ವಿಜಯನಗರ | ಶಂಕರರ ‘ಅನ್ಯ’ ಕಾದಂಬರಿ ಅವಲೋಕನ; ಹಂಪಿ ವಿವಿ ವಿದ್ಯಾರ್ಥಿಗಳಿಂದ ಸಂವಾದ

Date:

Advertisements

ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಡಿ ಎ ಶಂಕರ ಅವರ ‘ಅನ್ಯ’ ಕಾದಂಬರಿಯ ಕುರಿತು ಅವಲೋಕನ ಸಂವಾದ ಏರ್ಪಡಿಸಲಾಗಿತ್ತು.

ಈ ಸಂವಾದದಲ್ಲಿ ಮಾತನಾಡಿದ ಸಂಶೋಧನಾರ್ಥಿ ಮಂಜುನಾಥ ಕರಿಲಿಂಗಣ್ಣ, “ಮನುಷ್ಯ ತಾನು ಸೃಷ್ಟಿಸಿಕೊಂಡ ವ್ಯವಸ್ಥೆಯಲ್ಲಿ ತಾನೇ ಹೇಗೆ ಬಂಧಿಯಾದ ಎಂಬ ವಿಷಯವನ್ನು ʼಅನ್ಯʼ ಕಾದಂಬರಿಯು ಚರ್ಚಿಸುತ್ತದೆ. ಅನುವಾದಕರ ಕುರಿತ ಚರ್ಚೆಗಳು ನಡೆಯುವುದೇ ವಿರಳ. ಈ ಅನುವಾದಕರು ತಮ್ಮ ಭಾಷೆಗಳಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸುವ ಉದ್ದೇಶವನ್ನು ಈ ಕಾರ್ಯಕ್ರಮವು ಪೂರೈಸುತ್ತದೆ. ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುತ್ತಾ ಹುಟ್ಟಿದುದೆ ಅಸ್ತಿತ್ವವಾದ” ಎಂದು ಹೇಳಿದರು.

“ನಮ್ಮದೇ ವ್ಯವಸ್ಥೆ ನಮ್ಮನ್ನೇ ನಾಶಮಾಡುವಾಗಲೂ ಅದನ್ನು ಒಪ್ಪಿಕೊಳ್ಳುವ ದೀರ್ಘಾವಧಿಯ ಅಭ್ಯಾಸವೊಂದಿದ್ದು, ನಮ್ಮನ್ನು ಸದಾ ಅದಕ್ಕೆ ಸಿದ್ಧವಾಗಿರುವಂತೆ ಮಾಡುತ್ತದೆ. ಈ ಕಾದಂಬರಿಯು ಈಗಾಗಲೇ ಇರುವ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಸಮಾಜದ ಭಾವನಾತ್ಮಕ ಲೋಕವನ್ನು ಮುಂದಿಟ್ಟು ಮಾಡಿದ ಅಪರಾಧಗಳಿಗಿಂತ ವ್ಯಕ್ತಿಯ ವ್ಯಕ್ತಿತ್ವವನ್ನೇ ಪ್ರಶ್ನಿಸುತ್ತಿರುತ್ತದೆ. ಸಮಾಜದ ಮಿತ್‌ಗಳನ್ನು ಒಪ್ಪಿಕೊಳ್ಳದವನಿಗೆ ಆ ಸಮಾಜದಲ್ಲಿ ಬದುಕುವ ಅರ್ಹತೆಯಿಲ್ಲ. ಅವನು ಕೇವಲ ಶಿಕ್ಷೆಗೆ ಮಾತ್ರ ಅರ್ಹ ಎಂದು ಕಾದಂಬರಿಯಲ್ಲಿ ನಿರೂಪಿಸಲಾಗಿದೆ” ಎಂದು ಹೇಳಿದರು.

Advertisements

ಇದನ್ನೂ ಓದಿ: ವಿಜಯನಗರ | ಮುಕ್ತ ಚಿಂತನೆಗೆ ಅಪಾಯವಿದೆ: ಎಸ್. ಸಿರಾಜ್ ಅಹಮದ್

ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಬಾಳಿ, ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಮಾಧವ, ರೆಬೆಕ್ಕ, ಬರ‍್ಗಿ ಜಯಶ್ರೀ, ವಿನೀತ, ವಿಭಾಗದ ವಿದಾರ್ಥಿಗಳು ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X