ಉಡುಪಿ | ಬನ್ನಂಜೆಯಲ್ಲಿ ಹೆದ್ದಾರಿ ಡಿವೈಡರ್ ಒಡೆದ ಹಾಕಿದ ಪ್ರಕರಣ, ಬಿಜೆಪಿ ಭ್ರಷ್ಚಚಾರಕ್ಕೆ ಹಿಡಿದ ಕೈ ಕನ್ನಡಿ – ಬನ್ನಂಜೆ ಸುರೇಶ್ ಶೆಟ್ಟಿ ಆಕ್ರೋಶ

Date:

Advertisements

ಉಡುಪಿ ನಗರದ ಬನ್ನಂಜೆಯ ಬಟ್ಟೆಯಂಗಡಿ ಮಾಲೀಕನಿಗಾಗಿ ಉಡುಪಿ ನಗರಸಭೆ ರಾಷ್ಟ್ರೀಯ ಹೆದ್ದಾರಿಯ ಡಿವೈಡರನ್ನೇ ಒಡೆದು ಹಾಕಿರುವುದು ಬಿಜೆಪಿಯ ಭ್ರಷ್ಟಾಚಾರ ಹಿಡಿದ ಕೈ ಕನ್ನಡಿಯಾಗಿದೆ ಎಂದು ನಗರ ಸಭೆ ನಾಮನಿರ್ದೇಶಿತ ಸದಸ್ಯ ಬನ್ನಂಜೆ ಸುರೇಶ್ ಶೆಟ್ಟಿ ಅರೋಪಿಸಿದ್ದಾರೆ.

ಕಳೆದ ಎರಡು ವರ್ಷ ಗಳಿಂದ ಬನ್ನಂಜೆ ಬಟ್ಟೆ ಮಳಿಗೆಯಿಂದ ಸ್ಥಳೀಯರಿಗೆ ಭಾರೀ ತೊಂದರೆ ಎದುರಾಗಿದೆ. ಹೆದ್ದಾರಿಗೆ ಬಿಡಬೇಕಾದ ಜಾಗದಲ್ಲಿ ಗಿಡಗಳನ್ನು ನೆಟ್ಟು ಅಕ್ರಮಿಸಿಕೊಂಡಿದ್ದಾರೆ. ಇದನ್ನು‌ ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರ ವಶ ಪಡಿಸಿಕೊಂಡು ರಸ್ತೆ ಅಗಲೀಕರಣ ಗೊಳಿಸುವ ಬದಲು, ಬಟ್ಟೆ ಅಂಗಡಿಗೆ ಬರುವ ವಾಹನಗಳಿಗೆ ಸುಲಭವಾಗಲು ಹೆದ್ದಾರಿಯ ಡಿವೈಡರ್ ಒಡೆದಿರುವುದು ನಾಚೀಕೆಗೆಡಿತನ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ನಗರಸಭೆ ಬಿಜೆಪಿ ಆಡಳಿತ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ‌. ಸಾರ್ವಜನಿಕರ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಜನ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣದಲ್ಲಿ ನಗರಸಭೆ ಆಡಳಿತ ಸಂಪೂರ್ಣ ವಾಗಿ ಶಾಮೀಲಾಗಿದೆ.

Advertisements

ಬನ್ನಂಜೆಯಿಂದ ನಿಟ್ಟೂರಿಗೆ ಹೊಗುವ ಜನರಿಗೆ ಈ ಬಟ್ಟೆ ಅಂಗಡಿ ಬಂದ ಬಳಿಕ ಭಾರೀ ಸಮಸ್ಯೆ ಉಂಟಾಗಿದೆ. ಹೀಗಾಗಿ ಜನರಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ಬಟ್ಟೆ ಅಂಗಡಿ ಮುಂಭಾಗದ ಸೆಟ್ ಬ್ಯಾಕ್ ಜಾಗವನ್ನು ಅಗಲೀಕರಣ ಮಾಡಿಕೊಡಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಅಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಕಾನೂನುಬಬಾಹಿರವಾಗಿ ಸೆಟ್ ಬ್ಯಾಕ್ ಜಾಗದಲ್ಲಿ ಕೆಫೆಗಳನ್ನು ನಿರ್ಮಿಸಿದ್ದು ಇದನ್ನು ಕೂಡ ನಗರ ಸಭೆ ತೆರವುಗೊಳಿಸುವಂತೆ ಅಗ್ರಹಿಸಿದ್ದಾರೆ.

ನಗರಸಭೆ ಆಡಳಿತಕ್ಕೆ ಬಟ್ಟೆ ಮಾಲೀಕನ ಮೇಲೆ ಇರುವ ಪ್ರೀತಿ ಬಡ ಅಂಗಡಿಗಳ ಮೇಲು ಇರಲಿ, ಅದಿ ಉಡುಪಿಯಿಂದ ಮಣಿಪಾಲದವರೆಗೂ ಇರುವ ಬಡ ಕಿರಾಣಿ ಅಂಗಡಿಗಳ ಮುಂದಿರುವ ಡಿವೈಡರ್ ಗಳನ್ನು ತೆರವುಗೊಳಿಸಿ ಬಡವರಿಗೂ ಸಹಾಯ ಮಾಡಿ ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X