ಭಾರತೀಯರು ಮತ್ತು ಏಷ್ಯನ್ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಅಪಘಾತವಾಗಿ ಭಾರತೀಯರು ಸೇರಿ ಐವರು ಸಾವನ್ನಪ್ಪಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.
ಆಗಸ್ಟ್ 22ರಂದು ಪ್ರವಾಸಿ ಬಸ್ ನಯಾಗರಾ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ 54 ಜನರಿದ್ದ ಬಸ್ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಯುಎಸ್‌ನ ಪ್ರತಿ ಐವರು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರು!
ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರಲ್ಲಿ ಭಾರತೀಯ, ಚೀನೀ ಮತ್ತು ಫಿಲಿಪಿನೋಗಳಾಗಿದ್ದರು. ತುರ್ತು ಪ್ರತಿಕ್ರಿಯೆಗೆ ಸಹಾಯ ಮಾಡಲು ಅಧಿಕಾರಿಗಳು ಅನುವಾದಕರ ಸಹಾಯ ಪಡೆದರು ಎಂದು ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸ್ ಚಾಲಕನ ಗಮನ ಬೇರೆಡೆ ಹೋಗಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದು, ಬಸ್ ಬಲ ಭಾಗಕ್ಕೆ ಪಲ್ಟಿಯಾಗಿದೆ ಎಂದು ಪೊಲೀಸ್ ಅಧಿಕಾರಿ ಮೇಜರ್ ಅಂಡ್ರೆ ರೇ ಹೇಳಿದ್ದಾರೆ. ಆದರೆ ನಿಖರವಾದ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
