ಉಡುಪಿ | ಅಂಬೇಡ್ಕರ್ ರವರಿಂದ ಎಲ್ಲಾ ಮಹಿಳೆಯರಿಗೆ ಸ್ವಾಭಿಮಾನದ ಬದುಕು – ತಹಶೀಲ್ದಾರ್ ಡಾ ಪ್ರತಿಭಾ ಆರ್

Date:

Advertisements

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಇಂದು ಕಾಪುವಿನ ಕಾಂಚನ್ ಸಮೂದಾಯ ಭವನದಲ್ಲಿ ನಡೆದ ನವಚೇತನ ಸಮಾವೇಶ ಮತ್ತು ನೂತನ ಕಾಪು ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕಾಪು ತಹಶೀಲ್ದಾರ್ ಡಾಕ್ಟರ್ ಪ್ರತಿಭಾ .ಆರ್ ಇಡೀ ಭಾರತದ ಎಲ್ಲಾ ಸಮೂದಾಯದ ಮಹಿಳೆಯರಿಗೆ ಸ್ವಾಭಿಮಾನದ ಬಧುಕು ಕಟ್ಟಿ ಕೊಟ್ಟವರು ಡಾಕ್ಟರ್ ಬಾಬಾಸಾಸೇಬ್ ಅಂಬೇಡ್ಕರ್ ರವರು. ಅಂಬೇಡ್ಕರ್ ರವರು ಸಂವಿಧಾನ ಬರೆಯದೇ ಇರುತ್ತಿದ್ದರೆ ನನಗೆ ಈ ಅವಕಾಶವೇ ಸಿಗುತ್ತಿರಲಿಲ್ಲ ಎಂದರು. ಸಂವಿಧಾನ ರಚನಾ ಸಮಿತಿಯಲ್ಲಿ ಇದ್ದ ಒಬ್ಬೊಬ್ಬರು ಒಂದೊಂದು ಕಾರಣದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಸರಿದಾಗ ಬಾಬಾಸಾಸೇಬ್ ಅವರೊಬ್ಬರೇ ಹಗಲಿರುಳು ಶ್ರಮವಹಿಸಿ, ವಿಶ್ವದ ಹಲವಾರು ಸಂವಿಧಾನಗಳನ್ನು ಅಧ್ಯಯನ ನಡೆಸಿ ಈ ಬ‌ಹುತ್ವದ ದೇಶಕ್ಕೆ ಒಂದು ಅತ್ಯಮೂಲ್ಯ ಸಂವಿಧಾನವನ್ನು ರಚಿಸಿ ಕೊಟ್ಟರು.ಮತ್ತು ಸಂವಿಧಾನ ಪೀಠಿಕೆಯಲ್ಲೇ ‌ಸಮಾನತೆ, ಸಂಹೋದರತೆಯನ್ನು ಸೇರಿಸಿ ಈ ದೇಶದಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಖಾತ್ರಿಪಡಿಸಿದರು. ನಮ್ಮ ಏಳಿಗೆಗೆ ನಾವೇ ಶ್ರಮಿಸಬೇಕೇ ವಿನಹಃ, ನಮ್ಮ ಉದ್ದಾರ ಬೇರೆಯವರು ಮಾಡುತ್ತಾರೆ ಎನ್ನುವ ಭ್ರಮೆಯಲ್ಲಿ ಇರಬಾರದು. ಹಾಗಾಗಿ ಶಿಕ್ಷಣಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿ ಎಲ್ಲರೂ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು ಎಂದರು.

WhatsApp Image 2025 08 03 at 5.51.35 AM

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಪು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಜೇಮ್ಸ್ ಡಿಸಿಲ್ವಾ ಅವರು ಇಡೀ ಸಮಾಜದಲ್ಲಿ ಮೇಲರಿಮೆಯ ವ್ಯಸನ ತುಂಬಿಕೊಂಡಿದೆ. ನಾನೇ ಶ್ರೇಷ್ಠ , ನಾನೇ ಮೇಲು ಎನ್ನುವ ವ್ಯಸನ ಪ್ರತಿಯೊಂದು ಕಡೆಯಲ್ಲೂ, ವ್ಯವಸ್ಥೆಯಲ್ಲೂ ಬೇರೂರಿ ಬಿಟ್ಟಿದೆ.ಇದನ್ನು ತೊಡೆದುಹಾಕುವ ಕೆಲಸವಾಗಬೇಕು ಎಂದರು. ಇನ್ನೊಬ್ಬರು ಮುಖ್ಯ ಅತಿಥಿಯವರಾದ ಕಾಪು ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಕೆ.ದಿವಾಕರ ಶೆಟ್ಟಿ ಮಾತನಾಡಿ ನಮ್ಮೆಲ್ಲಾ ವಿಧ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಆದ ತಕ್ಷಣ ಯಾವ ಕೋರ್ಸುಗಳಿಗೆ ಹೋದರೆ ಹೆಚ್ಚಿನ ಉಧ್ಯೋಗ ಅವಕಾಶಗಳಿವೆ. ಯಾವ ವಿಧ್ಯಾಭ್ಯಾಸ ಮಾಡಿದರೆ ಉದ್ಯೋಗ ಗ್ಯಾರಂಟಿ ಎಂಬ ಜ್ಞಾನವನ್ನು ನಮ್ಮ ವಿದ್ಯಾರ್ಥಿಗಳ ಹೆತ್ತವರಿಗೆ ಕೊಡಬೇಕು, ಆಗ ಮಾತ್ರ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಸಮಾವೇಶವನ್ನು ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಉಧ್ಘಾಟಿಸಿದರು. ನೂತನ ಪದಾಧಿಕಾರಿಗಳಿಗೆ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಮಾಣ ವಚನ ಭೋಧಿಸಿದರು.ಸಮಾವೇಶದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ವಹಿಸಿದ್ದರು. ವೇದಿಕೆಯಲ್ಲಿ ಕೌನ್ಸಿಲರ್ ಗಳಾದ ಸತೀಶ್ಚಂದ್ರ ಮೂಳೂರು, ರತ್ನಾಕರ ಶೆಟ್ಟಿ ಪಡುಮನೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ಮಂಜುನಾಥ ನಾಗೂರು, ಭಾಸ್ಕರ್ ನಿಟ್ಟೂರು, ವಿಠಲ ಉಚ್ಚಿಲ, ತಾಲೂಕು ಸಂಚಾಲಕರಾದ ರಾಜೇಂದ್ರ ಬೆಳ್ಳೆ, ಶಂಕರ್ ದಾಸ್ ಚೇಂಡ್ಕಳ, ರಾಜು ಬೆಟ್ಟಿನಮನೆ, ರಾಘವ ಕುಕುಜೆ, ಹರೀಶ್ಚಂದ್ರ ಬಿರ್ತಿ, ಶಿವರಾಜ್ ಬೈಂದೂರು ಉಪಸ್ಥಿತರಿದ್ದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

Download Eedina App Android / iOS

X