ಹುಣಸಗಿ ತಾಲ್ಲೂಕಿನ ಬನ್ನಟ್ಟಿ ಗ್ರಾಮದಲ್ಲಿ ಹಾವು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.
ಶ್ರೀದೇವಿ ಗಾಳಣ್ಣ(11) ಮೃತ ಬಾಲಕಿ. ಕಳೆದ ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಹೊಲದಲ್ಲಿ ಮೇವು ಕತ್ತರಿಸುತ್ತಿದ್ದಾಗ ಹಾವು ಕಚ್ಚಿತ್ತು. ಕುತ್ತಿಗೆ ಬಲ ಭಾಗಕ್ಕೆ ಹಾವು ಕಚ್ಚಿದ್ದರಿಂದ ಲಿಂಗಸೂಗೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆಂದು ರಾಯಚೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮಧ್ಯಾಹ್ನ ಶ್ರೀದೇವಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಮೃತ ಬಾಲಕಿ ತಾಯಿ ಲಕ್ಷ್ಮಿ ಗಾಳಣ್ಣ ಪಾಟೀಲ ನೀಡಿದ ದೂರಿನನ್ವಯ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗ್ರಾಮಕ್ಕೆ ಗ್ರಾಮ ಆಡಳಿತ ಅಧಿಕಾರಿ ಅಂಬರೀಶ ಮಾಲಗತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಬೀದರ್ | ಪ್ರೇಕ್ಷಕರ ಮನಸೂರೆಗೊಂಡ ʼರಮಾಬಾಯಿ ಅಂಬೇಡ್ಕರ್ʼ ನಾಟಕ