ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿ ವರ್ಗಾ ಕಂಪನಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ನಮಗೆ ಕೆಲಸ ನೀಡಬೇಕು, ಇಲ್ಲದಿದ್ದರೆ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ವರ್ಗಾ ಅಟ್ಯಾಚ್ಮೆಂಟ್ ಪ್ರೈ . ಲಿಮಿಟೆಡ್ ನಲ್ಲಿ ಸುಮಾರು 81 ಖಾಯಂ ಕಾರ್ಮಿಕರು 19 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರೆಲ್ಲರೂ ಮಾಲೂರು, ಕೆಜಿಎಫ್, ಕೋಲಾರ, ಬಂಗಾರಪೇಟೆ, ನರಸಾಪುರ, ಮಾಸ್ತಿ ಮತ್ತು ಮುಳಬಾಗಿಲಿನವರು. ಈ ಕಂಪನಿಯು 19 ವರ್ಷಗಳಿಂದ ಬುಲ್ಡೋಜರ್ ಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ತಯಾರಿಸುತ್ತಿದೆ ಮತ್ತು ಯುಎಸ್, ನ್ಯೂಜಿಲೆಂಡ್, ನೆದರ್‌ಲ್ಯಾಂಡ್, ಯುಕೆ, ನಾರ್ವೆ ಇತ್ಯಾದಿಗಳಿಗೆ ರಫ್ತು ಮಾಡುತ್ತಿದೆ. ಆದಾಗ್ಯೂ, ಈ ಕಾರ್ಮಿಕರಿಗೆ ಸರಿಯಾದ ವೇತನ ಇಲ್ಲ. ವರ್ಗಾ ಅಟ್ಯಾಚ್‌ಮಂಟ್ ಯೂನಿಟ್ -1 ರಿಂದ ಗಳಿಸಿದ ಲಾಭದಿಂದ ಈ ಕಂಪನಿಯ ಆಡಳಿತ ಮಂಡಳಿಯು ಇನ್ನೂ ಎರಡು ಹೊಸ ಘಟಕಗಳನ್ನು (ಯೂನಿಟ್ -2 ಮತ್ತು ಯೂನಿಟ್ -3) ತೆರೆಯಲು ಸಾಧ್ಯವಾಯಿತು, ಇದನ್ನು ಈ ಕಂಪನಿಯ ಕಾರ್ಮಿಕರು ಸಕ್ರಿಯಗೊಳಿಸಿದರು. ಆದರೆ ಇದೀಗ ಕಂಪನಿ 81 ಕಾರ್ಮಿಕರನ್ನು ಹೊರಹಾಕಿರುವುದು ಅಷ್ಟೂ ಕಾರ್ಮಿಕರ ಜೀವನವನ್ನು ಸಂಕಷ್ಟಕ್ಕೆ ಈಡು ಮಾಡಿದಂತಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ಸಿಐಟಿಯು ತಾಲೂಕು ಸಂಚಾಲಕ ವೀರಭದ್ರ ಮಾತನಾಡಿ, “ನಿರಂತರವಾಗಿ ಕಾನೂನು ರೀತಿಯಲ್ಲಿ ನಾವು ಪ್ರತಿಭಟನೆ ಮಾಡಕತ್ತಿದ್ದೇವೆ, ಮಾಲೂರು ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ತಂದಿದ್ದೇವೆ. ವರ್ಗಾ ಕಂಪನಿ 81 ಕಾರ್ಮಿಕರನ್ನು ಹೊರ ಹಾಕಿದ್ದು ಸರಿಯಲ್ಲ ಇದರ ವಿರುದ್ಧ ನಾವು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ” ಎಂದರು.
ಇದನ್ನೂ ಓದಿ: ಕೋಲಾರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ
ವರ್ಗಾ ಕಂಪನಿಯ ಕಾರ್ಮಿಕ ಮಾತಾನಾಡಿ, “ನಾವು ರಾತ್ರಿ ಹಗಲು ಕೆಲಸ ಮಾಡಿ ಕಂಪನಿ ಬೆಳೆಸಿದ್ದೇವೆ. ಆದ್ರೆ ವರ್ಗಾ ನ ವೀರ್ಯ ಅಂತ ಮಾಡಿ ನಮಗೆ ನೋಟಿಸ್ ನೀಡಿ ಹೊರಹಾಕಿದ್ದಾರೆ, ನಾವು ನಮ್ಮ ಬೆವರು ಸುರಿಸಿ ಕೆಲಸ ಮಾಡಿದ್ದೇವೆ, ನಮಗೆ ನ್ಯಾಯ ಸಿಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡ್ತೇವೆ” ಎಂದು ತಿಳಿಸಿದರು.
20 ವರ್ಷದಿಂದ ದುಡಿದ ಕಾರ್ಮಿಕರನ್ನೂ ಹೊರ ಹಾಕಿದ್ದು ಸರಿಯಲ್ಲ. ಕೂಡಲೇ ಶಮಾಲೂರು ಶಾಸಕರು ಹಾಗೂ ಕೋಲಾರ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು, ನಾವು ಸರ್ಕಾರ ಹಾಗೂ ಕಾರ್ಮಿಕ ಸಚಿವರ ಗಮನಕ್ಕೆ ತಂದಿದ್ದೇವೆ ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಹೇಳಿದ ಸಿಐಟಿಯು ರಾಜ್ಯ ಮುಖಂಡ ತಿಳಿಸಿದರು.