ತಮಿಳುನಾಡು | 300 ಲೀಟರ್ ಎದೆಹಾಲು ದಾನ ಮಾಡಿ; ಸಾವಿರಾರು ಮಕ್ಕಳ ಜೀವ ಉಳಿಸಿದ ಮಹಿಳೆ

Date:

Advertisements

ಅಮೆರಿಕದ ಟೆಕ್ಸಾಸ್ ಮೂಲದ ಅಲೈಸ್ ಒಗ್ಲೆಟ್ರೀ ಅವರು 2,645.58 ಲೀಟರ್ ತಮ್ಮ ಎದೆ ಹಾಲು ದಾನ ಮಾಡಿ, 3.6 ಲಕ್ಷ ನವಜಾತ ಶಿಶುಗಳ ಆರೈಕೆಗೆ ನೆರವಾಗಿದ್ದರು. ಆ ಮೂಲಕ, ಎದೆ ಹಾಲು ದಾನದಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಿದ್ದರು. ಅಂತೆಯೇ, ಭಾರತದಲ್ಲಿಯೂ ಮಹಿಳೆಯೊಬ್ಬರು 300 ಲೀಟರ್ ತಮ್ಮ ಎದೆ ಹಾಲು ದಾನ ಮಾಡುವ ಮೂಲಕ ಸಾವಿರಾರು ಮಕ್ಕಳ ಜೀವ ಉಳಿಸಲು ನೆರವಾಗಿದ್ದಾರೆ. ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾರೆ.

ತಮಿಳುನಾಡಿನ ತಿರುಚಿರಾಪಲ್ಲಿಯ ಕಟ್ಟೂರು ಗ್ರಾಮದ ಮಹಿಳೆ ಸೆಲ್ವಾ ಬೃಂದಾ ಅವರು 2023ರ ಏಪ್ರಿಲ್‌ನಿಂದದ 2025ರ ಫೆಬ್ರವರಿವರೆಗೆ 300 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ಅವರು ದಾನ ಮಾಡಿದ ಎದೆ ಹಾಲು, ಅವಧಿಪೂರ್ವ ಜನಿಸಿದ ಮಕ್ಕಳು ಮತ್ತು ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ಮಕ್ಕಳ ಜೀವ ಉಳಿಸಲು ನೆರವಾಗಿದೆ.

ಎರಡು ಮಕ್ಕಳ ತಾಯಿಯಾಗಿರುವ ಬೃಂದಾ ಅವರಿಗೆ 2023ರ ಫೆಬ್ರವರಿಯಲ್ಲಿ 2ನೇ ಮಗು ಜನಿಸಿತು. ಆ ಮಗುವಿಗೆ ಜನಿಸಿದ ಸಮಯದಲ್ಲೇ ಜಾಂಡಿಸ್‌ (ಕಾಮಾಲೆ) ತಲುಲಿತ್ತು. ಹೀಗಾಗಿ, ಮಗುವನ್ನು ಎನ್‌ಐಸಿಯುನಲ್ಲಿ ಇರಿಸಿ, ಆರೈಕೆ ಮಾಡಲಾಗುತ್ತಿತ್ತು. ಬೃಂದಾ ಅವರ ಎದೆ ಹಾಲನ್ನು ಪಂಪ್‌ ಮಾಡಿ, ಮಗುವಿಗೆ ನೀಡಲಾಗುತ್ತಿತ್ತು. ಈ ವೇಳೆ, ಬೃಂದಾ ಅವರು ತಮ್ಮ ಹೆಚ್ಚವರಿ ಹಾಲನ್ನು ಅದೇ ಎನ್‌ಐಸಿಯುನಲ್ಲಿದ್ದ ಇತರ ಶಿಶುಗಳಿಗೂ ಒದಗಿಸಲು ನಿರ್ಧರಿಸಿದ್ದರು.

Advertisements

ಅಂದು ಅವರು ಮಾಡಿದ ಆ ನಿರ್ಧಾರ, ಅವರು ಈವರೆಗೂ ಎದೆ ಹಾಲನ್ನು ದಾನ ಮಾಡುವಂತೆ ಪ್ರೇರೇಪಿಸಿದೆ. ಅವರು ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (MGMGH) ಎದೆ ಹಾಲು ಬ್ಯಾಂಕ್‌ಗೆ 300.17 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ.

ಈ ವರದಿ ಓದಿದ್ದೀರಾ?: 2,645 ಲೀಟರ್ ಎದೆ ಹಾಲು ದಾನ ಮಾಡಿ 3.5 ಲಕ್ಷ ಶಿಶುಗಳನ್ನು ಉಳಿಸಿದ್ದಾರೆ ಈ ಮಹಿಳೆ

20 ತಿಂಗಳ ಕಾಲ ನಿರಂತರವಾಗಿ ಎದೆ ಹಾಲು ದಾನ ಮಾಡಿರುವ ಬೃಂದಾ ಅವರ ಮಾನವೀಯತೆಯನ್ನು ಎದೆ ಹಾಲು ಬ್ಯಾಂಕ್‌ನ ಅಧಿಕಾರಿಗಳು ಶ್ಲಾಘಿಸಿದ್ದಾರೆ.ಆಗಸ್ಟ್‌ ತಿಂಗಳಿನಲ್ಲಿ ನಡೆಯಲಿರುವ ‘ವಿಶ್ವ ಸ್ತನ್ಯಪಾನ ವಾರ’ದ ಸಮಾರೋಪ ಕಾರ್ಯಕ್ರಮದಲ್ಲಿ ಬೃಂದಾ ಅವರಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದಾರೆ.

“ಅವಧಿಪೂರ್ವ ಶಿಶುಗಳಿಗೆ ಎದೆ ಹಾಲು ಔಷಧದಂತೆ ಕೆಲಸ ಮಾಡುತ್ತದೆ. ಇದು ಶಿಶುಗಳ ಆರೋಗ್ಯವನ್ನು ಸುಧಾರಿಸಿ, ಬದುಕಿಗೆ ಆಧಾರವಾಗುತ್ತದೆ,” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X