ಜಿಲ್ಲೆಯಲ್ಲಿ ಅತಿವೃಷ್ಟಿ ಮಳೆಯಿಂದ ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಬೆಳೆ ವಿಮೆ ಜಾರಿ ಹಾಗೂ ಹಿಂದಿನ ವರ್ಷದ 315 ಕೋಟಿ ರೂಪಾಯಿ ಬಾಕಿ ಬೆಳೆ ವಿಮೆ ಹಣ ಬಿಡುಗಡೆಗಾಗಿ ಆಗ್ರಹಿಸಿ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ತಡೆದು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ʼಅತಿವೃಷ್ಟಿ ಹಾನಿಯಿಂದ ಬೆಳೆ ನಷ್ಟ ಸಮೀಕ್ಷೆ ನಡೆಸಿ ನೀಡಬೇಕು. ಮಹಾಗಾಂವ ಕ್ರಾಸ್ ದಿಂದ ಚಿಂಚೋಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 32ರ ಹೇರೂರು ಸಮೀಪ ಸಂಪೂರ್ಣ ರಸ್ತೆ ಹಾಳಾಗಿದ್ದು ರಸ್ತೆಯುದ್ದಕ್ಕೂ ತಗ್ಗು, ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕುʼ ಎಂದು ಒತ್ತಾಯಿಸಿದರು.
“ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆ ವಿಮೆ ಮಾಡಿಸಿದ ರೈತರು ಇಫ್ಕೊ ಟೋಕಿಯೊ ಇನ್ಸೂರೆನ್ಸ್ ಕಂಪನಿ ಟೋಲ್ ಫ್ರೀ ನಂಬರ್‌ಗೆ ವಿಮೆ ಕಟ್ಟಿದ್ದ ರೈತರು ಕಂಪ್ಲೆಂಟ್ ಮಾಡಲಿಕ್ಕೆ ಗ್ರಾಮೀಣ ಪ್ರದೇಶದ ರೈತರು ಕರೆ ಮಾಡಿದ್ದರೆ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದ್ರೆ ಕರೆ ಸ್ವೀಕರಿಸುತ್ತಿಲ್ಲ, ಕೆಲವೊಮ್ಮೆ ಪೋನ್ ಹತ್ತುತ್ತಿಲ್ಲ, ಕರೆ ಕಟ್ಟಾಗುತ್ತಿದೆ. ಅವರನ್ನು ಸಂಪರ್ಕಿಸಲು ಆಗುತ್ತಿಲ್ಲʼ ಎಂದರು.
ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ಸ್ಪಂದಿಸುತ್ತಿಲ್ಲ. ವಿಮೆ ಕಂಪನಿಗೆ ವಿಮೆ ಹಣ ಕಟ್ಟಿದ್ದ ರೈತರು ಕಂಗಾಲಾಗಿದ್ದಾರೆ. ವಿಮೆ ಕಟ್ಟಿದ್ದು, ನಮ್ಮ ಹಣ ವ್ಯರ್ಥ ಆಗುತ್ತದೆಂದು ರೈತರು ಭಯಭೀತರಾಗಿದ್ದಾರೆ. ತಕ್ಷಣವೇ ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕುʼ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರ ಸಂಘಟನೆಯ ಹಲವಾರು ಮುಖಂಡರು ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಕಲಬುರಗಿ | ನಿರಂತರ ಮಳೆ : ಮನೆ ಗೋಡೆ ಕುಸಿದು ಮಹಿಳೆ ಸಾವು