ಮರ ಕಡಿಯುವಾಗ ವ್ಯಕ್ತಿ ಮೇಲೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಗೋಣಿಬೀಡು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತ ವ್ಯಕ್ತಿ ಪ್ರಕಾಶ್ (45), ಕೃಷ್ಣಾಪುರ ಗ್ರಾಮದ ನಿವಾಸಿ ಎನ್ನಲಾಗಿದೆ. ಮರ ಕೆಲಸ ಮಾಡುತ್ತಿದ್ದ ಪ್ರಕಾಶ್, ಬೆಳಿಗ್ಗೆ ಸಹೋದ್ಯೋಗಿಗಳೊಂದಿಗೆ ಸುಮಾರು 70-80 ಅಡಿ ಎತ್ತರದ ಸಿಲ್ವರ್ ಮರವನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಮರ ನೆಲಕ್ಕೆ ಉರುಳುವ ಸಮಯದಲ್ಲಿ ಕಾರ್ಮಿಕರು ಎಲ್ಲರೂ ಓಡಿ ಹೋಗಿದ್ದಾರೆ. ಆದರೆ, ಪ್ರಕಾಶ್ ಓಡುವಾಗ ಕಾಲು ಜಾರಿ ನೆಲಕ್ಕೆ ಬಿದ್ದ ಕಾರಣ ಮರ ಬಿದ್ದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ದಲಿತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಿ: ಕರ್ನಾಟಕ ಜನಶಕ್ತಿಯಿಂದ ಕಳಸ ಚಲೋ ಎಚ್ಚರಿಕೆ
ಈ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.