- ಮಸ್ಕಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಒತ್ತಾಯಿಸಿ
- ಮಸ್ಕಿ ಶಾಸಕರ ಕಚೇರಿ ಮುಂದೆ ಎಸ್ಎಫ್ಐ ವಿಧ್ಯಾರ್ಥಿಗಳಿಂದ ಪ್ರತಿಭಟನೆ
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಾಸಕರ ಸಹೋದರ ಆರ್ ಸಿದ್ದನಗೌಡ ತುರ್ವಿಹಾಳ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಮಸ್ಕಿ ಪಟ್ಟಣಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಬರುತ್ತಾರೆ. ಇವರೆಲ್ಲರಿಗೂ ಹೆಚ್ಚಿನ ಹಣ ಕೊಟ್ಟು ಹೋಟೆಲ್‌ನಲ್ಲಿ ಉಪಾಹಾರ ಸೇವಿಸುವುದು ಕಷ್ಟವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಬಡ ಕೂಲಿಕಾರ್ಮಿಕರು, ಶಾಲಾ -ಕಾಲೇಜು ವಿದ್ಯಾರ್ಥಿಗಳು ಕಡಿಮೆ ದರದಲ್ಲಿ ಊಟ ಸೇವಿಸಲು ಅನುಕೂಲವಾಗುತ್ತದೆ. ಕೂಡಲೇ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಕ್ಯಾಂಟೀನ್ ಆರಂಭಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕ ಹಾಗೂ ಎಸ್‌ಎಫ್ಐ ಸಂಘಟನೆಯ ಕಾರ್ಯಕರ್ತರಾದ ಶರಣು ನಾಯಕ, ಬಸವರಾಜ ಕೋಳಬಾಳ, ಬಸವಂತ ಕಡಬೂರು, ವೆಂಕಟೇಶ, ಮಲ್ಲಿಕಾರ್ಜುನ ಹಾಗೂ ದೇವಪ್ಪ ಕಾಟಗಲ್ ಸೇರಿದಂತೆ ಇತರರಿದ್ದರು.