ಶಿವಮೊಗ್ಗ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಬಿಜೆಪಿ ಸದಸ್ಯರಾಗುವುದು ಒಳ್ಳೆಯದು ಎಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸರಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಸಂಸದ ಬಿ ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಿರುವುದನ್ನು ಆಕ್ಷೇಪಿಸಿದ್ದಾರೆ.
ಆ. 5ರಂದು ನಡೆದ ಈ ಸಭೆಯಲ್ಲಿ ಸಂಸದರ ಅಭಿಮಾನಿಗಳ ಬಳಗದ ಜೊತೆ ಷಡಾಕ್ಷರಿ ಹಾಜರಿರುವುದರ ಚಿತ್ರ ಬಿಡುಗಡೆ ಮಾಡಿದ ಯೋಗೇಶ್, ಷಡಾಕ್ಷರಿ ಸರಕಾರಿ ನೌಕರರ ಹಿತ ಕಾಯುತ್ತಾರೋ ಅಥವಾ ಬಿಜೆಪಿ ಹಿತ ಕಾಯುತ್ತಾರೆಯೋ ಎಂದು ಪ್ರಶ್ನಿಸಿದರು.
ಷಡಕ್ಷರಿ ಭಜರಂಗವಾಗಿ ಬಿಜೆಪಿ ಸದಸ್ಯರಾಗಿ ಆ ಪಕ್ಷದ ಕೆಲಸ ಮಾಡಲಿ ಅದನ್ನು ಬಿಟ್ಟು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಕೆಲಸ ಮಾಡುವುದು ಎಂದು ಹೇಳಿದರು ರಾಘವೇಂದ್ರ ಅವರ ಜನ್ಮದಿನದ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಷಡಕ್ಷರಿ ಮಾಡುತ್ತಿದ್ದಾರೆ ಅವರು ರಾಜಕೀಯೇತರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ರಾಜಕೀಯ ಸೇರಲಿ ಎಂದು ಹೇಳಿದರು.
ಷಡಾಕ್ಷರಿ ಪ್ರತಿಕ್ರಿಯೆ
ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ನೌಕರ ಸಂಘದ ರಾಜ್ಯ ಅಧ್ಯಕ್ಷ ಷಡಕ್ಷರಿ ಮಾತನಾಡಿ , ನಾನು ಅಧಿಕಾರಿ. ಆ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ . ನಾನು ರಾಜಕೀಯ ವಿಚಾರವನ್ನು ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರಲ್ಲದೆ ಸಿದ್ಧಗಂಗಾ ಮಠಕ್ಕೆ ಅಕ್ಕಿ ಕಳುಹಿಸುವ ಸಂಬಂಧ ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದರು.
ಇದರಲ್ಲಿ ರಾಜಕೀಯವಿಲ್ಲ, ಯೋಗೇಶ್ ಸಂಕುಚಿತತೆ ಬಿಟ್ಟು ಕೆಲಸ ಮಾಡಲಿ . ನನಗೆ ಯಾವುದೇ ಪಕ್ಷ ಇಲ್ಲ. ನಾನು ಸರ್ಕಾರಿ ನೌಕರಿಯನ್ನು ಮಾಡುತ್ತಿದ್ದೇನೆ . ಅಕ್ಕಿ ಕಳುಹಿಸುವ ಸಂಬಂಧದ ಹಲವು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಎಲ್ಲಾ ಧರ್ಮೀಯರು ಮತ್ತು ಜಾತಿಯವರು ಈ ಸಭೆಯಲ್ಲಿ ಇದ್ದರು.
ಆದರೆ ಇದನ್ನೇ ಬೇರೆ ರೀತಿ ಅರ್ಥ ಕಲ್ಪಿಸಿ ಪ್ರಚಾರ ಮಾಡುವುದು ಸಲ್ಲದು ಎಂದು ಹೇಳಿದರು. ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಥವಾ ಲೋಗೋ ಕೆಳಗಡೆ ಕೆಲಸ ಮಾಡಿದ್ದಲ್ಲಿ ಫೋಟೋ ತೋರಿಸಲಿ. ಅದನ್ನು ಒಪ್ಪಿಕೊಳ್ಳುವೆ ನನಗೂ ಇತಿ ಮಿತಿ ಗೊತ್ತಿದೆ. ಆರೋಪ ಮಾಡುವುದು ಸರಿಯಲ್ಲ ಇಂತಹ ನೂರು ಫೋಟೋಗಳಿವೆ. ನಾನು ಕಳಿಸುವೆ . ಸಿದ್ದಗಂಗಾ ಮಠದ ವಿಷಯದಲ್ಲಿ ರಾಜಕಾರಣ ನಡೆಸಬಾರದು ಎಂದರು.