ಹಾವೇರಿ | ಪರಿಸರ ಸಂರಕ್ಷಣೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ: ಕೆ. ಎಫ್. ನಾಯ್ಕರ

Date:

“ಪರಿಸರ ಸಂರಕ್ಷಣೆ ಪತಿಯೊಬ್ಬರ ಜವಾಬ್ದಾರಿಯಾಗಿದೆ. ಏಕೆಂದರೆ ಭೂಮಿಯನ್ನು ಸುರಕ್ಷಿತವಾಗಿ ಆರೋಗ್ಯಕರವಾಗಿಡಲು ನಮಗೆ ಸಹಾಯ ಮಾಡುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಭೂಮಿ ಮಾಲಿನ್ಯ ಮುಕ್ತ ವಾತಾವರಣವಿತ್ತು. ಅದರಂತೆ ಪರಿಸರ ನಮಗಾಗಿ ನಮ್ಮ ಉಳಿವಿಗಾಗಿ ಎಂಬುದನ್ನು ಅರಿತು ಉಳಿಸಿ ಬೆಳೆಸೋಣ. ಪರಿಸರ ಸಂರಕ್ಷಣೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ” ಎಂದು ರೋಷನಿ ಸಂಸ್ಥೆಯ ಸಂಯೋಜಕರು ಕೆ. ಎಫ್. ನಾಯ್ಕರ ಹೇಳಿದರು.

- Advertisement -

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಮ ಪಂಚಾಯಿತಿ ಹಾಗೂ ರೋಶನಿ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಕಿ ಎಪ್. ನಾಯ್ಕರ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಶಾಲಾ ಮುಖ್ಯೋಪಾಧ್ಯಯರು ಎಮ್ ಎನ್ ಬಡಿಗೇರ್ ಮಾತನಾಡಿ, “ಭೂಮಿಯ ಮೇಲೆ ಪರಿಸರ ಇಲ್ಲದೇ ಇದ್ದರೆ ಏನಾಗುತ್ತದೆ, ಯಾವ ತರಹ ಪರಿಣಾಮ ಬೀರುತ್ತದೆ ಎಂಬುದು ಜನರಿಗೆ ಗೊತ್ತಿದೆ. ಪರಿಸರ ಇಲ್ಲದೇ ಮಳೆ ಬೆಳೆ ಆಗಲು ಸಾಧ್ಯವಿಲ್ಲ” ಎಂದು ಹೇಳಿದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಜಗದೀಶ ಕಳವಾರ ಮಾತನಾಡಿ, “ಪರಿಸರವನ್ನು ಕಾಪಾಡಬೇಕು. ಗಿಡ ಮರಗಳನ್ನು ಬೇಳಸಿಬೇಕು. ಪ್ರಕೃತಿ ನಮಗೆ ಸಹಾಯ ಮಾಡುತ್ತದೆ. ನಮ್ಮ ಮಣ್ಣಿನಲ್ಲಿ ಎಲ್ಲ ತರಹದ ಸಸ್ಯಗಳು ಇವೆ. ಎಲ್ಲವನ್ನು ನಾವು ಬೆಳೆಸಲು ಸಾಧ್ಯವಿಲ್ಲ. ಗಿಡ ಮರಗಳನ್ನು ಚೆನ್ನಾಗಿ ಬೆಳಸಬೇಕು. ಮಕ್ಕಳಲ್ಲಿ ಪರಿಸರ ಕಾಳಜಿ ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿ ಮಾಡಲು ಮುಂದಾಗಬೇಕು” ಎಂದು ಹೇಳಿದರು.

IMG 20250801 155512

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವಂದಪ್ಪ ಹುಲ್ಲಾಳ ಮಾತನಾಡಿ, “ಪರಿಸರ ನಮ್ಮ ಜೀವನಾಡಿ. ನಾವು ಅವನ್ನು ಉಳಿಸಿ ಬೆಳಸಬೇಕಿದೆ. ಪರಿಸರಕ್ಕೆ ಸಂಬಂದಿಸಿದಂತೆ ಶಾಲೆಗೆ ಸಹಾಯ ಮಾಡಲ್ಲಾ ಸದಾ ಸಿದ್ದರಿದ್ದೇವೆ” ಎಂದು ಹೇಳಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ  ಚಿದಾನಂದಯ್ಯ ಹಿರೇಮಠ ಮಾತನಾಡಿ, “ಪ್ರಕೃತಿ ದೇವರು ನಮಗೆ ಕೊಟ್ಟಿರುವ ವರ. ಎಲ್ಲವನ್ನು ತಿಳಿದಿರುವ ನಾವು ಪ್ರಕೃತಿ ವಿರುದ್ಧ ನಡೆಯುತ್ತೇವೆ. ಈ ಸುಂದರ ನೆಲ ಜಲ ಉಳಿಸಿಕೊಳ್ಳೋಣ, ಬೆಳೆಸೋಣ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಿಇಓ ಭರತ್ ಎಸ್ ಭೇಟಿ

ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಸದಸ್ಯರು ಸುರೇಶ ಮರಡಿ, ಮಂಜುನಾಥ ಅಸಾದಿ, ಗ್ರಾಮ ಪಂಚಾಯಿತಿ ಸದಸ್ಯರು ಮಂಜಪ್ಪ ತಳವಾರು, ಸುವರ್ಣಮ್ಮ ಪೂಜಾರ, ಜನವೇದಿಕೆ ಮುಖಂಡರು ಮಾರ್ಥಂಡಪ್ಪ ತಳವಾರ, ಗೀತಾಂಜಲಿ ತಳವಾರ, ರೋಷಣಿ ಸಂಸ್ಥೆಯ ಸಂಯೋಜಕರು ನಿರ್ಮಲ ಮಡಿವಾಳರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  ಶಿಕ್ಷಕರು ಪ್ರಭು ಅವರು ನಿರೂಪಿಸಿದರು. ನಾಗರಾಜ ಸ್ವಾಗತಿಸಿದರು. ಹನುಮಂತಪ್ಪನವರು ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರವಾರ, ಕುಮಟಾ, ದಾಂಡೇಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಹಾಗೂ...

ಗದಗ | ಆನಂದಕಂದರ ಸಾಹಿತ್ಯವು ಸಾರ್ವಕಾಲಿಕ ಮೌಲ್ಯ ಹೊಂದಿದೆ: ಡಾ. ಅರ್ಜುನ ಗೊಳಸಂಗಿ

ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಜನಪದ ಸೊಗಡನ್ನು ಅಕ್ಷರ ರೂಪಕ್ಕಿಳಿಸಿದ ಆನಂದಕಂದರ...

ರಾಯಚೂರು | ಕಾರು ಪಲ್ಟಿ: ಕೃಷ್ಣಾ ಭಾಗ್ಯ ಜಲನಿಗಮದ ಸಹಾಯಕ ಎಂಜಿನಿಯರ್ ಸಾವು

ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪುರ ವಲಯದ...

ರಾಯಚೂರು | ಯರಮರಸ್ ವಿದ್ಯುತ್ ಘಟಕ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡಲು ಆಗ್ರಹ

ಯರಮರಸ್ ವಿದ್ಯುತ್ ಘಟಕಕ್ಕೆ ಭೂಮಿ ಕಳೆದುಕೊಂಡ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡದೇ...