“ಸಹೋದರಿ ಸೌಜನ್ಯ ಕೊಲೆಯಾಗಿ ಸುಮಾರು ವರ್ಷಗಳ ಕಳೆದಿವೆ ಆದರೆ ಸಹೋದರಿ ಕೊಲೆಗೆ ನ್ಯಾಯ ಸಿಕ್ಕಿಲ್ಲಾ, ಉನ್ನತ ಮಟ್ಟದ ತನಿಖೆ ಆಗುತ್ತಿಲ್ಲಾ ಧರ್ಮಸ್ಥಳದಲ್ಲಿ ಧರ್ಮದ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಕೂಡಲೇ ಸೌಜನ್ಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ” ಭೀಮ್ ಆರ್ಮಿ ಮುಖಂಡರು ಪ್ರತಿಭಟನೆ ನಡೆಸಿದರು.
ವಿಜಯಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಸಮಿತಿ ವತಿಯಿಂದ ಸೌಜನ್ಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಛೇರಿ ವರೆಗೆ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಸ್ಥಾಪಕ ಅಧ್ಯಕ್ಷ ಮಥಿನ್ ಕುಮಾರ ಮಾತನಾಡಿ, “ಸೌಜನ್ಯ ಕೊಲೆ ಪ್ರಕರಣದ ಸಾಕ್ಷ್ಯನಾಶ ಮಾಡಲಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಯಾವ ಹಿಂದೂ ಸಂಘಟನೆಗಳು ಸೌಜನ್ಯ ಪ್ರಕರಣ ಕುರಿತು ಧ್ವನಿ ಎತ್ತದೆ ಇರುವದು ವಿಪರ್ಯಾಸ” ಎಂದರು.
“ಬಾಬಾ ಸಾಹೇಬರ ಹೆಸರಿನಲ್ಲಿ ನಮ್ಮ ಸಂಘಟನೆ ಹುಟ್ಟಿಕೊಂಡಿದೆ. ನೊಂದವರ ಧ್ವನಿಯಾಗಿದೆ. ಕೇವಲ ಇದು ದಲಿತ ಸಂಘಟನೆ ಅಲ್ಲ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವುದೇ ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.
“ಸೌಜನ್ಯ ವಿಷಯದಲ್ಲಿಯೂ ಅಷ್ಟೇ, ನ್ಯಾಯ ಸಿಗುವವರೆಗೂ ಹೋರಾಟ ಮುಡುತ್ತೆವೆ. ಮುಂಬರುವ ದಿನದಲ್ಲಿ ಎಲ್ಲ ಜಿಲ್ಲೆಯ ನಮ್ಮ ಭೀಮ ಆರ್ಮಿ ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ಹೋಗಿ ಪ್ರತಿಭಟನೆ ಮಾಡಲಾಗುವದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಭೀಮ ಆರ್ಮಿ ಮುಖಂಡರು ಮಾರುತಿ ಕುದರಿ, ಸೈಪನಸಾಬ ಕೊಂಡಿ, ಅಪ್ಪು ಮುಲ್ಲಾ, ಹುಸನಪ್ಪ ಚಲವಾದಿ, ಪ್ರೇಮಕುಮಾರ, ಉತ್ತಮ ಕಟ್ಟಿಮನಿ, ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.