ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ ಜೇನು ಸಾಕಾಣಿಕೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನಲೆ ರೈತರು ಹೆಚ್ಚು ಜೇನು ಸಾಕಾಣಿಕೆ ತರಬೇತಿ ಪಡೆಯಿರಿ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಕರೆ ನೀಡಿದರು.
ಗುಬ್ಬಿ ಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಜೇನು ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಜೇನು ಹುಳು ಗಿಡದಿಂದ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ಅತ್ಯುತ್ತಮವಾಗಿ ನಡೆಸುತ್ತದೆ. ಈ ಹಿನ್ನಲೆ ಬೆಳೆ ಇಳುವರಿ ಹೆಚ್ಚಲಿದೆ. ಈಗಾಗಲೇ ತೆಂಗು ಅಡಿಕೆ ಬೆಳೆ ಇಳುವರಿ ಕುಸಿತ ಕಾಣುತ್ತಿದೆ. ಈ ಸಮಯ ಜೇನುಕೃಷಿ ಉತ್ತಮ ಸಲಹೆ ಎಂದರು.
ಪ್ರತಿ ವರ್ಷ ಬೆಳೆಗಳಿಗೆ ಹೊಸ ರೋಗಗಳು ಕಾಣಿಸಿಕೊಳ್ಳುತ್ತದೆ. ಪರಾಗಸ್ಪರ್ಶ ಎನ್ನುವುದು ಕಡಿಮೆಯಾಗಿರುವುದು ಸಹ ಇದಕ್ಕೆ ಒಂದು ಕಾರಣ ಎನ್ನುವುದು. ಜೇನು ಕೃಷಿಗೆ ಕಡಿಮೆ ಸಮಯ ವ್ಯಯ ಮಾಡಿದರೆ ಸಾಕು. ಕೃಷಿ ಮಧ್ಯೆ ನಡೆಯುವ ಹುಳು ಸಾಕಾಣಿಕೆ ಉತ್ತಮ ಜೇನುತುಪ್ಪ ಸಹ ಸಿಗಲಿದೆ. ಇದಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆಯ ಮೊತ್ತ ಸಿಗಲಿದೆ. ಕೆಜಿಗೆ 500 ರಿಂದ ಮಾರಾಟ ಆಗುತ್ತದೆ. ಮರದಿಂದ ಮರಕ್ಕೆ ಹಾರುವ ಜೇನುಹುಳು ಹೂವಿನಲ್ಲಿ ತುಪ್ಪ ಹೀರುವ ಜೊತೆ ಹೂವಿನ ಪರಾಗಸ್ಪರ್ಶ ಮಾಡುತ್ತದೆ. ಈ ಬಗ್ಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ರೈತರಿಂದ ಮಾಹಿತಿ ಸಿಗುತ್ತದೆ. ಸರ್ಕಾರ ಜೇನು ಕೃಷಿಗೆ ಸಬ್ಸಿಡಿ ನೀಡುತ್ತಿದೆ. ಹೆಚ್ಚಿನ ಮಾಹಿತಿ ತೋಟಗಾರಿಕೆ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದರು.
ಜೇನು ಸಾಕಾಣಿಕೆ ತರಬೇತಿದಾರ ಶ್ರೀಧರ್ ಮಾತನಾಡಿ ಜೇನುಹುಳು ಸಾಕಾಣಿಕೆ ಭಯ ಪಡುವ ಅಗತ್ಯವಿಲ್ಲ. ತೋಟದಲ್ಲಿ ಸ್ವಲ್ಪ ಜಾಗ ನಿಗದಿ ಮಾಡಬೇಕಿದೆ. ಸ್ವಚ್ಛತೆ ಕಾಪಾಡಿದರೆ ಜೇನುಕೃಷಿ ಅಚ್ಚುಕಟ್ಟಾಗಿ ನಡೆಸಬಹುದು. ತುಡುವೆ ಜೇನು ನಮ್ಮಲ್ಲಿ ಬಹು ಬೇಡಿಕೆಯ ಸಾಕಾಣಿಕೆ ಹುಳು. ಪ್ರತಿ ನಿತ್ಯ ಅರ್ಧ ಗಂಟೆ ಸಮಯ ಸಾಕಾಣಿಕೆಗೆ ನೀಡಿದರೆ ನಿಮ್ಮ ತೋಟದಲ್ಲಿ ವರ್ಷದಲ್ಲೇ ಉತ್ತಮ ಇಳುವರಿ ನೋಡಬಹುದಾಗಿದೆ. ಜೇನು ಕೃಷಿಗೆ ಸರ್ಕಾರ ಸಾಕಾಣಿಕೆ ಪೆಟ್ಟಿಗೆಗೆ ಸಬ್ಸಿಡಿ ನೀಡುತ್ತದೆ. ಇಚ್ಛೆಯುಳ್ಳ ರೈತರು ಪೆಟ್ಟಿಗೆ ಖರೀದಿಗೆ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಪಡೆದು ಜೇನು ಸಾಕಾಣಿಕೆ ಮಾಡಬಹುದು. ತರಬೇತಿ ಪಡೆದ ರೈತರು ನಮ್ಮ ಜಿಲ್ಲೆಯಲ್ಲಿ ಬಹಳ ಮಂದಿ ಇದ್ದಾರೆ. ಯಶಸ್ಸು ಕಂಡ ರೈತರು ಸಹ ಇದ್ದಾರೆ. ತುಪ್ಪ ಸಹ ಬೇಡಿಕೆ ಇದೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಮೂಲಕ ಸಂಪರ್ಕಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಜೇನು ಪೆಟ್ಟಿಗೆ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ತೋಟಗಾರಿಕೆ ಅಧಿಕಾರಿಗಳಾದ ಜಗದೀಶ್, ಗವಿರಂಗಸ್ವಾಮಿ, ಐಡಿಎಫ್ ಸಂಸ್ಥೆಯ ಗಿರೀಶ್ ಸೇರಿದಂತೆ ತರಬೇತಿಗೆ ನೂರಾರು ರೈತರು ಆಗಮಿಸಿದ್ದರು.
https://shorturl.fm/skWfT