ಮತ ಕಳವು ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ವಿಪಕ್ಷ ಸಂಸದರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ ಕಳವು ವಿಚಾರದಲ್ಲಿ ಚುನಾವಣಾ ಆಯೋಗದ ಕಚೇರಿಯೆಡೆ ವಿಪಕ್ಷಗಳು ಇಂದು ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು, ಈ ವೇಳೆ ದೆಹಲಿ ಪೊಲೀಸರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಸಂಸದರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಭಾರಿ ಮತ ಕಳವು: ರಾಹುಲ್ ಗಾಂಧಿ ಆರೋಪ
ಈ ಪ್ರತಿಭಟನಾ ಮೆರವಣಿಗೆಗೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ವಿಪಕ್ಷಗಳು ಯಾವುದೇ ಮಾಹಿತಿ, ಸ್ಪಷ್ಟನೆ ಈವರೆಗೂ ನೀಡಿಲ್ಲ.
VIDEO | Detained Opposition MPs including Priyanka Gandhi Vadra were seen sloganeering inside bus. They were stopped at Transport Bhavan during their march to the ECI office.#Opposition #ElectionCommissionOfIndia pic.twitter.com/JSrvExEgr2
— Press Trust of India (@PTI_News) August 11, 2025
ಬಂಧನಕ್ಕೆ ಒಳಗಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ನಾವು ಚುನಾವಣಾ ಆಯೋಗದ ಬಳಿ ಮಾತನಾಡುವ ಅವಕಾಶವೇ ಇಲ್ಲ, ಅದು ವಾಸ್ತವ ಸ್ಥಿತಿ. ಸದ್ಯ ಸತ್ಯ ದೇಶದ ಜನರ ಮುಂದಿದೆ. ಇದು ರಾಜಕೀಯವಲ್ಲ, ಇದು ಸಂವಿಧಾನದ ರಕ್ಷಣೆಗಾಗಿ ನಾವು ಎತ್ತುವ ಧ್ವನಿ. ನಮಗೆ ಸರಿಯಾದ ಮತದಾರರ ಪಟ್ಟಿ ಬೇಕು” ಎಂದು ಹೇಳಿದ್ದಾರೆ.
