ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೇರಸಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಳಾ ಗ್ರಾಮದಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದಾಗಿ ಅನಾರೋಗ್ಯ ಪೀಡಿತ ವೆಂಕಟ ಗಾಂವಕರ ಅವರನ್ನು ಗ್ರಾಮಸ್ಥರು 8 ಕಿ.ಮೀ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆದಿದೆ.
ಗ್ರಾಮದ ಸುತ್ತಮುತ್ತ ಕರಡಿ, ಹುಲಿ, ಚಿರತೆ ಸೇರಿ ವನ್ಯಮೃಗಗಳಿರುವ ಕಾಡು, ನಿರಂತರ ಮಳೆಯಿಂದ ಉಕ್ಕಿ ಹರಿಯುತ್ತಿರುವ ಭಂಡೂರಿ ಹಳ್ಳ ಹಾಗೂ ಮಹದಾಯಿ ನದಿಯನ್ನು ದಾಟಿ ಗ್ರಾಮಸ್ಥರು ಈ ಸಾಹಸ ನಡೆಸಿದರು.
ಕುರ್ಚಿ ಮತ್ತು ಕಟ್ಟಿಗೆಯ ಸಹಾಯದಿಂದ ಆರು ಮಂದಿ ಗ್ರಾಮಸ್ಥರು ಹೊತ್ತುಕೊಂಡು ಮುಖ್ಯರಸ್ತೆ ತಲುಪಿಸಿದ ಬಳಿಕ, ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಮುಸ್ಲಿಂ ಧರ್ಮದ ಶಿಕ್ಷಕನನ್ನು ವರ್ಗಾವಣೆ ಮಾಡಲು ಮಕ್ಕಳು ಕುಡಿಯುವ ನೀರಿಗೆ ವಿಷ ಬೆರೆಸಿದ ಪಾಪಿಗಳು
“ಕಳೆದ ವರ್ಷವೂ ಭೀಮಗಡ ವನ್ಯಧಾಮದ ಅಮಗಾಂವ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಹೀಗೆಯೇ 10 ಕಿ.ಮೀ ಹೊತ್ತು ಸಾಗಿಸಿದ್ದೇವೆ” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ ಹೇಳಿದ್ದಾರೆ.
.