ಕಲಬುರಗಿ ನಗರದಲ್ಲಿ ಗುರುವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಬೆಳಗ್ಗೆ 10ರ ಸುಮಾರಿಗೆ ಗುಡುಗು ಮಿಂಚಿನ ಸಹಿತ ಆರಂಭಗೊಂಡ ಮಳೆಯಿಂದಾಗಿ ಸಾರ್ವಜನಿಕರೂ ಕೂಡ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಕೂಡಿತ್ತು. ಮುಂಜಾನೆ 10:15 ಗಂಟೆಗೆ ಕಲಬುರಗಿ ನಗರದಲ್ಲಿ ಗುಡುಗು-ಮುಂಚು ಸಮೇತ ಧಾರಾಕಾರ ಮಳೆ ಶುರುವಾಗಿದ್ದರಿಂದ, ರಸ್ತೆ ಮೇಲೆ ನೀರು ನದಿಯಂತೆ ಹರಿಯ ತೊಡಗಿದವು.
ಬೆಳಗ್ಗೆಯೇ ವರುಣನ ಆರ್ಭಟ ಶುರುವಾದ ಹಿನ್ನೆಲೆಯಲ್ಲಿ ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವವರಿಗೂ ಸಮಸ್ಯೆಯಾಗಿತ್ತು. ಮಳೆಯಿಂದ ರಕ್ಷಣೆ ಪಡೆಯಲು ಕೆಲ ಸಮಯ ಅಂಗಡಿಗಳ ಆಸರೆಯಡಿ ನಿಂತಿರುವುದು ಕಂಡುಬಂತು. ಬೆಳಗ್ಗೆಯಿಂದ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಕೂಡ ಪರದಾಡುವಂತಾಯಿತು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಸುಳ್ಳು ಹೇಳಿ ಸಿಕ್ಕಿಬಿದ್ದ ‘ಸುವರ್ಣ ನ್ಯೂಸ್’ ವರದಿಗಾರರು
‘ಬಿಸಿಲ ನಾಡು’ ಎಂದು ಪ್ರಸಿದ್ಧವಾದ ಕಲಬುರಗಿ ನಗರವನ್ನು ಇಂದು ವರಿಣನ ಆರ್ಭಟದಿಂದ ಮಲೆನಾಡಿನಂತೆ ಕಾಣತೊಡಗಿತ್ತು.