“ಪರಿಸರ ಸಂರಕ್ಷಣೆ ಪತಿಯೊಬ್ಬರ ಜವಾಬ್ದಾರಿಯಾಗಿದೆ. ಏಕೆಂದರೆ ಭೂಮಿಯನ್ನು ಸುರಕ್ಷಿತವಾಗಿ ಆರೋಗ್ಯಕರವಾಗಿಡಲು ನಮಗೆ ಸಹಾಯ ಮಾಡುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಭೂಮಿ ಮಾಲಿನ್ಯ ಮುಕ್ತ ವಾತಾವರಣವಿತ್ತು. ಅದರಂತೆ ಪರಿಸರ ನಮಗಾಗಿ ನಮ್ಮ ಉಳಿವಿಗಾಗಿ ಎಂಬುದನ್ನು ಅರಿತು ಉಳಿಸಿ ಬೆಳೆಸೋಣ. ಪರಿಸರ ಸಂರಕ್ಷಣೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ” ಎಂದು ರೋಷನಿ ಸಂಸ್ಥೆಯ ಸಂಯೋಜಕರು ಕೆ. ಎಫ್. ನಾಯ್ಕರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಮ ಪಂಚಾಯಿತಿ ಹಾಗೂ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಕಿ ಎಪ್. ನಾಯ್ಕರ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಯರು ಎಮ್ ಎನ್ ಬಡಿಗೇರ್ ಮಾತನಾಡಿ, “ಭೂಮಿಯ ಮೇಲೆ ಪರಿಸರ ಇಲ್ಲದೇ ಇದ್ದರೆ ಏನಾಗುತ್ತದೆ, ಯಾವ ತರಹ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಗೊತ್ತಿದೆ. ಪರಿಸರ ಇಲ್ಲದೇ ಮಳೆ ಬೆಳೆ ಆಗಲು ಸಾಧ್ಯವಿಲ್ಲ” ಎಂದು ಹೇಳಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಜಗದೀಶ ಕಳವಾರ ಮಾತನಾಡಿ, “ಪರಿಸರವನ್ನು ಕಾಪಾಡಬೇಕು. ಗಿಡ ಮರಗಳನ್ನು ಬೇಳಸಿಬೇಕು. ಪ್ರಕೃತಿ ನಮಗೆ ಸಹಾಯ ಮಾಡುತ್ತದೆ. ನಮ್ಮ ಮಣ್ಣಿನಲ್ಲಿ ಎಲ್ಲ ತರಹದ ಸಸ್ಯಗಳು ಇವೆ. ಎಲ್ಲವನ್ನು ನಾವು ಬೆಳೆಸಲು ಸಾಧ್ಯವಿಲ್ಲ. ಗಿಡ ಮರಗಳನ್ನು ಚೆನ್ನಾಗಿ ಬೆಳಸಬೇಕು. ಮಕ್ಕಳಲ್ಲಿ ಪರಿಸರ ಕಾಳಜಿ ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿ ಮಾಡಲು ಮುಂದಾಗಬೇಕು” ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವಂದಪ್ಪ ಹುಲ್ಲಾಳ ಮಾತನಾಡಿ, “ಪರಿಸರ ನಮ್ಮ ಜೀವನಾಡಿ. ನಾವು ಅವನ್ನು ಉಳಿಸಿ ಬೆಳಸಬೇಕಿದೆ. ಪರಿಸರಕ್ಕೆ ಸಂಬಂದಿಸಿದಂತೆ ಶಾಲೆಗೆ ಸಹಾಯ ಮಾಡಲ್ಲಾ ಸದಾ ಸಿದ್ದರಿದ್ದೇವೆ” ಎಂದು ಹೇಳಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಿದಾನಂದಯ್ಯ ಹಿರೇಮಠ ಮಾತನಾಡಿ, “ಪ್ರಕೃತಿ ದೇವರು ನಮಗೆ ಕೊಟ್ಟಿರುವ ವರ. ಎಲ್ಲವನ್ನು ತಿಳಿದಿರುವ ನಾವು ಪ್ರಕೃತಿ ವಿರುದ್ಧ ನಡೆಯುತ್ತೇವೆ. ಈ ಸುಂದರ ನೆಲ ಜಲ ಉಳಿಸಿಕೊಳ್ಳೋಣ, ಬೆಳೆಸೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಿಇಓ ಭರತ್ ಎಸ್ ಭೇಟಿ
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಸದಸ್ಯರು ಸುರೇಶ ಮರಡಿ, ಮಂಜುನಾಥ ಅಸಾದಿ, ಗ್ರಾಮ ಪಂಚಾಯಿತಿ ಸದಸ್ಯರು ಮಂಜಪ್ಪ ತಳವಾರು, ಸುವರ್ಣಮ್ಮ ಪೂಜಾರ, ಜನವೇದಿಕೆ ಮುಖಂಡರು ಮಾರ್ಥಂಡಪ್ಪ ತಳವಾರ, ಗೀತಾಂಜಲಿ ತಳವಾರ, ರೋಷಣಿ ಸಂಸ್ಥೆಯ ಸಂಯೋಜಕರು ನಿರ್ಮಲ ಮಡಿವಾಳರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕರು ಪ್ರಭು ಅವರು ನಿರೂಪಿಸಿದರು. ನಾಗರಾಜ ಸ್ವಾಗತಿಸಿದರು. ಹನುಮಂತಪ್ಪನವರು ವಂದಿಸಿದರು.