ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರೂ ರಾಜೀನಾಮೆ ನೀಡದ ಅವರನ್ನು ಈಗ ಸಂಪುಟದಿಂದಲೇ ವಜಾಗೊಳಿಸಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಕೆ ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನನ್ನನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಹಿಂದೆ ಷಡ್ಯಂತ್ರ, ಪಿತೂರಿ ಇದೆ. ಕಾಲ ಬಂದಾಗ ಯಾರು, ಏನು ಎನ್ನುವುದನ್ನು ಹೇಳುತ್ತೇನೆ. ಹೈಕಮಾಂಡ್‌ಗೆ ಮುಜುಗರ ಮಾಡಲು ನಾನು ಬಯಸುವುದಿಲ್ಲ” ಎಂದಿದ್ದಾರೆ.
“ಪಕ್ಷದ ವಿರುದ್ಧ ಈಗ ಹೇಳಿಕೆ ನೀಡುವುದು ಸಾಧುವಲ್ಲ. ನಾನು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ. ಪಕ್ಷದ ನಾಯಕರಾದ ರಾಹುಲ್ ಗಾಂಧಿ, ವೇಣುಗೋಪಾಲ್ ಅವರಿಗೆ ನನ್ನ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡಿದ್ದೆ. ಆದರೆ ರಾಜ್ಯಪಾಲರ ಕಚೇರಿಯಿಂದ ಕೈಬಿಡಲಾಗಿದೆ ಎಂದು ಪತ್ರ ಬಂದಿದೆ. ಮಾಜಿ ಸಚಿವನಾಗಿ ಬಹಳ ಸಂತೋಷವಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.