ಗಡ್ಡ ಕತ್ತರಿಸುವಂತೆ ವೃದ್ಧ ಮುಸ್ಲಿಂ ಮೇಲೆ ಹಲ್ಲೆ ನಡೆಸಿ ‘ಇದು ಹಿಂದೂಗಳ ಆಡಳಿತ’ ಎಂದ ಕೋಮುವಾದಿಗಳು

Date:

ಗಡ್ಡ ಕತ್ತರಿಸುವಂತೆ, ‘ಜೈ ಶ್ರೀ ರಾಮ್‌’ ಮತ್ತು ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಒತ್ತಡ ಹೇರಿ ವೃದ್ದ ಮುಸ್ಲಿಂ ವ್ಯಕ್ತಿಯ ಮೇಲೆ ಮೂವರು ಕೋಮುವಾದಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉತ್ತರಾಖಂಡದ ಪೌರಿ ಗಢವಾಲ್‌ ಜಿಲ್ಲೆಯ ಶ್ರೀನಗರದಲ್ಲಿ ಆಗಸ್ಟ್ 14ರಂದು ನಡೆದಿದೆ. 60 ವರ್ಷದ ರಿಜ್ವಾನ್ ಅಹಮ್ಮದ್ ಶ್ರೀನಗರದಲ್ಲಿ ರೈಲ್ವೇ ಹಳಿ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಅಮಲಿನಲ್ಲಿದ್ದ ಅವರ ಮೂವರು ಸಹೋದ್ಯೋಗಿಗಳು ಅಹಮ್ಮದ್‌ ಅವರ ಗಡ್ಡವನ್ನು ಎಳೆಯುತ್ತಾ ಹಲ್ಲೆ ನಡೆಸಲು ಆರಂಭಿಸಿದ್ದಾರೆ.

- Advertisement -

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಮೂವರು ಮಹಮ್ಮದ್‌ ಅವರ ಗಡ್ಡವನ್ನು ಎಳೆಯುತ್ತಾ ʼಮುಲ್ಲಾʼ, ʼಕಟ್ಟಾʼ ಎಂದು ನಿಂದಿಸುವುದು ಕಂಡು ಬಂದಿದೆ. ಸಾಲದ್ದಕ್ಕೆ ʼಜೈ ಶ್ರೀ ರಾಮ್‌ʼ ಮತ್ತು ʼಭಾರತ್‌ ಮಾತಾ ಕಿ ಜೈʼ ಎಂದು ಘೋಷಣೆ ಹಾಕುವಂತೆ ಒತ್ತಾಯಿಸುತ್ತಾ ʼಇದು ಹಿಂದೂಗಳ ಆಡಳಿತʼ ಎಂದು ಗಟ್ಟಿಯಾಗಿ ಘೋಷಣೆ ಕೂಗಿದ್ದಾರೆ. ಆರೋಪಿಗಳು ಕೊಡಲಿಯನ್ನು ತೆಗೆದುಕೊಂಡು ಅಹಮ್ಮದ್‌ನ ತಲೆಯನ್ನು ಕತ್ತರಿಸಲೂ ಮುಂದಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದನ್ನು ಓದಿದ್ದೀರಾ? ಮಸೀದಿ ಬಳಿ ಜೈ ಶ್ರೀರಾಮ್ ಕೂಗಿದರೆ ತಪ್ಪಲ್ಲ: ಕರ್ನಾಟಕ ಹೈಕೋರ್ಟ್‌

“ನನ್ನ ಮೇಲೆ ಹಲ್ಲೆಯಾಗಲು ನನ್ನ ಗಡ್ಡವೇ ಕಾರಣ. 2013ರ ಮುಜಾಫರ್‌ನಗರ ಗಲಭೆಗಳು ಇನ್ನೂ ಅವರ ಮನಸ್ಸಿನಲ್ಲಿವೆ ಎಂದು ಅನಿಸುತ್ತಿದೆ. ಆ ವ್ಯಕ್ತಿಗಳು ಬಜರಂಗದಳದವರಂತೆ ಕಂಡುಬಂದರು. ನಾನು ಕಳೆದ ಐದು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ, ಆದರೆ ಈ ರೀತಿ ಘಟನೆಯನ್ನು ಹಿಂದೆ ಎಂದೂ ನಾನು ಎದುರಿಸಿರಲಿಲ್ಲ. ಸ್ಥಳೀಯ ಪ್ರದೇಶದಿಂದ ಒಬ್ಬ ಯುವಕ ಬಂದು ರಕ್ಷಿಸದೇ ಇದ್ದರೆ ಹಲ್ಲೆಕೋರರು ನನ್ನನ್ನು ಕೊಲ್ಲುತ್ತಿದ್ದರು” ಎಂದು ಸಂತ್ರಸ್ತ ಅಹಮ್ಮದ್‌ ಹೇಳಿಕೊಂಡಿದ್ದಾರೆ.

“ದುಷ್ಕರ್ಮಿಗಳು ನನ್ನನ್ನು ಕೊಂದು ಬಳಿಕ ನದಿಯಲ್ಲಿ ಎಸೆಯಲು ಸಂಚು ರೂಪಿಸಿದ್ದರು. ಹಾಗೊಂದು ವೇಳೆ ಆಗಿದ್ದರೆ ಯಾರಿಂದಲೂ ನನ್ನನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ತಮ್ಮ ಆತಂಕ ಹಂಚಿಕೊಂಡಿದ್ದಾರೆ.

