ಕಾಫಿನಾಡಿನಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರೆದಿದ್ದು, ವಾರ ಕಳೆಯುವಷ್ಟರಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಮಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಅಂಡುವಾನೇ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಕಾಡಾನೆ ದಾಳಿಯಿಂದ ಮೃತ ವ್ಯಕ್ತಿ ಸುಬ್ರಾಯ ಗೌಡ (65), ಜುಲೈ ತಿಂಗಳ ನಾಲ್ಕು ದಿನದ ಹಿಂದಷ್ಟೇ ತಾಲೂಕಿನ ಬನ್ನೂರು ಬಳಿ ಅನಿತಾ ಎಂಬ ಕಾರ್ಮಿಕ ಮಹಿಳೆ ಕಾಡಾನೆಯಿಂದ ಸಾವನಪ್ಪಿದ್ದರು. ಈ ಕುರಿತು ರಾತ್ರಿಯೇ, ಸಾರ್ವಜನಿಕರಿಂದ ತಾಲೂಕಿನ ಅರಣ್ಯ ಇಲಾಖೆ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ: ಕಾರ್ಮಿಕ ಮಹಿಳೆ ಸಾವು
ಈ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಅರಣ್ಯ ಮಂತ್ರಿ ಯಾವುದಕ್ಕೂ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ವರ್ತಿಸುತ್ತಿದ್ದಾರೆ. ಆನೆ ದಾಳಿಯಿಂದ ಜನರು ಸಾಯುತ್ತಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.