ಹದಿನೆಂಟು ವರ್ಷದ ತನ್ನ ಸಹೋದರಿ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಬೇಸರಗೊಂಡ ಯುವಕನೋರ್ವ ರಕ್ಷಾಬಂಧನ ಆಚರಣೆಯ ಬಳಿಕ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗರೌತದಲ್ಲಿ ನಡೆದಿದೆ.
ಚಂದ್ರಾಪುರದ ದಾದಾ ಮಹರಾಜ್ ನಿಲ್ದಾಣದ ಸಮೀಪ ನಿರ್ಜನ ಪ್ರದೇಶದಲ್ಲಿ ಬೋಳಿಸಿದ ತಲೆಯೊಂದಿಗೆ ಕುಮಾರಿ ಸಹದಾರ್ ಅಲಿಯಾಸ್ ಪುಟ್ಟಿಯ ಮೃತದೇಹವು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಕುಮಾರಿಯ ಸಹೋದರ ಅರವಿಂದ್(25) ಮತ್ತು ಆತನ ಸ್ನೇಹಿತ ಪ್ರಕಾಶ್ ಪ್ರಜಾಪತಿ(25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯ ಹಿಂದೆ ನಡೆದಿತ್ತು ಮತ್ತೊಂದು ಕೊಲೆ
ಆಗಸ್ಟ್ 7ರಂದು ಲಾಹ್ಚೂರರ್‌ನ ಸಮೀಪದ ಗುಧಾ ಹಳ್ಳಿಯಲ್ಲಿ ಕುಮರಿಯ ಪ್ರಿಯಕರ ವಿಶಾಲ್(19)ನ ಮೃತ ದೇಹವೂ ಪತ್ತೆಯಾಗಿತ್ತು.
ಪರಸ್ಪರ ಪ್ರೀತಿಸುತ್ತಿದ್ದ ಕುಮಾರಿ ಮತ್ತು ವಿಶಾಲ್ ನಾಲ್ಕು ತಿಂಗಳ ಹಿಂದೆ ಮನೆಬಿಟ್ಟು ಹೊರ ಬಂದಿದ್ದರು. ಆದರೆ ಕುಟುಂಬಸ್ಥರು ಮನವೊಲಿಸಿ ಅವರನ್ನು ಮರಳಿ ಬರುವಂತೆ ಮಾಡಿದ್ದರು. ಎರಡೂ ಕುಟುಂಬಗಳ ಮಧ್ಯೆ ಪರಸ್ಪರ ರಾಜಿ ಏರ್ಪಟ್ಟು, ಕೆಲ ಕಾಲಗಳವರಗೆ ಪ್ರೀತಿ ತಣ್ಣಗಾಗಿತ್ತು. ಆದರೆ ಶ್ರೀಘ್ರದಲ್ಲೇ ಪ್ರೇಮಿಗಳು ಮತ್ತೆ ಭೇಟಿಯನ್ನು ಆರಂಭಿಸಿದ್ದರು.
ಕುಮಾರಿ ಮತ್ತು ವಿಶಾಲ್‌ನ ಸಂಬಂಧ ಮತ್ತೆ ಮುಂದುವರೆದಿರುವುದು ಸಹೋದರ ಅರವಿಂದದ್‌ಗೆ ಇಷ್ಟವಿರಲಿಲ್ಲ. ಪುಣೆಯಿಂದ ಮರಳಿ ಬಂದ ಆತ ಸ್ನೇಹಿತ ಪ್ರಕಾಶ್ ಪ್ರಜಾಪತಿಯ ಜೊತೆ ಸೇರಿಕೊಂಡು ಕೊಲೆಯ ಸಂಚು ರೂಪಿಸಿದ್ದ. ಆಗಸ್ಟ್ 7ರ ಮುಂಜಾನೆ ವಿಶಾಲ್‌ಗೆ ಕೆಲಸ ಕೊಡಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ತುಂಬಿದ ಹಳ್ಳದಲ್ಲಿ ಕೊಚ್ಚಿಹೋದ ಇಬ್ಬರು ಯುವಕರು ನಾಪತ್ತೆ: ಪ್ರಕರಣ ದಾಖಲು
ವಿಶಾಲ್‌ನ ಕೊಲೆ ಪ್ರಕರಣದ ತನಿಖೆ ನಡೆಯತ್ತಿರುವಾಗಲೇ ಶನಿವಾರದಂದು ಕುಮಾರಿಯನ್ನು ಔಷಧಿ ತರುವ ನೆಪದಲ್ಲಿ ಕರೆದುಕೊಂಡು ಹೋದ ಅರವಿಂದ್ ತನ್ನ ಸಹೋದರಿಯನ್ನೂ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಲ್‌ನ ತಂದೆ ಹಲ್ಕೀರಾಮ್ ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.