ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆದೇಶ 2013 ಅಧ್ಯಾಯ (II) ರ ಸೆಕ್ಷನ್ 3ಬಿ(2) ಅನ್ವಯ ಜೀವರ್ಗಿ ವಿಧಾನಸಭಾ ಕ್ಷೇತ್ರದ ಸದಸ್ಯ ಅಜಯ್ ಸಿಂಗ್ ಅವರನ್ನು ಒಂದು ವರ್ಷದ ಅವಧಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಿಸಲಾಗಿದೆ.
ಹಾಗೆಯೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಒಂದು ವರ್ಷದ ಅವಧಿಗೆ 10 ನೂತನ ಸದಸ್ಯರನ್ನು ನೇಮಿಸಲಾಗಿದೆ.
ನೇಮಕವಾದ ಸದಸ್ಯರು
ಸೈಯದ್ ನಾಜೀರ್ ಹುಸೇನ್, ರಾಜ್ಯಸಭಾ ಸದಸ್ಯರು
ಅರವಿಂದ ಅರಳಿ ಯಲಕನೂರು, ವಿಧಾನ ಪರಿಷತ್ ಸದಸ್ಯರು, ಬೀದರ್
ತಿಪ್ಪಣ್ಣಪ್ಪ ಕಾಮಕನೂರು, ವಿಧಾನ ಪರಿಷತ್ ಸದಸ್ಯರು, ಕಲಬುರ್ಗಿ
ಬಿ.ಆರ್.ಪಾಟೀಲ್, ವಿಧಾನಸಭಾ ಸದಸ್ಯರು ಆಳಂದ ವಿಧಾನಸಭಾ ಕ್ಷೇತ್ರ
ರಾಜಾ ವೆಂಕಟಪ್ಪ ನಾಯ್ಕ್, ವಿಧಾನಸಭಾ ಸದಸ್ಯರು, ಯಾದಗಿರಿ ವಿಧಾನಸಭಾ ಕ್ಷೇತ್ರ
ಹಂಪನಗೌಡ ಬಾದರ್ಲಿ, ವಿಧಾನಸಭಾ ಸದಸ್ಯರು, ಸಿಂಧನೂರು ವಿಧಾನಸಭಾ ಕ್ಷೇತ್ರ
ಬಸವರಾಜ ರಾಯರೆಡ್ಡಿ, ವಿಧಾನಸಭಾ ಸದಸ್ಯರು, ಯಲಬುರ್ಗಾ ವಿಧಾನಸಭಾ ಕ್ಷೇತ್ರ
ರಾಘವೇಂದ್ರ ಇಟ್ನಾಳ್, ವಿಧಾನಸಭಾ ಸದಸ್ಯರು, ಕೊಪ್ಪಳ ವಿಧಾನಸಭಾ ಕ್ಷೇತ್ರ
ತುಕಾರಾಮ್, ವಿಧಾನಸಭಾ ಸದಸ್ಯರು, ಸಂಡೂರು ವಿಧಾನಸಭಾ ಕ್ಷೇತ್ರ
ಹೆಚ್.ಆರ್.ಗವಿಯಪ್ಪ, ವಿಧಾನಸಭಾ ಸದಸ್ಯರು, ವಿಜಯನಗರ ವಿಧಾನ ಸಭಾ ಕ್ಷೇತ್ರ
