ಕೂಡ್ಲಿಗಿ ತಾಲೂಕಿನ ಗಜಾಪುರ ಗ್ರಾಮದ ಬಳಿ ಸಾರಿಗೆ ಬಸ್ ತಡೆದು, ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಬಸ್ ಚಾಲಕನ ಮೇಲೆ ಮುಖ್ಯ ಪೊಲೀಸ್ ಪೇದೆ ಹಲ್ಲೆ ಮಾಡಿರುವ ಘಟನೆಯ ನಡೆದಿದೆ. ಈ ಕುರಿತು ಚಾಲಕ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪೇದೆಯ ವಿರುದ್ದ ದೂರು ದಾಖಲಿಸಿದ್ದಾರೆ.
ಕೂಡ್ಲಿಗಿ ಮುಖ್ಯ ಪೊಲೀಸ್ ಪೇದೆ ಮಂಜುನಾಥ ಸಾರ್ವಜನಿಕರೆದುರು ಹಾಗೂ ಪ್ರಯಾಣಿಕರೆದುರಲ್ಲಿ ಅಶ್ಲೀಲ ಪದಬಳಸಿ ನಿಂದನೆ ಮಾಡಿದ್ದಾರೆ ಹಾಗೂ ಚಪ್ಪಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಬಸ್ ಚಾಲಕ ಆರೋಪಿಸಿದ್ದಾರೆ.
ಬಸ್ ಚಾಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಠಾಣೆಯಲ್ಲೇ ಆರೋಪಿಯು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಕೂಡ್ಲಿಗಿ ಪಟ್ಟಣದವರಾಗಿದ್ದಾರೆ.
ಸಾರಿ ಬಸ್ ಚಾಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಹೇಳಿಕೆ ನೀಡಿದ್ದು, “ತಾನು ಕರ್ಥವ್ಯದಲ್ಲಿದ್ದಾಗಲೇ ಚಪ್ಪಲಿಯಿಂದ ಹೊಡೆದು ಅಶ್ಲೀಲ ಪದಗಳಿಂದ ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ. ಕೂಡ್ಲಿಗಿ ಮುಖ್ಯ ಪೊಲೀಸ್ ಪೇದೆ ಕ್ಷುಲ್ಲಕ ಕಾರಣಕ್ಕೆ , ಸಾರಿಗೆ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದಿಂದ ಕೂಡ್ಲಿಗಿ, ಸಂಡೂರು ಮಾರ್ಗವಾಗಿ ಬಳ್ಳಾರಿ ಕಡೆ ಚಲಿಸುತ್ತಿದ್ದ ಬಸ್, ಕೊಟ್ಟೂರಿನಿಂದ ನಿರ್ಗಮಿಸಿ ಮಲ್ಲನಾಯಕಹಳ್ಳಿ ಸಮೀಪದ ಮಾರ್ಗದಲ್ಲಿ ಮುಂದೆ ಚಲಿಸುತ್ತಿತ್ತು. ಬಸ್ ಮುಂದೆ ಚಲಿಸುತ್ತಿದ್ದ ಬೈಕ್ ಅನ್ನು ಹಿಂದಿಕ್ಕಲು ಬಸ್ ಚಾಲಕ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎದುರಗಡೆಯಿಂದ ಕಾರೊಂದು ವೇಗವಾಗಿ ಬಂದಿದೆ. ಕೂಡಲೇ ಬಸ್ ಚಾಲಕ ರಾಮಲಿಂಗಪ್ಪ ಬಸ್ ಅನ್ನು ರಸ್ತೆ ಮೇಲೆ ತಿರುಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯನಗರ | ಮುಕ್ತ ಚಿಂತನೆಗೆ ಅಪಾಯವಿದೆ: ಎಸ್. ಸಿರಾಜ್ ಅಹಮದ್
ಹಿಂದೆ ಇದ್ದ ಬೈಕ್ ಸವಾರ ಮುಖ್ಯ ಪೇದೆ ನಿಯಂತ್ರಣಕ್ಕೆ ತಂದುಕೊಂಡಿದ್ದಾನೆ. ಇದರಿಂದ ಕುಪಿತಗೊಂಡ, ಪೊಲೀಸ್ ಪೇದೆ ಬಸ್ ಅನ್ನು ಬೆನ್ನಟ್ಟಿ, ಗಜಾಪುರ ಗ್ರಾಮದ ಬಳಿ ಬರುತ್ತಿದ್ದಂತಿಯೇ, ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಚಾಲಕ ರಾಮಲಿಂಗಪ್ಪ ನಡೆದ ಘಟನೆಯ ಬಗ್ಗೆ ತಪ್ಪಾಗಿದೆಯೆಂದು ವಿಷಾದಿಸಿದರೂ ಮುಖ್ಯ ಪೇದೆ ಮಂಜುನಾಥರವರನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೂ ಸುಮ್ಮನಾಗದೆ ಪುಡಿ ರೌಡಿಯಂತೆ ಬಸ್ ಒಳಗೆ ನುಗ್ಗಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರ ಮಾತಿಗೂ ಕಿವಿಗೊಟ್ಟಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಪೊಲೀಸ್ ಪೇದೆ ಪುಡಿ ರೌಡಿಯಂತೆ ವರ್ತಿಸಿದ್ದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಹಾಗೂ ಕಿರಿಯ ನಾಗರಿಗರಿಕರು ಚಾಲಕನ ತಪ್ಪು ಇದ್ದರೆ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿತ್ತು. ಆದರೆ, ಈ ರೀತಿ ಪೊಲೀಸ್ ದರ್ಪ ಖಂಡನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.