ಯುಎಸ್‌ನ ಪ್ರತಿ ಐವರು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರು!

Date:

ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ವಲಸಿಗ ವೈದ್ಯರು, ಶಸ್ತ್ರಚಿಕಿತ್ಸಕರ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಫಿಲಿಪೈನ್ಸ್ ಮತ್ತು ಮೆಕ್ಸಿಕೋ ನಂತರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡುವ ಅತೀ ಹೆಚ್ಚು ವಲಸಿಗ ವೈದ್ಯರು ಭಾರತೀಯರು ಆಗಿದ್ದಾರೆ.

ಯುಎಸ್ ಮೂಲದ ರೆಮಿಲ್ಟಿ ಸಂಸ್ಥೆಯ ಇಮಿಗ್ರಂಟ್ ಹೆಲ್ತ್‌ಕೇರ್ ಇಂಡೆಕ್ಸ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಒಟ್ಟು 9.9 ಲಕ್ಷ ವೈದ್ಯರಲ್ಲಿ ಸುಮಾರು 2.6 ಲಕ್ಷ (ಶೇ. 26.5) ವಲಸಿಗರು. ಶುಶ್ರೂಷಾ ಸಹಾಯಕರು ಸೇರಿದಂತೆ ಆರೋಗ್ಯ ವೃತ್ತಿಪರರ ವಿಷಯದಲ್ಲಿ ಭಾರತವು ಅಗ್ರ ರಾಷ್ಟ್ರವಾಗಿದೆ ಎಂದು ವೀಸಾ ವರ್ಜ್ ವರದಿ ಮಾಡಿದೆ.

ಪ್ರತಿ ಐದು ವಲಸಿಗ ವೈದ್ಯರಲ್ಲಿ ಒಬ್ಬರು ಭಾರತೀಯರಾಗಿದ್ದು, ಯುಎಸ್‌ನಲ್ಲಿ ಸುಮಾರು 59,000 ಮಂದಿ ಭಾರತೀಯ ವೈದ್ಯರು ಇದ್ದಾರೆ. ವಲಸೆ ವೈದ್ಯರ ಪೈಕಿ ಕೇವಲ 16,000 (ಶೇಕಡ 16) ಚೀನಾ ಅಥವಾ ಹಾಂಗ್ ಕಾಂಗ್‌ಗೆ ಸೇರಿದವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ವಲಸಿಗರ ವಿಷಯದಲ್ಲಿ ನಾವು ದುರ್ಬಲರಲ್ಲ: ಜೈಶಂಕರ್‌ಗೆ ಕೆನಡಾ ಸಚಿವ ತಿರುಗೇಟು

ನ್ಯೂಜೆರ್ಸಿ, ನ್ಯೂಯಾರ್ಕ್ ಮತ್ತು ಫ್ಲೋರಿಡಾದಲ್ಲಿ ಅತೀ ಹೆಚ್ಚು ವಲಸಿಗ ವೈದ್ಯರಿದ್ದು, ಸುಮಾರು 13,000 (ಶೇ. 5) ಪಾಕಿಸ್ತಾನದ ವಲಸಿಗರು ಇಲ್ಲಿದ್ದಾರೆ. ಇನ್ನು 34.1 ಲಕ್ಷ ವಲಸಿಗರು ಸಕ್ರಿಯವಾಗಿ ಉದ್ಯೋಗ ಮಾಡಿಕೊಂಡಿದ್ದು, 5.4 ಲಕ್ಷ (ಶೇ. 16) ವಲಸಿಗರು ನೋಂದಾಯಿತ ನರ್ಸ್‌ಗಳಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಯುಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1.4 ಲಕ್ಷ (ಶೇಕಡ 26) ನರ್ಸ್‌ಗಳು ಫಿಲಿಪೈನ್ಸ್‌ ಮೂಲದವರಾಗಿದ್ದಾರೆ. 32,000 (ಶೇಕಡ 6) ಭಾರತೀಯರಾದರೆ, ಸುಮಾರು 24,000 (ಶೇಕಡ 5) ನೈಜೀರಿಯಾದ ವಲಸಿಗರು ಆಗಿದ್ದಾರೆ.

ಇದನ್ನು ಓದಿದ್ದೀರಾ?  ಗದಗ | ʼವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿʼ ಅಭಿಯಾನ

ನ್ಯೂಜೆರ್ಸಿ, ನೆವಾಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಾಗಿ ವಲಸಿಗರು ನರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಯುಎಸ್‌ನಲ್ಲಿ ಒಟ್ಟು 2.7 ಕೋಟಿ (ಶೇಕಡ 18) ವಲಸಿಗ ಆರೋಗ್ಯ ವೃತ್ತಿಪರರ ಪೈಕಿ ಭಾರತೀಯರು ಸುಮಾರು 1.8 ಲಕ್ಷ (ಶೇ. 7) ರಷ್ಟಿದ್ದಾರೆ.

ಪ್ರಕಟಣೆಯ ಪ್ರಕಾರ, ಫಿಲಿಪೈನ್ಸ್‌ನ ಆರೋಗ್ಯ ಕಾರ್ಯಕರ್ತರು ಒಟ್ಟು ಜನಸಂಖ್ಯೆಯ ಸುಮಾರು 3.5 ಲಕ್ಷ (ಶೇ. 13) ರಷ್ಟಿದ್ದು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಂತರದ ಸ್ಥಾನವನ್ನು ಮೆಕ್ಸಿಕನ್‌ ಪಡೆದುಕೊಂಡಿದ್ದರು, 2.7 ಲಕ್ಷ (ಶೇ. 10) ಮೆಕ್ಸಿಕನ್ ವಲಸಿಗರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

FACT CHECK | ತಾಯಿಯೋರ್ವಳು ತನ್ನ ಮಗನಿಗೆ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೋ ಕರ್ನಾಟಕದ್ದಲ್ಲ; ಏನಿದು ಪ್ರಕರಣ?

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ದಯವಾಗಿ...

ಉತ್ತರ ಪ್ರದೇಶದ ಕನ್ವರ್ ಯಾತ್ರೆಯಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಲು ಆದೇಶ: ಸುಪ್ರೀಂನಲ್ಲಿ ಅರ್ಜಿ

ಕನ್ವರ್‌ ಯಾತ್ರೆ ಯುದ್ದಕ್ಕೂ ಇರುವ ಅಂಗಡಿ ಮಾಲೀಕರು ತಮ್ಮ ಹೆಸರುಗಳನ್ನು ಕಡ್ಡಾಯವಾಗಿ...

ಬಿಜೆಪಿ ನೇತೃತ್ವದ ಸರ್ಕಾರ ಹೆಚ್ಚು ಕಾಲ ಉಳಿಯದು: ಟಿಎಂಸಿ ರ್‍ಯಾಲಿಯಲ್ಲಿ ಅಖಿಲೇಶ್, ಮಮತಾ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು...

ಗುಜರಾತ್ | ಪೇಟ ಮತ್ತು ಸನ್ ಗ್ಲಾಸ್ ಧರಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

ದೇಶಾದ್ಯಂತ ಜಾತಿ ದೌರ್ಜ್ಯನದ ಘಟನೆಗಳು ಹೆಚ್ಚುತ್ತಲೇ ಇವೆ. ಇತ್ತೀಚಿನ ಘಟನೆಯೊಂದರಲ್ಲಿ, ಪೇಟ...