- ಪಡಿತರ ಆಹಾರ ಧಾನ್ಯ ಮತ್ತು ನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಆಗ್ರಹ
- ಆಗಸ್ಟ್ 14 ಮತ್ತು 15 ರಂದು ಎರಡು ದಿನ ರಾಜ್ಯಾದ್ಯಂತ ಅಹೋರಾತ್ರಿ ಧರಣಿ
ಪಡಿತರ ಆಹಾರ ಧಾನ್ಯ ಮತ್ತು ನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆಯಿಂದ ರಾಜ್ಯಾದ್ಯಂತ ಎರಡು ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಕೂಸ್ ರಾಜ್ಯ ಮುಖಂಡ ಗುರುರಾಜ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸ್ವಾತಂತ್ರ್ಯ ದಿವಸದ ಅಂಗವಾಗಿ ರೈತರ ಮತ್ತು ಕಾರ್ಮಿಕರ ಹಿತ ದೃಷ್ಟಿಯಿಂದ , ಪೌಷ್ಟಿಕಾಂಶದ ಕೊರತೆ ನೀಗಿಸುವುದಕ್ಕಾಗಿ ಅನುಕೂಲಕರ ದರದಲ್ಲಿ ಪಡಿತರದಲ್ಲಿ ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಅಕ್ಕಿಯೊಂದಿಗೆ ರಾಗಿ ಅಥವಾ ಜೋಳ ಮತ್ತು 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಎಣ್ಣೆ ಅನುಕೂಲಕರ ದರದಲ್ಲಿ ಕೊಡಬೇಕೆಂದು ಒತ್ತಾಯಿಸಿ ಆಗಸ್ಟ್ 14 ಮತ್ತು 15 ರಂದು ಪ್ರತಿಭಟನೆ ನಡೆಸಲಿದ್ದೇವೆ” ಎಂದು ಮಾಹಿತಿ ನೀಡಿದ್ದರು.
“ರೈತರ ಬೆಳೆಗೂ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ದೊರೆತರೆ ಕಾರ್ಮಿಕರಿಗೆ ಪೌಷ್ಟಿಕ ಆಹಾರ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ 90 ದಿವಸಗಳಿಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ BOCW ಅಡಿಯಲ್ಲಿ ಕಾರ್ಮಿಕ ಚೀಟಿಗಳನ್ನು ನೀಡಬೇಕೆಂದು ಒತ್ತಾಯಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಏಮ್ಸ್ ಮಂಜೂರಾತಿ ಕುರಿತು ಪ್ರಾಣ ತ್ಯಾಗಕ್ಕೂ ಸಿದ್ಧ: ಕಾಂಗ್ರೆಸ್ ಮುಖಂಡ
“ಅಪೌಷ್ಟಿಕತೆ ನೀಗಿಸುವ ಆಹಾರ ಭದ್ರತೆ ಮತ್ತು ಆರೋಗ್ಯ ಶಿಕ್ಷಣವು ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಾಗಿದ್ದು, ರೈತರ ಮತ್ತು ಕಾರ್ಮಿಕರಿಗೆ ಏಕಕಾಲಕ್ಕೆ ಪ್ರಯೋಜನೆ ಆಗಬೇಕು” ಎಂದು ತಿಳಿಸಿದರು.