ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

Date:

Advertisements

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ ದಾಳಿಯಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಿ, 50 ಕೆಜಿ 452 ಗ್ರಾಂ ಗಾಂಜಾ ಹಾಗೂ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ₹30 ಲಕ್ಷ ಎಂದು ಅಂದಾಜಿಸಲಾಗಿದೆ.

ಜೂನ್‌ನಲ್ಲಿ ಆರಂಭವಾದ ತನಿಖೆ

ಜೂನ್ ತಿಂಗಳಲ್ಲಿ ತಾಜೀಬ ಅಬ್ದುಲ್ ರಜಾಕ ಮುಲ್ಲಾ ಮತ್ತು ಅನುರಾಗ ಉದಯಕುಮಾರ ಯರಳಾನಕರರನ್ನು ಪೊಲೀಸರು ಬಂಧಿಸಿ, ಅವರಿಂದ 5.562 ಕೆಜಿ ಗಾಂಜಾ, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಮುಂಬೈಗೆ ತೆರಳಿ, ಮುಖ್ಯ ಆರೋಪಿ ಇಸ್ಮಾಯಿಲ್ ಸಯ್ಯದನ ಮಾವ ಅಬ್ದುಲಮಜೀದ ಅಬ್ದುಲಸತ್ಕಾರ ಮುಖಾದಮನ ಮನೆಯಿಂದ 2 ಕೆಜಿ 16 ಗ್ರಾಂ ಗಾಂಜಾ ಪತ್ತೆಹಚ್ಚಿ ಬಂಧಿಸಿದ್ದರು.

Advertisements

ಆಗಸ್ಟ್ 21ರಂದು ದೊಡ್ಡ ದಾಳಿ

ಆಗಸ್ಟ್ 21ರಂದು ಸದ್ದಾಂ (ಇಸ್ಮಾಯಿಲ್ ಸಯ್ಯದ) ಮತ್ತು ತಾಜೀರ್ ಗುಡುಸಾಬ ಬಸ್ತವಾಡೆ ತಮ್ಮ ಮಾವನನ್ನು ಹಿಂಡಲಗಾ ಜೈಲಿನಲ್ಲಿ ಭೇಟಿ ಮಾಡಲು ಬರಲಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಇನ್ಸಪೆಕ್ಟರ್ ಆರ್. ಗಡ್ಡೆಕರ ನೇತೃತ್ವದ ತಂಡ ಸುಳಗಾ ಗ್ರಾಮದ ಬಳಿಯ ಚಂದಗಡ–ಬೆಳಗಾವಿ ರಸ್ತೆಯಲ್ಲಿ ದಾಳಿ ನಡೆಸಿತು.

ಈ ವೇಳೆ ಇಬ್ಬರ ಜೊತೆಗೆ ಗಾಂಜಾ, ಪಡ್ಲರ್‌ಗಳಾದ ಪ್ರಥಮೇಶ ದಿಲೀಪ ಲಾಡ್, ತೇಜಸ್ ಭೀಮರಾವ್ ವಾಜರ, ಶಿವಕುಮಾರ ಬಾಳಕೃಷ್ಣ ಆಸಬೆ ಮತ್ತು ರಮಜಾನ್ ದಸ್ತಗೀರ ಜಮಾದಾರರನ್ನು ಸಹ ಬಂಧಿಸಲಾಯಿತು.

ವಶಪಡಿಸಿಕೊಂಡ ವಸ್ತುಗಳು

ಗಾಂಜಾ : 50 ಕೆಜಿ 452 ಗ್ರಾಂ, (ಒಟ್ಟು) ಕಾರುಗಳು 2, ಮೋಟಾರ್ಸೈಕಲ್ 1, ಮೊಬೈಲ್‌ಗಳು 13, ಡಿಜಿಟಲ್ ತಕ್ಕಡಿ : 1

ಮಾರಕಾಸ್ತ್ರಗಳು ಹಾಗೂ ₹4,500 ನಗದು ಇತರ 11 ವಸ್ತುಗಳು

ರಾಜ್ಯಗಳ ನಡುವೆ ವಿಸ್ತರಿಸಿದ ಜಾಲ

ತನಿಖೆಯಿಂದ ಸದ್ದಾಂ (ಇಸ್ಮಾಯಿಲ್ ಸಯ್ಯದ) ತನ್ನ ಸಹಚರರೊಂದಿಗೆ ಮಧ್ಯಪ್ರದೇಶದಿಂದ ಗಾಂಜಾ ಖರೀದಿಸಿ ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಬೆಂಗಳೂರು, ಗೋವಾ ಹಾಗೂ ಪಕ್ಕದ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದನೆಂಬುದು ಬೆಳಕಿಗೆ ಬಂದಿದೆ. ಇವನ ವಿರುದ್ಧ ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಹಾಗೂ ಮಹಾರಾಷ್ಟ್ರದ ಪೂಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಬೆಳಗಾವಿ : ಬಸ್ ಲಾರಿ ಡಿಕ್ಕಿ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಹತ್ತಿರ ಭಾನುವಾರ ಬೆಳಿಗ್ಗೆ...

Download Eedina App Android / iOS

X