ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಎಲವೆನಿಲ್ ವಲರಿವನ್ ಚಿನ್ನದ ಪದಕ ಗೆದ್ದಿದ್ದಾರೆ. ಅದೇ ಸ್ಪರ್ಧೆಯಲ್ಲಿ ಮೆಹುಲಿ ಘೋಷ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ವಲರಿವನ್ 253.6 ಅಂಕಗಳನ್ನು ಗಳಿಸಿದ್ದಾರೆ. ವಿಶ್ವ ದಾಖಲೆ ಅಂಕ 254.8 ಆಗಿದ್ದು, ಈ ವರ್ಷ ಪೆರುವಿನಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ ಚೀನಾದ ಜಿಫೀ ವಾಂಗ್ ಈ ದಾಖಲೆ ಸೃಷ್ಟಿಸಿದ್ದಾರೆ.
ಇದನ್ನು ಓದಿದ್ದೀರಾ? ಏಷ್ಯನ್ ಚಾಂಪಿಯನ್‌ಶಿಪ್ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್
ನಿನ್ನೆ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿಯೂ ಭಾರತ ಚಿನ್ನದ ಪದಕ ಗೆದ್ದಿದೆ. ಅರ್ಜುನ್ ಬಬುಟ, ರುದ್ರಾಂಕ್ಷ್ ಪಾಟೀಲ್ ಮತ್ತು ಕಿರಣ್ ಜಾಧವ್ ಚಿನ್ನ ಗೆದ್ದಿದ್ದಾರೆ.
Shooting, Asian Championships: Elavenil Valarivan creates history at the 16th Asian Shooting championships in Shymkent as she secures a brilliant gold with a WR in the finals of the women's 10m AR event.. A total of 253.6 for her in the finals!
— Vishank Razdan (@VishankRazdan) August 22, 2025
Well done Ela.. 👏🇮🇳🥇 pic.twitter.com/2Ay9zYNlN1
