ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕೆ ಸ್ಪಂದಿಸಿ ಸರ್ಕಾರವು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನೂ ಪ್ರೌಢಶಾಲೆಗಳಾಗಿ ಉನ್ನತೀಕರಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಸಿಎಸ್ಆರ್ ಮತ್ತು ಧಾನಿಗಳ ಅನುದಾನ ಸರ್ಕಾರಿ ಅನುದಾನದಡಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿ ಜಿಲ್ಲೆಯಲ್ಲಿ ಒಟ್ಟು 18 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಪ್ರಸಕ್ತ 2025-26ರ ನೇ ಶೈಕ್ಷಣಿಕ ವರ್ಷದಿಂದ ಉನ್ನತೀಕರಿಸಿ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಇದರಲ್ಲಿ ಬಬಲೇಶ್ವರ ಮತಕ್ಷೇತ್ರದ ಆರು, ಸಿಂದಗಿ ತಾಲೂಕಿನ ಎಂಟು, ಬಸವನಬಾಗೇವಾಡಿ ಮತ್ತು ಇಂಡಿ ತಾಲೂಕಿನ ತಲ ಒಂದು ಶಾಲೆಗಳನ್ನು ಪ್ರೌಢಶಾಲೆಗೆ ಉನ್ನತಿಕರಿಸಿ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಕೈಗಾರಿಕಾ ಇಲಾಖೆ ಸಿಎಸ್ಆರ್ ಅನುದಾನದಲ್ಲಿ ಬಬಲೇಶ್ವರ ಮತ್ತು ತಿಕೋಟಾ ತಾಲೂಕಿನ ಮನವಾಡದಲ್ಲಿರುವ ಸರ್ಕಾರಿ ಎಂ ಪಿ ಎಸ್, ಕಾತ್ರಾಳದ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯ ಸರ್ಕಾರಿ ಅನುದಾನದಡಿ ಸಿದ್ದಾಪುರ (ಅ ) ಸರ್ಕಾರಿ ಜಿ ಎಚ್ ಪಿ ಎಸ್ ಶಾಲೆ, ನೀಡೋಣಿಯ ಸರ್ಕಾರಿ ಎಚ್‌ಪಿಎಸ್, ತಿಗಣಿ ಬಿದರಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿ ಕೊಟ್ಯಳದ ಎಚ್ ಪಿ ಎಸ್ ಶಾಲೆ ಪ್ರೌಢಶಾಲೆಗಳಾಗಿ ಉನ್ನತೀಕರಣವಾಗಲಿವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅನುದಾನದ ಅಡಿ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ಸರ್ಕಾರಿ ಕೆಜಿಎಚ್ ಪಿ ಎಸ್ ಶಾಲೆ, ಬೊಮ್ಮನ ಜೋಗಿ ಎಲ್ ಟಿ 1, ಸರ್ಕಾರಿ ಜಿ ಎಚ್ ಪಿ ಎಸ್ ಶಾಲೆ, ಕೊರವಾರದ ಕೆ ಬಿ ಎಚ್ ಪಿ ಎಸ್ ಶಾಲೆ, ಚಿಕ್ಕ ಸಿಂದಗಿಯ ಸರ್ಕಾರಿ ಕೆ ಬಿ ಎಚ್ ಪಿ ಎಸ್ ಶಾಲೆ, ಆಹೇರಿಯ ಸರ್ಕಾರಿ ಎಂಪಿಎಸ್ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿ ಗುಂದಗಿಯ ಸರ್ಕಾರಿ ಕೆ ಬಿ ಎಚ್ ಪಿ ಎಸ್ ಶಾಲೆ ಮತ್ತು ಮಾದನಹಳ್ಳಿಯ ಸರ್ಕಾರಿ ಕೆ ಬಿ ಎಚ್ ಪಿ ಎಸ್ ಶಾಲೆಗಳು ಪ್ರೌಢ ಶಾಲೆಗಳಾಗಿ ಉನ್ನತಿಕರಣವಾಗಲಿವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅನುದಾನದಡಿ ಮುದ್ದೇಬಿಹಾಳ ತಾಲೂಕಿನ ಶಿವಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಡಿ ಸೋಮನಾಳ ಗ್ರಾಮದ ಸರ್ಕಾರಿ ಎಚ್ ಪಿ ಎಸ್ ಶಾಲೆಗಳು ಪ್ರೌಢ ಶಾಲೆಗಳಾಗಿ ಉನ್ನತೀಕರಣವಾಗಿವೆ ಎಂದರು.
ಇದನ್ನು ಓದಿದ್ದೀರಾ? ಮತಗಳ್ಳತನ | ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್
ಬಸವನಬಾಗೇವಾಡಿ ತಾಲೂಕಿನ ಒಕ್ಕಲಿಯ ಸರ್ಕಾರಿ ಯು ಬಿ ಎಚ್ ಪಿ ಎಚ್ ಎಸ್ ಶಾಲೆಯನ್ನು ರಾಜ್ಯ ಸರ್ಕಾರದ ಅನುದಾನದಡಿ ಮತ್ತು ಹಿಂಡಿ ತಾಲೂಕಿನ ತೆಗ್ಗಿಹಳ್ಳಿಯ ಸರ್ಕಾರಿ ಎಚ್ ಪಿ ಎಸ್ ಶಾಲೆಯನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿ ಉನ್ನತಿಕರಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
