ತಾನು ಶಾಸಕನ ಮಗ ಎಂದು ಹೇಳಿಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ ಸ್ಥಳೀಯ ಎಂಎಲ್‌ಸಿಯ ಮಗನ ಯಾವುದೇ ರಾಜಕೀಯ ಹಿನ್ನೆಲೆಗೂ ಮಣಿಯದೆ ತನ್ನ ಕರ್ತವ್ಯ ನಿರ್ವಹಿಸಿದ ಟ್ರಾಫಿಕ್ ಕಾನ್‌ಸ್ಟೆಬಲ್‌ನ ವೃತ್ತಿ ಧರ್ಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಬಿಜೆಪಿ ಶಾಸಕ ಚೌಧರಿ ರಿಷಿಪಾಲ್ ಸಿಂಗ್‌ನ ಪುತ್ರ ತಪೇಶ್ ‘ಬಿಜೆಪಿ ಶಾಸಕ’ ಎಂಬ ಸ್ಟಿಕರ್ ಮತ್ತು ಬ್ಯಾನೆಟ್ ಮೇಲೆ ಪಕ್ಷದ ಧ್ವಜವಿದ್ದ ಸ್ಕಾರ್ಪಿಯೋವನ್ನು ಜನನಿಬಿಡ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಚಾಲಕನಿಗೆ ಕಾರನ್ನು ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ? ದ್ವೇಷ ಭಾಷಣ, ಅಪರಾಧ ಪುನರಾವರ್ತಿಸಬಾರದು: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ಆದೇಶ
ಆಗ ಎಂಎಲ್‌ಸಿ ಮಗ ತಪೇಶ್ ಕರ್ತವ್ಯ ನಿರತ ಪೊಲೀಸರಿಗೆ “ಮೊದಲು ಇಲ್ಲಿಂದ ತೊಲಗು” ಎಂದು ತನ್ನ ಅಧಿಕಾರ ದರ್ಪವನ್ನು ತೋರಿಸಲು ಮುಂದಾಗಿದ್ದರು. ಆದರೆ ಇದ್ಯಾವುದಕ್ಕೂ ಹೆದರದ ಪೊಲೀಸ್ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಮತ್ತು ಬಿಜೆಪಿ ಶಾಸಕನ ಮಗನ ನಡುವಿನ ವಾಗ್ದಾಳಿಯ ವಿಡಿಯೋ ಈಗ ವೈರಲ್ ಆಗಿದೆ.
• चल हट, भाग यहां से
— Supriya Shrinate (@SupriyaShrinate) August 12, 2025
• तुम्हारी उम्र का लिहाज कर रहा हूं, वरना
• तुम इंस्पेक्टर हो?
ये शब्द यूपी के BJP विधायक ऋषिपाल सिंह के बेटे के हैं
जाम लग रहा था तो ड्यूटी कर रहे पुलिसकर्मी ने गाड़ी हटाने के किए कहा
बस इतना सुनते ही विधायक पुत्र उखड़ गए pic.twitter.com/SboQACaeOO
“ನೀವು ಇಲಾಖೆಯ ಖ್ಯಾತಿಗೆ ದಕ್ಕೆ ತರುತ್ತಿದ್ದೀರಿ” ಎಂದು ತಪೇಶ್ ಎಸ್‌ಪಿ ಸಿಂಗ್‌ಗೆ ಎದುರುತ್ತರ ನೀಡಿದ್ದಾನೆ. ಆಗ “ನೀವು ಸರಿಯಾಗಿ ಮಾತನಾಡಿದ್ದರೆ, ಪೊಲೀಸರೊಂದಿಗೆ ಸರಿಯಾಗಿ ವರ್ತಿಸಿದ್ದರೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ನಿಮ್ಮ ವರ್ತನೆಯಿಂದ ನಿಮ್ಮ ತಂದೆಯ ಖ್ಯಾತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದೀರಿ” ಎಂದು ಎಸ್‌ಪಿ ಸಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.
“ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಿಮಗಿಂತ ನಾನು ಹೆಚ್ಚು ವಿದ್ಯಾವಂತ. ಹೇಗೆ ಮಾತನಾಡಬೇಕು ಎನ್ನುವುದು ನನಗೆ ಗೊತ್ತು. ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತೇನೆ” ಎಂದು ಸಂಚಾರಿ ಪೊಲೀಸ್ ಧೈರ್ಯವಾಗಿ ಸಮಾಧಾನದಿಂದಲೇ ಉತ್ತರಿಸಿದ್ದಾರೆ.
ಹತ್ರಾಸ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಘಟನೆಯ ಬಗ್ಗೆ ಮಾಹಿತಿ ದೃಢಪಟ್ಟಿದ್ದು, ತನಿಖೆ ನಡೆಯುತ್ತಿದೆ ಮತ್ತು ವಿಚಾರಣೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
