ಶಿವಮೊಗ್ಗ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿರುವ ಕಳ್ಳರು ₹1.90 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.
ಬೊಮ್ಮನಕಟ್ಟೆಯ ಎಫ್ ಬ್ಲಾಕ್‌ನಲ್ಲಿರುವ ಅಖಿಲಾ ಎಂಬುವವರ ಮನೆಯಲ್ಲಿ ಕಳುವಾಗಿದೆ.ಚೀಟಿ ಹಣ ಕಟ್ಟಲು ಅಖಿಲಾ ನಿನ್ನೆ ಸಂಜೆ ಗುಂಡಪ್ಪ ಶೆಡ್‌ಗೆ ತೆರಳಿದ್ದರು. ಮನೆಯಲ್ಲಿ ಅವರ ಮಕ್ಕಳಿಬ್ಬರೆ ಇದ್ದರು. ಕಿಟಕಿ ಬಳಿ ಶಬ್ದ ಕೇಳಿ ಆತಂಕಗೊಂಡ ಮಗಳು ಅಖಿಲಾ ಅವರಿಗೆ ಕರೆ ಮಾಡಿದ್ದರು.
ಅಕಿಲಾ ಅವರ ಸ್ನೇಹಿತೆ ಅವರ ಮನೆಗೆ ಬಂದು ಮಕ್ಕಳನ್ನು ತಮ್ಮ ಮನೆಗೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.ಆ ಬಳಿಕ ಕಳ್ಳರು ಮನೆಯೊಳಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಕಳ್ಳತನವಾಗಿದೆ.
ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.