ವಾಹನ ಚಲಾಯಿಸುವಾಗ ಹೆಲ್ಮಟ್, ಸೀಟ್ ಬೆಲ್ಟ್ ಧರಿಸದವರಿಗೆ ಗುಲಾಬಿ ಹೂ ಕೊಡುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರು ಪೊಲೀಸರು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ಅವಸರದಿಂದ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಅಪಾಯಕಾರಿಯಾಗಿದೆ. ದ್ವಿಚಕ್ರ ವಾಹನ ಅಪಘಾತದಲ್ಲಿ ತಲೆಗೆ ಪೆಟ್ಟು ಬೀಳುವುದು ಸಾಮಾನ್ಯ. ಇದರಿಂದ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಹೆಲ್ಮಟ್ ಧರಿಸುವುದು ಕಡ್ಡಾಯ. ಕಾರು ಚಾಲಕರು ಸಹ ಸೀಟ್ ಬೆಲ್ಟ್ ಧರಿಸಬೇಕು. ಈ ಬಾರಿ ಅರಿವು ಮೂಡಿಸಲು ಗುಲಾಬಿ ಹೂ ನೀಡುತ್ತಿದ್ದೇವೆ. ಮುಂದಿನ ಬಾರಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದರು.
ಇದನ್ನೂ ಓದಿದ್ದೀರಾ?ತರೀಕೆರೆ l ಸರ್ಕಾರಿ ಜಾಗದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಆರೋಪ; ದಸಂಸ ಪ್ರತಿಭಟನೆ
ಹೆಲ್ಮಟ್ ಜೀವರಕ್ಷಕ ಅದನ್ನು ತಪ್ಪದೇ ಬಳಸಿ ಎಂದು ಜಾಗೃತಿ ಮೂಡಿಸಿದರು. ಅಲ್ಲದೇ ಅತಿವೇಗ, ಅಪ್ರಾಪ್ತರಿಗೆ ವಾಹನ ನೀಡುವುದು, ಹೆಲ್ಮಟ್ ಧರಿಸದೆ ಚಾಲನೆ ಮಾಡುವುದು ಇಂತಹ ತಪ್ಪುಗಳಿಂದ ಅಪಘಾತಗಳು ಹೆಚ್ಚುತ್ತಿವೆ. ಸರ್ಕಾರ ವಿವಿಧ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಜೀವ ಮತ್ತು ಕುಟುಂಬದ ಮಹತ್ವವನ್ನು ಅರಿತು ಸುರಕ್ಷಿತವಾಗಿ ವಾಹನ ಓಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.