ಬೆಳಗಾವಿ ನಗರದ ಅಜಮ್ ನಗರದಲ್ಲಿ ನಡುಹಗಲೇ ವೃದ್ಧೆಯೊಬ್ಬರ ಸರ ಎಗರಿಸಿ ಕಳ್ಳರು ಪರಾರಿಯಾದ ಘಟನೆ ನಡೆದಿದೆ.
ಪದ್ಮಜಾ ಕುಲಕರ್ಣಿ (75) ಅವರು ಮಧ್ಯಾಹ್ನ 3-4 ಗಂಟೆ ಸುಮಾರಿಗೆ ಮೊಮ್ಮಗನೊಂದಿಗೆ ಕೆಎಲ್‌ಇ ಆಸ್ಪತ್ರೆಯ ಹಿಂಬದಿಯ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಅವರ ಕೊರಳಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾದರು.
ಅಕಸ್ಮಾತ್ ದರೋಡೆ ವೇಳೆ ನೆಲಕ್ಕೆ ಉರುಳಿದ ವೃದ್ಧೆಯ ಕತ್ತು, ಮೊಣಕೈ ಹಾಗೂ ಕಾಲಿಗೆ ಗಾಯಗಳಾಗಿವೆ.
ಘಟನೆ ಕುರಿತು ಮಾಹಿತಿ ಸಿಕ್ಕ ತಕ್ಷಣ ಎಪಿಎಂಸಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.