ಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಕ್ಕೆ ದೂರದಿಂದ ಬರುವ ಪ್ರವಾಸಿಗರಿಗೆ, ಸ್ಥಳೀಯರಿಗೆ ಆನ್ಲೈನ್ ನೋಂದಣಿ ಕಡ್ಡಾಯ ಮಾಡಿರುವುದನ್ನು ಕಂಡಿಸುತ್ತೇವೆಂದು ಎದ್ದೇಳು ಕರ್ನಾಟಕ ಸಂಘಟನೆಯಿಂದ ಶನಿವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ನೋಡಲು ಬೇರೆ ಬೇರೆ ಭಾಗಗಳಿಂದ ಬರುತ್ತಾರೆ. ಹಾಗೆಯೇ, ದತ್ತಾತ್ರೇಯ ಬಾಬಾ ಬುಡನ್ ಗಿರಿ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಕ್ಕೆ ಬರುವವರಿಗೆ ಆನ್ ಲೈನ್ ನೋಂದಣಿ ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪ್ರವಾಸಿಗರಿಗೆ,ಸ್ಥಳೀಯರು, ಆ ಭಾಗದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಜನರಿಗೆ ಹಾಗೂ ಬದುಕು ಕಟ್ಟಿಕೊಳ್ಳಲು ವಲಸೆ ಬಂದಿರುವ ಕಾರ್ಮಿಕರಿಗೆ ತುಂಬ ಸಮಸ್ಯೆಯಾಗುತ್ತದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನಗರ ವ್ಯಾಪ್ತಿಯಲ್ಲೇ ಮೂಲಭೂತ ಸೌಕರ್ಯ ಕೊರತೆ; ಮಲತಾಯಿ ಧೋರಣೆ ಎಂದ ಉಪ್ಪಳ್ಳಿಯ 17ನೇ ವಾರ್ಡ್ ನಿವಾಸಿಗಳು
ಆನ್ ಲೈನ್ ನೋಂದಣಿ ಮಾಡುವವರು ಓದಿದವರು ಹಾಗೂ ನೋಂದಣಿ ಹೇಗೆ ಮಾಡುವುದು ಎಂದು ತಿಳಿದವರಿಗೆ ಮಾತ್ರ, ಓದಲು, ಬರೆಯಲು ಬಾರದವರು ಏನು ಮಾಡಬೇಕು. ಇದನ್ನ ನಾವು ಖಂಡಿಸುತ್ತೇವೆ ಎಂದು ಎದ್ದೇಳು ಕರ್ನಾಟಕ ಸಮಿತಿಯ ಸದಸ್ಯರಾದ ಗೌಸ್ ಮೋಹದ್ದಿನ್ ತಿಳಿದರು. ಈ ವೇಳೆ ಎದ್ದೇಳು ಕರ್ನಾಟಕ ಸಂಘಟನೆಯ ಗಣೇಶ್, ರೀತು, ವೀಣಾ, ದಿವಾಕರ್, ಚಂದ್ರು, ಇಲಿಯಾಸ್, ಪುಟ್ಟಸ್ವಾಮಿ, ಹಾಗೂ ದಸಂಸ ಸಂಘಟನೆಯ ಆಶಾ ಭಾಗವಹಿಸಿದ್ದರು.