ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಸಿಒಎಂ) ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿಗೆ ನಿವಾಸ ಸೇರಿ, ಸಂಬಂಧಿಸಿದ ಸ್ಥಳಗಳಿಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ. ಹಾಗೆಯೇ ಶನಿವಾರ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 2,000 ಕೋಟಿ ರೂ. ನಷ್ಟ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಸಿಬಿಐ ತಂಡವು ಮುಂಬೈನಲ್ಲಿರುವ ಅನಿಲ್ ಅಂಬಾನಿ ನಿವಾಸದಲ್ಲಿ ಬೆಳಗಿನ ಜಾವ ಶೋಧ ನಡೆಸಿದ್ದು, ತಂಡ ಬಂದಾಗ ಅನಿಲ್ ಅಂಬಾನಿ, ಅವರ ಪತ್ನಿ ಮತ್ತು ಅವರ ಮಕ್ಕಳು ಮನೆಯಲ್ಲಿದ್ದರು. ಎಸ್‌ಬಿಐ ದೂರಿನ ನಂತರ ಜೂನ್ 13ರಂದು ಸಂಸ್ಥೆ ಮತ್ತು ಅದರ ಮಾಲೀಕರುಗಳ ಮೇಲೆ ದಾಳಿ ನಡೆಸಲಾಗಿದೆ.
ಇದನ್ನು ಓದಿದ್ದೀರಾ? ಮೈಸೂರು | ಹಿರಿಯರ ತ್ಯಾಗದಿಂದ ಬ್ಯಾರಿ ಸಮುದಾಯ ಗೌರವದಿಂದ ಬದುಕುತಿದೆ : ಯು ಟಿ ಖಾದರ್
“ಜೂನ್ 24ರಂದು ಬ್ಯಾಂಕ್ ವಂಚನೆಯ ಬಗ್ಗೆ ಆರ್‌ಬಿಐಗೆ ವರದಿ ಮಾಡಿದ್ದು, ಸಿಬಿಐಗೆ ದೂರು ನೀಡುವ ಪ್ರಕ್ರಿಯೆಯಲ್ಲಿದೆ” ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ತಿಂಗಳು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.
ಇನ್ನು ಬ್ಯಾಂಕ್ ಅನಿಲ್ ಅಂಬಾನಿ ವಿರುದ್ಧ ಐಬಿಸಿ ಅಡಿಯಲ್ಲಿ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ. ಆಗಸ್ಟ್ 5ರಂದು ಜಾರಿ ನಿರ್ದೇಶನಾಲಯ (ಇಡಿ) ಸುಮಾರು 10 ಗಂಟೆಗಳ ಕಾಲ ಅಂಬಾನಿಯನ್ನು ಪ್ರಶ್ನಿಸಿದೆ. ಹಾಗೆಯೇ 17,000 ಕೋಟಿ ರೂ.ಗೂ ಹೆಚ್ಚು ಒಳಗೊಂಡ ಬಹು ಬ್ಯಾಂಕ್ ಸಾಲ ವಂಚನೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಅನಿಲ್ ಅಂಬಾನಿ ನಿವಾಸ ಇತರೆಡೆ ದಾಳಿ ನಡೆಸಿದೆ.
ಅಂಬಾನಿ ದಾಖಲೆಗಳನ್ನು ಸಲ್ಲಿಸಲು 10 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ತನಿಖಾಧಿಕಾರಿಗಳು ಯೆಸ್ ಬ್ಯಾಂಕ್ ನೀಡಿದ ಸಾಲಗಳಲ್ಲಿನ ಅಕ್ರಮಗಳು ಮತ್ತು ಶೆಲ್ ಕಂಪನಿಗಳ ಮೂಲಕ ಹಣವನ್ನು ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
