ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ, ಎಲ್ಲ ಧರ್ಮಗಳೂ ಸಾಮರಸ್ಯ, ಶಾಂತಿ ಹಾಗೂ ಸಮಾನತೆ ಸಾರಿವೆ. ಹಾಗಾಗಿ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದಕಬೇಕು ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ್ ನಾಯಕ ಹೇಳಿದರು.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಮುದನೂರ್ ಗ್ರಾಮದ ಹಜರತ್ ಮಲಂಗ ಷಾ ವಲಿ ದರ್ಗಾದ ಜಾತ್ರೆಯ ನಿಮಿತ್ತ ಗಂಧ ಲೇಪನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುರಪುರ ವಿಭಾಗದ ಡಿವೈಎಸ್‌ಪಿ ಮಾತನಾಡಿ, “ಸರ್ವಧರ್ಮಿಯರೂ ಒಂದಾಗಿ ಉರುಸ್ ಆಚರಿಸುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಹೀಗೇ ಮುಂದುವರಿದುಕೊಂಡು ಹೋಗಬೇಕು” ಎಂದು ಆಶಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ: ಡಾ. ಶಶಿ ಪಾಟೀಲ
ಬಸನಗೌಡ ಮಾಲಿಪಾಟೀಲ್, ಭೀಮರೆಡ್ಡಿ ಬೇಕಿನಾಳ, ಪ್ರಭುಗೌಡ ಹರನಾಳ, ಮಡಿವಾಳಪ್ಪ ಗೌಡ ಬಳವಾಟ್, ರಾಜಮಹಮ್ಮದ್ ಮಕಾಂದಾರ್, ಬುಡ್ಡೆಸಾಬ್ ಬೈಚ್ಚಾಳ್, ಸೈಯದ್ ಸಾಬ್ ತಾಳಿಕೋಟಿ, ಗೌಸ್ ಪಟೇಲ್, ಶಾಹುಸೇನ್ ಮಕಾಂದರ್, ಇಸ್ಮಾಯಿಲ್ ಬಡೆಗೇರ್ ಹಾಗೂ ಇತರರು ಇದ್ದರು.
ಯಾದಗಿರಿ ಜಿಲ್ಲಾ ವಾಲೆಂಟಿಯರ್ ಇಲಿಯಾಸ್ ಪಟೇಲ್ ಅವರ ಮಾಹಿತಿ ಆಧರಿಸಿದ ವರದಿ