ಶಿವಮೊಗ್ಗ | ಷಡಾಕ್ಷರಿ ಬಿಜೆಪಿ ಸೇರಿ ರಾಜಕಾರಣ ಮಾಡಲಿ : ಯೋಗೇಶ್ | ರಾಜಕೀಯ ಮಾಡಿದ್ದರೆ ಸಾಬೀತು ಪಡಿಸಲಿ : ಷಡಾಕ್ಷರಿ ಸವಾಲು

Date:

ಶಿವಮೊಗ್ಗ, ರಾಜ್ಯ ಸರಕಾರಿ‌ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ‌ ಬಿಜೆಪಿ ಸದಸ್ಯರಾಗುವುದು ಒಳ್ಳೆಯದು ಎಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಇಂದು‌ ಮಾತನಾಡಿದ ಅವರು, ಸರಕಾರಿ‌ ನೌಕರರ ಸಂಘದ ಅಧ್ಯಕ್ಷನಾಗಿ ಸಂಸದ ಬಿ ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಿರುವುದನ್ನು ಆಕ್ಷೇಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಆ. 5ರಂದು ನಡೆದ ಈ ಸಭೆಯಲ್ಲಿ ಸಂಸದರ ಅಭಿಮಾನಿಗಳ ಬಳಗದ ಜೊತೆ ಷಡಾಕ್ಷರಿ ಹಾಜರಿರುವುದರ ಚಿತ್ರ ಬಿಡುಗಡೆ ಮಾಡಿದ ಯೋಗೇಶ್, ಷಡಾಕ್ಷರಿ ಸರಕಾರಿ ನೌಕರರ ಹಿತ ಕಾಯುತ್ತಾರೋ ಅಥವಾ ಬಿಜೆಪಿ ಹಿತ ಕಾಯುತ್ತಾರೆಯೋ ಎಂದು ಪ್ರಶ್ನಿಸಿದರು.

ಷಡಕ್ಷರಿ ಭಜರಂಗವಾಗಿ ಬಿಜೆಪಿ ಸದಸ್ಯರಾಗಿ ಆ ಪಕ್ಷದ ಕೆಲಸ ಮಾಡಲಿ ಅದನ್ನು ಬಿಟ್ಟು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಕೆಲಸ ಮಾಡುವುದು ಎಂದು ಹೇಳಿದರು ರಾಘವೇಂದ್ರ ಅವರ ಜನ್ಮದಿನದ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಷಡಕ್ಷರಿ ಮಾಡುತ್ತಿದ್ದಾರೆ ಅವರು ರಾಜಕೀಯೇತರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ರಾಜಕೀಯ ಸೇರಲಿ ಎಂದು ಹೇಳಿದರು.

ಷಡಾಕ್ಷರಿ ಪ್ರತಿಕ್ರಿಯೆ

ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ನೌಕರ ಸಂಘದ ರಾಜ್ಯ ಅಧ್ಯಕ್ಷ ಷಡಕ್ಷರಿ ಮಾತನಾಡಿ , ನಾನು ಅಧಿಕಾರಿ. ಆ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ . ನಾನು ರಾಜಕೀಯ ವಿಚಾರವನ್ನು ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರಲ್ಲದೆ ಸಿದ್ಧಗಂಗಾ ಮಠಕ್ಕೆ ಅಕ್ಕಿ ಕಳುಹಿಸುವ ಸಂಬಂಧ ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದರು.

ಇದರಲ್ಲಿ ರಾಜಕೀಯವಿಲ್ಲ, ಯೋಗೇಶ್ ಸಂಕುಚಿತತೆ ಬಿಟ್ಟು ಕೆಲಸ ಮಾಡಲಿ . ನನಗೆ ಯಾವುದೇ ಪಕ್ಷ ಇಲ್ಲ. ನಾನು ಸರ್ಕಾರಿ ನೌಕರಿಯನ್ನು ಮಾಡುತ್ತಿದ್ದೇನೆ . ಅಕ್ಕಿ ಕಳುಹಿಸುವ ಸಂಬಂಧದ ಹಲವು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಎಲ್ಲಾ ಧರ್ಮೀಯರು ಮತ್ತು ಜಾತಿಯವರು ಈ ಸಭೆಯಲ್ಲಿ ಇದ್ದರು.

ಆದರೆ ಇದನ್ನೇ ಬೇರೆ ರೀತಿ ಅರ್ಥ ಕಲ್ಪಿಸಿ ಪ್ರಚಾರ ಮಾಡುವುದು ಸಲ್ಲದು ಎಂದು ಹೇಳಿದರು. ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಥವಾ ಲೋಗೋ ಕೆಳಗಡೆ ಕೆಲಸ ಮಾಡಿದ್ದಲ್ಲಿ ಫೋಟೋ ತೋರಿಸಲಿ. ಅದನ್ನು ಒಪ್ಪಿಕೊಳ್ಳುವೆ ‌ ನನಗೂ ಇತಿ ಮಿತಿ ಗೊತ್ತಿದೆ. ಆರೋಪ ಮಾಡುವುದು ಸರಿಯಲ್ಲ ‌ ಇಂತಹ ನೂರು ಫೋಟೋಗಳಿವೆ. ನಾನು ಕಳಿಸುವೆ . ಸಿದ್ದಗಂಗಾ ಮಠದ ವಿಷಯದಲ್ಲಿ ರಾಜಕಾರಣ ನಡೆಸಬಾರದು ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಶಾಸಕರ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ: 200ಕ್ಕೂ ಹೆಚ್ಚು ಟಿಪ್ಪರ್‌ಗಳ ಮೆರವಣಿಗೆ

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ನೀಡಿರುವ...

ಶಿರಸಿ | ಹೊರಗುತ್ತಿಗೆ ನೌಕರರ ಸೇವೆ ಮುಂದುವರಿಸಲು ಒತ್ತಾಯ; ಜಿಲ್ಲಾಧಿಕಾರಿಗೆ ಮನವಿ

ಶಿರಸಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ...

ಮಂಗಳೂರು | ದಸರಾ ರಜೆಯಲ್ಲೇ ಸೆಮಿಸ್ಟರ್ ಪರೀಕ್ಷೆ: ಸಂತ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ದಸರಾ ಹಬ್ಬದ ರಜೆ ಹಾಗೂ ಪದವಿ ಸೆಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿ ವಿಚಾರವಾಗಿ...

ಕಲಬುರಗಿ | ವ್ಯಾಪಾರದಲ್ಲಿ ₹62.77 ಲಕ್ಷ ವಂಚನೆ : ಪ್ರಕರಣ ದಾಖಲು

ಮೆಣಸಿನಕಾಯಿ ವ್ಯಾಪಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಖರೀದಿಸಿ, ಹಣ...