ಬಿಹಾರದಲ್ಲಿ ನಡೆದ ‘ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕಗೊಳಿಸಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್, ಮತಪಟ್ಟಿಯಿಂದ ಕಿತ್ತುಹಾಕಲಾದ ಮತದಾರರ ಹೆಸರುಗಳನ್ನು ಆಗಸ್ಟ್ 19ರೊಳಗೆ ಸಾರ್ವಜನಿಕಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಬೆನ್ನಲ್ಲೇ, ಆಗಸ್ಟ್ 18ರಂದು ಮತದಾನದಿಂದ ಹಾರಹಾಕಲಾಗಿರುವ ಜನರ ಹೆಸರುಗಳನ್ನು ಆಯೋಗವು ಬಹಿರಂಗಗೊಳಿಸಿದೆ.
ಎಸ್‌ಐಆರ್ ಪ್ರಕ್ರಿಯೆ ನಡೆಸಿ ಪ್ರಕಟಿಸಲಾಗದ ಕರಡು ಮತದಾರರ ಪಟ್ಟಿಯಿಂದ ಹೊರಹಾಕಲಾಗಿರುವ 65 ಲಕ್ಷ ಜನರ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯೋಗವು ಬಿಹಾರದ ಎಲ್ಲ ಮತಗಟ್ಟೆಗಳಲ್ಲಿ ‘ASD’ (ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಮೃತ) ಮತದಾರರ ಹೆಸರುಗಳನ್ನು ಪ್ರಕಟಿಸುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶಿಸಿದಂತೆ ಆನ್‌ಲೈನ್‌ನಲ್ಲಿಯೂ ಅಪ್‌ಲೋಡ್ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.