- ‘ಕೇಂದ್ರ ಸಚಿವ ಖೂಬಾ ಬೆಂಬಲಿಗರಿಂದಲೇ ನನಗೆ ಈ ಮಾಹಿತಿ ಗೊತ್ತಾಗಿದೆ’
- ‘ನನ್ನ ಕೊಂದು ಆರು ತಿಂಗಳಲ್ಲಿ ಉಪಚುನಾವಣೆ ನಡೆಸುವ ಷಡ್ಯಂತ್ರ’
ನನ್ನನ್ನು ಕೊಂದು ಆರು ತಿಂಗಳಲ್ಲಿ ಉಪಚುನಾವಣೆಗೂ ಷಡ್ಯಂತ್ರ ನಡೆಸುತ್ತಿದ್ದಾರೆ. ರಸ್ತೆ ಮಧ್ಯೆ ನನ್ನನ್ನು ಗುಂಡಿಕ್ಕಿ ಕೊಲೆ ಮಾಡಲು ಸಂಚು ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ.
ಬೀದರ್‌ನ ಔರಾದ್ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಣಿ ಸಭೆಯಲ್ಲಿ ಚವ್ಹಾಣ್ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
“ಕೇಂದ್ರ ಸಚಿವ ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ವಿಫಲವಾಗಿದ್ದರಿಂದ ಈಗ ತಾನು ಸಾಕಿದ ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಾನೂ ಔರಾದ್ ತಾಲೂಕಿವನಾಗಿದ್ದು ಹೊಟ್ಟೆ ಪಾಡಿಗಾಗಿ ಮುಂಬೈಗೆ ಹೊಗಿದ್ದೆನೆ. ಪದೇ ಪದೆ ನಾನು ಮುಂಬೈ ಮೂಲದವನು ಎನ್ನುವುದನ್ನು ಸಚಿವ ಖೂಬಾ ಮೊದಲು ನಿಲ್ಲಿಸಲಿ. ನನ್ನಂತೆ ತಾಲೂಕಿನ ಸಾವಿರಾರು ಜನರು ಕೆಲಸಕ್ಕಾಗಿ ಹೈದರಾಬಾದ್, ಮುಂಬೈ, ಬೆಂಗಳೂರಿನಲೂ ಇದ್ದಾರೆ. ಅಂದರೆ ಅವರೆಲ್ಲ ತಾಲೂಕಿನ ನಾಗರಿಕರು ಅಲ್ವಾ? ಎಂದಿದ್ದಾರೆ.