ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸಹಾಯಕ ನಿರ್ದೇಶಕ ಆರ್. ಮಾರುತಿ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಇದುವರೆಗೂ ಅವರು ವರ್ಗಾವಣೆಗೊಂಡಿರಲಿಲ್ಲ ಎಂಬುದು ವಾಸ್ತವ.
ಇವರು ಹಲವಾರು ಬಾರಿ ವರ್ಗಾವಣೆಯಾದಾಗಲೂ ತಮ್ಮ ಪ್ರಭಾವ ಬಳಸಿಕೊಂಡು ಇದೇ ಜಾಗದಲ್ಲಿ ಮುಂದುವರೆದಿದ್ದಲ್ಲದೇ ಕಳೆದ ಎರಡು ವರ್ಷಗಳದ ಇಲ್ಲಿ ತೆರವಾಗಿದ್ದ ಹಿರಿಯ ಸಹಾಯಕರ ಹುದ್ದೆಗೆ ಯಾರೂ ಬರದಂತೆ ನೋಡಿಕೊಂಡಿದ್ದರು ಎಂಬ ಆರೋಪವೂ ಇವರ ಮೇಲೆ ಕೇಳಿ ಬಂದಿತ್ತು.

ಇವರು ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಇವರ ವರ್ಗಾವಣೆಗೆ ಕ್ರಮ ಕೈಗೊಂಡಿರಲಿಲ್ಲ. ಇಂದು ಸರ್ಕಾರದ ಅಧೀನ ಕಾರ್ಯದರ್ಶಿಯವರು ಇವರನ್ನು ದಾವಣಗೆರೆಯ ವಾರ್ತಾ ಇಲಾಖೆಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಕೆಲವೊಂದು ಸ್ಥಳೀಯ ಪತ್ರಕರ್ತರು ಹಾಗೂ ಡಿಜಿಟಲ್ ಮಾಧ್ಯಮದ ಪತ್ರಕರ್ತರು ವಾರ್ತಾ ಇಲಾಖೆಯ ಕಚೇರಿಗೆ ಬರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಎಲ್ಲ ಬೆಳವಣಿಗೆಯ ನಡುವೆ ಅವರನ್ನು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜೆಸಿಂತಾ ಅವರು ದಾವಣಗೆರೆ ವರ್ಗಾವಣೆಗೊಳಿಸಿ, ಆಗಸ್ಟ್ 22ರಂದು ಆದೇಶ ಹೊರಡಿಸಿದ್ದಾರೆ.