ಘಟನೆಯ ವಿಡಿಯೋಗಳು ಎಲ್ಲೆಡೆ ಹರಿದಾಡಿದ ಬಳಿಕ ಉತ್ತರಾಖಂಡದ ಮುಸ್ಲಿಂ ಸೇವಾ ಸಂಘಟನಾ ಸಂಸ್ಥೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಹ್ಮದ್ ಅವರ ದೂರಿನ ಆಧಾರದ ಮೇಲೆ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಕೋರರಾದ ಮುಖೇಶ್ ಭಟ್, ಮನೀಶ್ ಬಿಷ್ಟ್, ಮತ್ತು ನವೀನ್ ಭಂಡಾರಿ ಅವರನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2), 196, 299, 351(2), ಮತ್ತು 352 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಮೂವರೂ ಆರೋಪಿಗಳು ಇದಕ್ಕೂ ಮೊದಲು ಮತ್ತೊಬ್ಬ ಮುಸ್ಲಿಂ ವ್ಯಕ್ತಿ ಮುಖ್ತಿಯಾರ್ ಅವರಿಗೆ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತಪಡಿಸಿದ್ದರು. ಉತ್ತರಾಖಂಡ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ವೈರಲ್ ಆದ ವಿಡಿಯೋವನ್ನು ಸ್ವಯಂಪ್ರೇರಿತವಾಗಿ ಗಮನಿಸಿ, ಪೌರಿ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್ ಅವರು ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದರು. ತಂಡವು ಹಲ್ಲೆಕೋರರನ್ನು ಬಂಧಿಸಿದೆ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ರಾಮಮಂದಿರ ಉದ್ಘಾಟನೆಯ ದಿನ ಜೈ ಶ್ರೀರಾಮ್ ಪಠಿಸಲು ಮುಸ್ಲಿಮರಿಗೆ ಆರ್‌ಎಸ್‌ಎಸ್ ನಾಯಕ ಮನವಿ

ಈ ಘಟನೆಯು ನಗರದಲ್ಲಿ ಆತಂಕ ಸೃಷ್ಟಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪೊಲೀಸರು ಸಾರ್ವಜನಿಕರಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ನೀಡದೆ ಶಾಂತಿ ಕಾಪಾಡುವಂತೆ ಸೂಚಿಸಿದ್ದಾರೆ.

ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಮತೀಯವಾದಿ ಗಲಭೆಗಳು ನಡೆದು ಪ್ರಸಕ್ತ ಸಂದರ್ಭಕ್ಕೆ ಹನ್ನೆರಡು ವರ್ಷಗಳಾಯಿತು. 2013ರ ಆಗಸ್ಟ್‌ 24ರಂದು ಹಿಂದೂ ಮತ್ತು ಮುಸ್ಲಿಂ ನಡುವೆ ಕ್ಷುಲಕ ಕಾರಣಕ್ಕೆ ಆರಂಭವಾದ ಈ ಗಲಭೆ ತದನಂತರದಲ್ಲಿ ಧಾರ್ಮಿಕ ಬಣ್ಣವನ್ನು ಪಡೆದುಕೊಂಡು ನಿಯಂತ್ರಣವನ್ನು ಕಳೆದುಕೊಂಡಿತು.

ಈ ಘಟನೆಯಲ್ಲಿ ಒಟ್ಟು 162 ಮಂದಿ ಮೃತಪಟ್ಟಿದ್ದು ಅದರಲ್ಲಿ 10 ಮಂದಿ ಹಿಂದೂಗಳು ಹಾಗೂ 150 ಮಂದಿ ಮುಸ್ಲಿಂ ಸಮುದಾಯದವರಾಗಿದ್ದರು. ಮತ್ತು ಸಾವನ್ನಪ್ಪಿದ್ದ ಇಬ್ಬರ ಗುರುತನ್ನು ಪತ್ತೆಹಚ್ಚಲಾಗಿಲ್ಲ. ಏಳುನೂರಕ್ಕೂ ಅಧಿಕ ಜನರು ಗಾಯಗೊಂಡಿರುವುದು ಮಾತ್ರವಲ್ಲದೇ 50 ಸಾವಿರಕ್ಕೂ ಅಧಿಕ ಮಂದಿ ಮುಸ್ಲಿಮರು ಗಲಭೆ ಪ್ರದೇಶಗಳಿಂದ ಸ್ಥಳಾಂತರಗೊಂಡಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಮತೀಯ ಗಲಭೆಗಳಿಗೆ, ಕೋಮು ಹಿಂಸಾಚಾರಗಳಿಗೆ ಲೆಕ್ಕವಿಲ್ಲ. 1947ರಲ್ಲಿ ನಡೆದ ಜಮ್ಮು ಹತ್ಯಾಕಾಂಡಗಳಿಂದ ಹಿಡಿದು ಇಂದಿಗೂ ನಡೆಯತ್ತಿರುವ ಕೋಮು ಸಂಘರ್ಷಗಳಿಗೆ ಒಂದು ತಾತ್ವಿಕ ಅಂತ್ಯ ಸಿಗದೇ ಇರುವುದು ದುರಾದೃಷ್ಟಕರ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...