ಔಷಧೀಯ ಗುಣಗಳನ್ನು ಹೊಂದಿರುವ ಮಲೆನಾಡು ಗಿಡ್ಡ ದೇಸಿ ತಳಿಗಳನ್ನು ಉಳಿಸಿ ಅವುಗಳನ್ನು ನಾವು ಬೆಳೆಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಸಹಯೋಗದಲ್ಲಿ ಅಮೃತಸಿರಿ ಯೋಜನೆಯಡಿ ರೈತರಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಎಲ್ಲರೂ ಒಂದು ಕೂಡಿಗೊಂಡು ವ್ಯವಸಾಯ ಮಾಡುತ್ತಿದರು. ಅ ಸಮಯದಲ್ಲಿ ದನದ ಅವಶ್ಯಕತೆ ತುಂಬಾನೇ ಇತ್ತು.
ಇದನ್ನೂ ಓದಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾ ಸಮ್ಮೇಳನ
ಈಗ ಕೂಡು ಕುಟುಂಬವೂ ಇಲ್ಲ, ಗದ್ದೆ ವ್ಯವಸಾಯವೂ ಇಲ್ಲ. ವಾಣಿಜ್ಯ ಬೆಳೆ ಅಡಕೆ ಬೆಳೆಯುವುದರಿಂದ ಸ್ವದೇಸಿ ದನ ಸಾಕಾಣೆಯನ್ನು ಕಡೆಗಣಿಸುತ್ತಿದ್ದೇವೆ. ಕೃಷಿ ಕಾರ್ಯಗಳಿಗೆ ಸುಲಭದಲ್ಲಿ ಸಿಗುವ ರಾಸಾಯನಿಕ ಗೊಬ್ಬರ ಹಾಕಿ ಸುಲಭದಲ್ಲಿ ದುಡ್ಡು ಬರುವ ಹಾಗೆ ಯೋಜನೆ ರೂಪಿಸಿಕೊಂಡಿದ್ದೇವೆ. ಪಾರಂಪರಿಕ ಕೃಷಿ ಪದ್ದತಿಯನ್ನು ಮರೆತು ಸುಲಭದಲ್ಲಿ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ನಾವು ಮಲೆನಾಡು ಗಿಡ್ಡ ತಳಿಗಳನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ ಎಂದರು.
