ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ವೂ ಶ್ರೇಣಿಕೃತ ವ್ಯವಸ್ಥೆಯಲ್ಲಿದೆ. ಪ್ರಜೆಯಿಂದ ಪ್ರಜೆಗೆ ಭಿನ್ನವಾಗಿದೆ. ರಾಜಕಾರಣಿಗಳು ಏನೇ ಮಾತನಾಡಿದರೂ ಸರಿ, ಅದು ಆಡಳಿತ ಪಕ್ಷದವರಿರಲೀ ಅಥವಾ ವಿರೋಧ ಪಕ್ಷದವರಿರಲೀ ಎರಡೂ ಕಡೆಯವರೂ ಒಂದಾಗಿ ಬಿಡುತ್ತಾರೆ. ಬಡ ಹೆಣ್ಣು ಮಕ್ಕಳ ಸಾವಿಗೆ, ಅವರ ಮೇಲೆ ನಡೆದ ಅತ್ಯಾಚಾರಕ್ಕೆ, ದೌರ್ಜನ್ಯಕ್ಕೂ ಕೇಳುವವರೇ ಇಲ್ಲವಾಗಿದೆ.
ಪ್ರಶ್ನೆ ಮಾಡಿದವರನ್ನೇ ಜೈಲಿಗಟ್ಟುವ ಸರ್ವಾಧಿಕಾರೀ ವ್ಯವಸ್ಥೆ ನಿರ್ಮಾಣವಾಗಿದೆ. ಈ ಜಾತ್ಯಾತೀತ ಸಂವಿಧಾನ ಅಡಿಯಲ್ಲಿ ಅಧಿಕಾರ ನಡೆಸುವ ಯಾವುದೇ ಸರಕಾರಗಳು ಧರ್ಮದ ವಿಚಾರ ಬಂದಾಗ ಸಮಾನ ನಿಲುವು, ಸಮಾನ ಧೋರಣೆ, ಸಮಾನ ಅನುಕಂಪ, ಸಮಾನ ಆಚರಣೆ, ಸಮಾನ ಅಧಿಕಾರವನ್ನು ಪ್ರಯೋಗಿಸುತ್ತಿದ್ದಾವೆ.
ಸಮಾಜದಲ್ಲಿ ನಡೆಯುವ ವಿಧ್ಯಾಮಾನಗಳನ್ನು ನೋಡಿದಾಗ ಜಾತ್ಯಾತೀತತೆ ಮೂಲೆಗುಂಪಾಗಿ ಧರ್ಮವೇ ಸರಕಾರವನ್ನು ನಡೆಸುತ್ತಿದೆಯೇ ಅಥವಾ ಸರಕಾರವೇ ಧರ್ಮಾಧಿಕಾರಿಗಳಿಗೆ ಶರಣಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ನಿಜವಾಗಿಯೂ ತನ್ನ ಮೌಲ್ಯಗಳು ಉಳಿಸಿಕೊಳ್ಳುತ್ತದೋ ಎನ್ನುವ ಆತಂಕ ಮೂಡುತ್ತದೆ.
ಉಳ್ಳವನಿಗೊಂದು ನೀತಿ ಇಲ್ಲದವನಿಗೊಂದು ನೀತಿ, ಈ ರೀತಿಯ ಧೋರಣೆಗಳು ಮೇಲ್ಪಂಕ್ತಿಗೆ ಬಂದಿದ್ದಾವೆ. ಅಲ್ವ ಸ್ವಲ್ಪ ಕಾಂಗ್ರೆಸ್ ಮೇಲೆ ಇಟ್ಟ ಆಶಾ ಭಾವನೆಗಳೂ ಕೂಡಾ ಮಣ್ಣು ಪಾಲಾಗುತ್ತಿದೆ.
ಅಶಕ್ತರ, ದೀನದಲಿತರ, ಬಡವರ, ಶೋಷಿತರ ಬಾಳು ಮೂರಾಬಟ್ಟೆ ಆಗುವ ಲಕ್ಷಣಗಳು ಗೋಚರಿಸತೋಡಗಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ವಿಷಾಧ ವ್ಯಕ್ತಪಡಿಸಿದ್ದಾರೆ.
I was suggested this web site by my cousin Im not sure whether this post is written by him as no one else know such detailed about my trouble You are incredible Thanks