2,645 ಲೀಟರ್ ಎದೆ ಹಾಲು ದಾನ ಮಾಡಿ 3.5 ಲಕ್ಷ ಶಿಶುಗಳನ್ನು ಉಳಿಸಿದ್ದಾರೆ ಈ ಮಹಿಳೆ

Date:

ಅಲೈಸ್ ಒಗ್ಲೆಟ್ರೀ – 36 ವರ್ಷದ ಮಹಿಳೆ. ಅಮೆರಿಕದ ಟೆಕ್ಸಾಸ್ ಮೂಲದವರು. ಅವರ ಹೆಸರಿನಲ್ಲೊಂದು ಗಿನ್ನಿಸ್‌ ರೆಕಾರ್ಡ್‌ ದಾಖಲಾಗಿದೆ. ಅದೂ ಅವರ ಮಾನವೀಯ ಕಾರ್ಯದ ಕಾರಣಕ್ಕಾಗಿ. ಅದೇ, ಅವರು ಮಾಡಿದ ಎದೆ ಹಾಲು ದಾನ. ಅಲೈಸ್ ಒಗ್ಲೆಟ್ರೀ ಅವರು 2,645.58 ಲೀಟರ್ ತಮ್ಮ ಎದೆ ಹಾಲು ದಾನ ಮಾಡಿದ್ದಾರೆ. 3.6 ಲಕ್ಷ ನವಜಾತ ಶಿಶುಗಳ ಆರೈಕೆಗೆ ನೆರವಾಗಿದ್ದಾರೆ.

- Advertisement -

ಇದೇ ಅಲೈಸ್ ಒಗ್ಲೆಟ್ರೀ ಅವರು 2010ರಿಂದ 2014ರ ವೇಳೆಗೆ 1,569.79 ಲೀಟರ್‌ ಎದೆ ಹಾಲು ದಾನ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದರು. ಇದೀಗ, 10 ವರ್ಷಗಳ ಬಳಿ ತಮ್ಮದೇ ದಾಖಲೆಯನ್ನು ತಾವೇ ಮುರಿದಿದ್ದಾರೆ. 2024ರ ಅಂತ್ಯದ ವೇಳೆಗೆ 2,645 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಉತ್ತರ ಟೆಕ್ಸಾಸ್‌ನಲ್ಲಿರುವ ತಾಯಂದಿರ ಹಾಲಿನ ಬ್ಯಾಂಕ್ ಪ್ರಕಾರ, ಒಂದು ಲೀಟರ್ ಎದೆ ಹಾಲು 11 ನವಜಾತ ಶಿಶುಗಳ ಜೀವವನ್ನು ಉಳಿಸಬಹುದು. ಅಲೈಸ್ ಅವರ ಎದೆಹಾಲನ್ನು 3.5 ಲಕ್ಷಕ್ಕೂ ಹೆಚ್ಚು ಶಿಶುಗಳಿಗೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.

“ನನಗೆ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ತುಡಿತವಿದೆ. ಆದರೆ, ನಾನು ಶ್ರೀಮಂತೆಯಲ್ಲ. ನನ್ನ ಬಳಿ ಹಣವಿಲ್ಲ. ನನಗೆ ಬೆಂಬಲವಾಗಿ ಕುಟುಂಬವಿದೆ. ಆದರೆ, ಒಳ್ಳೆಯ ಉದ್ದೇಶಗಳಿಗಾಗಿ ಪದೇ-ಪದೇ ನೀಡುವಷ್ಟು ಸಾಮರ್ಥ್ಯವಿಲ್ಲ. ಆದರೆ, ಹಾಲು ದಾನ ಮಾಡಲು ಆರ್ಥಿಕತೆಯ ಹಂಗಿನ ಅಗತ್ಯವಿಲ್ಲ. ಹೀಗಾಗಿ, ಹಾಲು ದಾನ ಮಾಡುವ ಮಾರ್ಗವನ್ನು ನಾನು ಹುಡುಕಿಕೊಂಡೆ” ಎನ್ನುತ್ತಾರೆ ಅಲೈಸ್ ಒಗ್ಲೆಟ್ರೀ.

