳ ವ್ಯಾಪ್ತಿಯು ಗ್ರಾಮಗಳ ಅರಣ್ಯ ಅಭಿವೃದ್ಧಿಗೆ ಶ್ರಮಿಸುವ ಸಮಿತಿಗಳನ್ನು ಇಲಾಖೆಯು ಕಾರ್ಯಚಟುವಟಿಕೆಗೆ ತೊಡಗಿಸಿಕೊಳ್ಳದೆ ಈ ಅರಣ್ಯ ಸಮಿತಿಯಲ್ಲಿ ಉತ್ಪನ್ನವಾಗುವ ಫಸಲುಗಳನ್ನು ಹರಾಜು ಮಾಡದೆ, ಹಲವಾರು ವರ್ಷಗಳಿಂದ ಒಣಗಿ ಹೋಗಿರುವ ಮರಗಳನ್ನು ಹರಾಜು ಮಾಡದೆ ಇಲಾಖೆ ಮತ್ತು ಸಮಿತಿಗೆ ಬರುವ ಆದಾಯಗಳನ್ನು ನಷ್ಟ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಯಾವುದೇ ರೀತಿಯ ಅನುಮತಿ ಕೊಡದೆ ಸಮಿತಿ ಮತ್ತು ಸರ್ಕಾರಕ್ಕೆ ನಮ್ಮ ಮಾಡುತ್ತಿದ್ದಾರೆ. ಕೂಡಲೇ ಅರಣ್ಯ ಸಮಿತಿಯು ಕಾರ್ಯಚಟುವಟಿಕೆಗೆ ಸಹಕಾರ ನೀಡಬೇಕು.
  • ಸರ್ಕಾರವು ರೈತರ ಜಮೀನಿಗೆ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೀಡುತ್ತಿದ್ದು, ಇದಕ್ಕೆ ಸಹಾಯಧನವಾಗಿ ಕೊಡುತ್ತಿದ್ದ ಹಣವು 2019 ರಿಂದ 2025 ರವರೆಗೆ ಸಹಾಯಧನ ನೀಡಿರುವುದಿಲ್ಲ. ಅರಣ್ಯ ಇಲಾಖೆ ಕೂಡಲೇ ರೈತರಿಗೆ ಪ್ರೋತ್ಸಾಹಧನವನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸುತ್ತೇವೆ.
  • ತಮ್ಮಡಹಳ್ಳಿ ಗ್ರಾಮ ಸರ್ವೆ ನಂಬರ್ 37 ರಲ್ಲಿ ಸುಮಾರು 850 ಎಕರೆ ಭೂಮಿಯನ್ನು ಸುಮಾರು 50-60 ವರ್ಷಗಳಿಂದಲೂ ತಮ್ಮಡಹಳ್ಳಿ, ನಾಗನಹಳ್ಳಿ, ಕೊತ್ತೇಗಾಲ, ಕಲ್ಲಹಳ್ಳಿ, ಯಶೋಧರಪುರ ಹಾಗೂ ಕಲ್ಕುಣಿಕೆ ಈ ಗ್ರಾಮಗಳ ರೈತರ ಜಮೀನಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾ ಕಾರಣ ಸರ್ವೆ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಈ ಭೂಮಿಯನ್ನು ಯಾವುದೇ ರೀತಿ ಸ್ಕೆಚ್ ಹಾಗೂ ದುರಸ್ಥಿ ಮಾಡಕೂಡದು ಎಂದು ನಿರ್ದೇಶನ ಕೊಟ್ಟಿರುತ್ತಾರೆ. ಇದೇ ರೀತಿ ಕಲ್ಲಹಳ್ಳಿ ಗ್ರಾಮದ ಸರ್ವೆ ನಂಬ‌ರ್ 106 ರಲ್ಲಿ ಕೂಡ 150 ಎಕರೆ ಜಮೀನನ್ನು ರೈತರು 60-70 ವರ್ಷಗಳಿಂದಲೂ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಈ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸದೆ ದುರಸ್ತು ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುತ್ತಾರೆ. ಅರಣ್ಯ ಇಲಾಖೆಯವರು ಈ ಭೂಮಿಯ ವಿವಾದವನ್ನು ಇತ್ಯರ್ಥಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
  • ಹೆಚ್.ಡಿ ಕೋಟೆ ತಾಲ್ಲೂಕು ಅಣ್ಣೂರು ಗ್ರಾಮದ ಸರ್ವೆ ನಂಬರ್ 36 ರಲ್ಲಿ ಒಟ್ಟು 618.06 ಎಕರೆ ಪೈಕಿ 318.06 ಎಕರೆ ಅರಣ್ಯ ಇಲಾಖೆಗೆ ಸೇರಿದ್ದು, ಉಳಿಕೆ 300-00 ಎಕರೆ ರೆವಿನ್ಯೂ ಲ್ಯಾಂಡ್ ಆಗಿರುತ್ತದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿರುತ್ತಾರೆ. ವೀರನಹೊಸಹಳ್ಳಿ ಅರಣ್ಯ ಇಲಾಖೆಗೆ ಅಂತಿಮಗೊಳಿಸಿ ಎಂದು ತಿಳಿಸಿದರೂ ಕೂಡ ಇವರುಗಳು ಗಮನಹರಿಸಿಲ್ಲ. ಇದನ್ನು ಕೂಡಲೇ ಇತ್ಯರ್ಥಗೊಳಿಸಬೇಕಾಗಿ ವಿನಂತಿ.
  • ಅರಣ್ಯದೊಳಗೆ ಜಾನುವಾರುಗಳನ್ನು ಮೇಯಿಸಲು ಸರ್ಕಾರ ನಿರ್ಬಂಧಿಸಿದ ಆದೇಶ ಹೊರಡಿಸಿರುವುದನ್ನು ಹಿಂಪಡೆಯಬೇಕು ಹಾಗೂ ಹೈಕೋರ್ಟ್ ಆದೇಶ ಸರ್ಕಾರ ಪಾಲಿಸಿ ನಾಗರಹೊಳೆ ಕಾಡಿಂದ ಹೊರ ಹಾಕಿರುವ 3418 ಕುಟುಂಬಗಳಿಗೆ ಕೂಡಲೇ ಪುನರ್ವಸತಿ ಕಲ್ಪಿಸಿಕೊಡಬೇಕು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X