ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ದಸಂಸ ವತಿಯಿಂದ ಶುಕ್ರವಾರದಂದು ಪ್ರತಿಭಟನೆ ನಡೆಸಲಾಗಿದೆ.
ಮಹಾತ್ಮ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ಬಿ. ಆರ್ ನೀಲಕಂಠಪ್ಪನವರ ಸ್ಮರಣರ್ಥವಾಗಿ ನಿರ್ಮಾಣವಾಗಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ, ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ಹಾಗೂ ಬಸ್ ನಿಲ್ದಾಣವನ್ನು ಹಡಗುತಾಣವಾಗಿದೆ. ಗುತ್ತಿಗೆದಾರರಿಗೆ ಗೋಡನ್ ಬಳಸುತ್ತಿರುವುದನ್ನು ಹಾಗೂ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ತೆರವುಗೊಳಿಸಬೇಕು. ಹಾಗೆಯೇ, ತರೀಕೆರೆ ತಾಲೂಕು ಕಚೇರಿಯ ಮುಂಭಾಗದಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಬೇಕೆಂದು ಪ್ರತಿಭಟನೆ ಮೂಲಕ ತರೀಕೆರೆ ಪುರಸಭೆ ಆರ್. ಓ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ದಸಂಸ ಮುಖಂಡ ಎಚ್.ಎಸ್ ರಾಜಪ್ಪ ಈದಿನ.ಕಾಮ್ ಗೆ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ
ಈ ವೇಳೆ ದಸಂಸ ತಾಲೂಕು ಸಂಘಟನಾ ಸಂಚಾಲಕರಾದ ಕೂಡ್ಲುರ್ ವಿಜಯ್, ರಂಗೇನಹಳ್ಳಿ ಸಿದಿಕ್, ಶಿವು, ತಾಲೂಕು ಬಂಜಾರ ಸಮುದಾಯದ ಮುಖಂಡರಾದ ವಿಜಯಕುಮಾರ್, ಹೇಮಂತ್, ಶಾಮ್, ವಿಜಯ್ ಕುಮಾರ್, ಯೆರೇಹಳ್ಳಿ ಪರಮೇಶ್, ಪರಮೇಶ್ ಹಾಗೂ ಇನ್ನಿತರರಿದ್ದರು.