ತನ್ನ ಜಮೀನಿಗೆ ಹೋಗಲು ದಾರಿ ಮಾಡಿಕೊಡುವಂತೆ ಕಳೆದ ಎರಡು ವರ್ಷದಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಸ್ಪಂದಿಸದಕ್ಕೆ ಬೇಸತ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೈಯಲ್ಲಿ ವಿಷದ ಬಾಟಲಿ, ಹಗ್ಗ ಹಿಡಿದು ತಹಸೀಲ್ ಕಚೇರಿಗೆ ಬಂದ ಪ್ರಸಂಗ ಬಸವಕಲ್ಯಾಣ ನಗರದಲ್ಲಿ ಸೋಮವಾರ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ರೈತ ಪ್ರಶಾಂತ ಲಕಮಾಜಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಒಂದು ಕೈಯಲ್ಲಿ ವಿಷದ ಬಾಟಲಿ, ಮತ್ತೊಂದು ಕೈಯಲ್ಲಿ ಹಗ್ಗ ಹಿಡಿದು ಮಿನಿ ವಿಧಾನಸೌಧ ಬಳಿಯ ತಹಶೀಲ್ ಕಚೇರಿಗೆ ಬಂದು ತಹಸೀಲ್ದಾರ್ ವಿರುದ್ಧ ಕಿಡಿಕಾರಿದ್ದಾರೆ.
ʼಕಳೆದ ಎರಡು ವರ್ಷಗಳಿಂದ ನಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆ ಇದೆ. ಹೊಲಗಳಿಗೆ ಹೋಗುವ ದಾರಿಯಲ್ಲಿ ಸರ್ಕಾರಿ ನಾಲಾ ಇದ್ದು, ಅದರಲ್ಲಿ ಅನ್ಯ ಜಮೀನಿನ ರೈತರು ಪೈಪ್ ಅಳವಡಿಸಿದ್ದು. ಇದರಿಂದ ಕೃಷಿ ಚಟುವಟಿಕೆಗೆ ನಿತ್ಯ ಜಮೀನಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಿ ನಮ್ಮ ಜಮೀನಿಗೆ ಹೋಗಲು ದಾರಿ ಮಾಡಿಕೊಡುವಂತೆ ಹಲವು ಬಾರಿ ತಹಸೀಲ್ದಾರ್ ಕಚೇರಿಗೆ ಅಲೆದಾಡಿದರೂ ತಹಸೀಲ್ದಾರ್ ಅವರು ಸ್ಪಂದಿಸದೆ ದಿನದೂಡುತ್ತಿದ್ದಾರೆʼ ಎಂದು ರೈತ ಪ್ರಶಾಂತ ಲಕಮಾಜಿ ಆರೋಪಿಸಿದರು.
ರೈತ ಪ್ರಶಾಂತ ಮಾಧ್ಯಮದವರೊಂದಿಗೆ ಮಾತನಾಡಿ, ʼನಮ್ಮ ಜಮೀನಿಗೆ ತೆರಳಲು ದಾರಿ ಮಾಡಿಕೊಡುವಂತೆ ನೂರಾರು ಬಾರಿ ಮನವಿ ಸಲ್ಲಿಸಿದರೂ ತಹಸೀಲ್ದಾರ್ ಅವರು ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ. ತಹಸೀಲ್ದಾರ್ ಕಚೇರಿಗೆ ಅಲೆದಾಡಿ ಸಮಸ್ಯೆಗೆ ಪರಿಹಾರ ಸಿಗದಕ್ಕೆ ತುಂಬಾ ನೊಂದಿದ್ದೇನೆ. ತಹಸೀಲ್ದಾರ್ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವೆ. ಇಲ್ಲದಿದ್ದರೆ ಅವರ ಹೆಸರಿನಲ್ಲಿ ಚೀಟಿ ಬರೆದಿಟ್ಟು ನೇಣಿಗೆ ಶರಣಾಗುವೆʼ ಎಂದು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೀದರ್ | ರೈತರಿಗೆ ರಸಗೊಬ್ಬರ ಕೊರತೆ : ಜು.30ರಂದು ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ
ʼ