2010ರಲ್ಲಿ ಅಲೈಸ್ ಒಗ್ಲೆಟ್ರೀ ಅವರು ತನ್ನ ಮಗ ಕೈಲ್‌ಗೆ ಜನ್ಮ ನೀಡಿದರು. ಈಗ ಆತನಿಗೆ 15 ವರ್ಷ. ಆ ಮಗು ಜನಿಸಿದ ಸಮಯದಲ್ಲಿ ಅಲೈಸ್ ಒಗ್ಲೆಟ್ರೀ ಅವರಿಗೆ ತಮ್ಮಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಎದೆ ಹಾಲು ಉತ್ಪತ್ತಿಯಾಗುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಅಲೈಸ್‌ ಅವರಿಗೆ ಓರ್ವ ನರ್ಸ್‌ ಎದೆ ಹಾಲನ್ನು ದಾನ ಮಾಡುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅಲೈಸ್‌ ಅಂದಿನಿಂದ (2010) ಎದೆ ಹಾಲು ದಾನ ಮಾಡಲು ಆರಂಭಿಸಿದರು.

ಈ ಲೇಖನ ಓದಿದ್ದೀರಾ?: ಸಿರಿಯಾದ ಡಮಾಸ್ಕಸ್‌ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೂ, ಅದರ ನಿಜವಾದ ಗುರಿ ಟರ್ಕಿ!

ಈ ನಡುವೆ, ಅಲೈಸ್‌ ಇಬ್ಬರು ಮಕ್ಕಳಿಗೆ (ಕೇಜ್ ಮತ್ತು ಕೋರಿ) ಜನ್ಮ ನೀಡಿದ್ದಾರೆ. ಆದಾಗ್ಯೂ, ಅವರು ಎದೆ ಹಾಲು ದಾನ ಮಾಡುವುದನ್ನು ಮುಂದುವರೆಸಿದರು.

ಬಾಟಲಿಗಳಿಗೆ ಎದೆ ಹಾಲು ತುಂಬಿಸುವುದು ಕಠಿಣ ಕೆಲಸ. ಆದರೂ, ಅವರು ತಮ್ಮ ಎದೆ ಹಾಲು ದಾನವನ್ನು ನಿಲ್ಲಿಸಲಿಲ್ಲ. ರಾತ್ರಿಯೂ ಸೇರಿದಂತೆ ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಹಾಲನ್ನು ಬಾಟಲಿಗೆ ತುಂಬಿಸುತ್ತಿದ್ದರು. ತಾಯಂದಿರ ಹಾಲಿನ ಬ್ಯಾಂಕ್‌ಗೆ ಕಳಿಸುತ್ತಿದ್ದರು.

ನಿಯಮಿತವಾಗಿ ಹಾಲು ಉತ್ಪತ್ತಿಯಾಗಲು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಕಟ್ಟುನಿಟ್ಟಾದ ಪಂಪಿಂಗ್ ದಿನಚರಿಯನ್ನು ಕಾಪಾಡಿಕೊಳ್ಳುವುದನ್ನು ಪಾಲಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು 2,645.58 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ಮೂವರ ಬಲಿ, 7 ಮನೆಗಳಿಗೆ ಬೆಂಕಿ

ದೀರ್ಘಕಾಲದಿಂದ ಜನಾಂಗೀಯ ಸಂಘರ್ಷಕ್ಕೆ ಈಡಾಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್‌ಪೋಕ್ಪಿ...

ದೆಹಲಿ ಪ್ರತಿಭಟನೆ | ವಶಕ್ಕೆ ಪಡೆದ ನೂರಾರು ಪ್ರತಿಭಟನಾಕಾರರನ್ನು ಸ್ಟೇಡಿಯಂಗೆ ದಬ್ಬಿದ ಪೊಲೀಸರು

ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ...

ಅ.12ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಪ್ರತಿಭಟನೆ: ಕೆ.ಸಿ. ವೇಣುಗೋಪಾಲ್

ಜನರ ಮತದಾನದ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟವು ಸೋಮವಾರ ನವದೆಹಲಿಯಲ್ಲಿ...