ಜನಪ್ರಿಯ ಶಾಸಕರು,ಗೃಹ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ ರವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ಶಿಬಿರವನ್ನು ಏರ್ಪಡಿಸಿಲಾಗಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಡಾ.ಜಿ ಪರಮೇಶ್ವರ್ ಅಭಿಮಾನಿಗಳ ಬಳಗದಿಂದ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಜಿ ಪರಮೇಶ್ವರ ರವರ 74ನೇ ಹುಟ್ಟುಹಬ್ಬದ ಅಂಗವಾಗಿ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಇದೇ ಬುಧವಾರ 6ನೇ ತಾರೀಖು ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಳಗ್ಗೆ 09ರಿಂದ ಸಂಜೆ 5ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾಗಿರುವ ಡಾ.ಜಿ ಪರಮೇಶ್ವರ ರವರ ಆದೇಶದಂತೆ ಅವರ ಜನ್ಮ ದಿನದಂದು ಇವರದೇ ಸಿದ್ಧಾರ್ಥ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ, ಇದರ ಸದುಪಯೋಗ ಪಡೆದುಕೊಳ್ಳುವ ಈ ಶಿಬಿರದಲ್ಲಿ ಹಳ್ಳಿ ಜನತೆ ಹೆಚ್ಚು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳುವಂತ್ತಾಗಬೇಕು ಜೊತೆಗೆ ಈ ಶಿಬಿರ ತಪಾಸಣೆಗೆ ಕಡ್ಡಾಯವಾಗಿ ಪಡಿತರ ಕಾರ್ಡ್, ಆಧಾರ್ ಕಾರ್ಡ್ ತರುವಂತೆ ತಿಳಿಸಿದರು..
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಮಾತನಾಡಿ ಪ್ರತಿಯೊಬ್ಬ ಮನುಷ್ಯನು ಆರೋಗ್ಯವಂತವಾಗಿರಬೇಕು, ಆರೋಗ್ಯವೇ ಭಾಗ್ಯ ಎಂಬುದು ನಮಗೆಲ್ಲ ತಳಿದಿದೆ, ಎಲ್ಲರಿಗೂ ಈ ಶಿಬಿರ ಉಪಯುಕ್ತವಾಗಲಿದ್ದು, ತಪಾಸಣೆ ನಂತರ ಹೆಚ್ವಿನ ಚಿಕಿತ್ಸೆಗೆ ಸಿದ್ದಾರ್ಥ ವೈದ್ಯಕೀಯ ಸಂಸ್ಥೆಯಿಂದ ಶಸ್ತ್ರ ಚಿಕಿತ್ಸೆ ಉಚಿತವಾಗಿ ಸಿಗಲಿದೆ ಎಂದರು.
ವಿಶೇಷವಾಗಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ರಕ್ತದಾನ ಮಾಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಟಾಧಿಕಾರಿ, ಸಿಇಓ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು, ಕಾಂಗ್ರೆಸ್ ಪಕ್ಷದ ಹೆಚ್ಚಿನ ಮುಖಂಡರು,ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೊಳಿಸಬೇಕು ಎಂದರು.
ಈ ಮಹತ್ವದ ಶಿಬಿರದಲ್ಲಿ ನೂರಿತ ಹೃದ್ರೋಗ ತಜ್ಞರು, ಕಣ್ಣಿನ ರೋಗಗಳ ತಜ್ಞರು, ಸಾಮಾನ್ಯ ರೋಗ, ಸ್ತ್ರೀ ರೋಗಪ್ರಸೂತಿ ಚಿಕಿತ್ಸಾ, ಕೀಲು ಮತ್ತು ಮೂಳೆ ರೋಗ, ಮಕ್ಕಳ ಚಿಕಿತ್ಸಾ, ಕಿವಿಮೂಗುಮತ್ತು ಗಂಟಲು, ಮನೋ ವೈದ್ಯಕೀಯ ಚಿಕಿತ್ಸಾ, ಚರ್ಮಹಾಗೂಗುಹ್ಯ ರೋಗಗಳ,ದಂತ ಚಿಕಿತ್ಸಾಗಳು ಒಂದೇ ಶಿಬಿರದಲ್ಲಿ ದೊರಯಲಿದ್ದು ಈ ಭಾಗದ ಬಡವರು, ರೈತರು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್, ಗ್ರಾಮೀಣ ಅಧ್ಯಕ್ಷ ಅರಕೆರೆ ಶಂಕರ್, ಯುವ ಕಾಂಗ್ರೆಸ್ ಬೈರೇಶ್, ಜಿಲ್ಲಾ ನಿರ್ದೇಶಕಿ ಕವಿತಾ, ಜಿ.ಡಿ ನಾಗಭೂಷಣ್, ಸುನೀಲ್, ಡಿಸಿಸಿ ನಿರ್ದೇಶಕ ಹನುಮಾನ್, ಮೈಲಾರಪ್ಪ, ಗಟ್ಲಹಳ್ಳಿ ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ ಅಧ್ಯಕ್ಷೆ ಸೌಮ್ಯ, ಕವಿತಾ, ಜಯರಾಮ್, ತಾ.ಪಂ ಮಾಜಿ ಅಧ್ಯಕ್ಷ ವೆಂಕಟಪ್ಪ, ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್, ರವಿಕುಮಾರ್, ಉಮೇಶ್, ನಂಜುಂಡಯ್ಯ, ಗಂಗರಾಜು, ಜಯರಾಜ್, ಕೇಶವಮೂರ್ತಿ ಸೇರಿದಂತೆ ಇತರರು ಇದ್ದರು.