ತುಮಕೂರು | ಅಲೆಮಾರಿಗಳನ್ನು ಬೀದಿ ಪಾಲು ಮಾಡಿದ ಕಾಂಗ್ರೆಸ್ ಸರ್ಕಾರ : ಎ. ನರಸಿಂಹಮೂರ್ತಿ

Date:

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಶೇ. 1ರಷ್ಪು ಮೀಸಲಾತಿ ಎಂಬ ಅನ್ನವನ್ನು ಕಿತ್ತುಕೊಂಡ ಸರ್ಕಾರ ಅದನ್ನು ಲಂಬಾಣಿ ಭೋವಿ ಕೊರಮ ಕೊರಚ ಗುಂಪಿಗೆ ಕೊಟ್ಟಿದೆ. ಯಾರದೋ ಅಸಹಾಯಕರ ಅನ್ನವನ್ನು ಕಸಿದು ಇನ್ಯಾರೋ ಹೊಟ್ಟೆ ತುಂಬಿದವರಿಗೆ ನೀಡುವ ಮನುಧರ್ಮವನ್ನು ಸರ್ಕಾರ ಪ್ರದರ್ಶಿಸಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ  ಆರೋಪಿಸಿದರು.

- Advertisement -

 ಅಲೆಮಾರಿಗಳು ಹೋರಾಟ ಬೆಂಬಲಿಸಿ ಬೆಂಗಳೂರು ಚಲೋಗೆ ಶುಕ್ರವಾರ ತುಮಕೂರು ಇಸ್ಮಾಯಿಲ್ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಆವರು   ಒಳಮೀಸಲಾತಿ ಯನ್ನು ಜಾರಿ ಮಾಡಲು ಸುಪ್ರೀಂ ಕೋರ್ಟ್ ನೀಡದ ತೀರ್ಪುನ್ನು ಆಧಾರಿಸಿ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ತಾಯಿ ಕರುಳನ್ನೇ ಕಿತ್ತು ಮಾಲೆ ಹಾಕಿಕೊಂಡಿರುವ ಮುಖ್ಯ ಮಂತ್ರಿ ಸಿದ್ಮರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವಮಹದೇವಪ್ಪ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಈ ಅಸಮಾನತೆಯ ಗುಣ ಈ ನಾಡಿನ ಅಲೆಮಾರಿಗಳಿಗೆ ಬಗೆದ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದನ್ನು ಸಾಮಾಜಿಕ ನ್ಯಾಯದ ಸರ್ಕಾರ ಎನ್ನಬಹುದೇ ? ಸಮ ಪಾಲು ಸಮ ಬಾಳು, ಅಂದರೆ ಇದೇನೇ?, ತಮ್ಮದೇ ಸರ್ಕಾರದ ಇಂತಹ ಅನ್ಯಾಯದ ಕ್ರಮವನ್ನು ನೋಡಿಕೊಂಡು ಕೂತಿರಲು ಸಾಧ್ಯವೇ ಇಂತಹ ಅನ್ಯಾಯ ಸಂಬಂಧಿಸಿದ್ದಲ್ಲವೇ ? ಮನುಷ್ಯತ್ವಕ್ಕೆ ಸಂಬಂಧಿಸಿದ್ದಲ್ಲವೇ ನಮ್ಮಗೆ ಮನುಷ್ಯತ್ವ ಇಲ್ಲವೇ?

ಸದಾಕಾಲ ಅಂಬೇಡ್ಕರ್ ಬುದ್ಧ ಬಸವಣ್ಣನವರ ಸಿದ್ದಾಂತ ಬೋಧೆ ಮಾಡುವ ರಾಜ್ಯ ಸರ್ಕಾರ ಈ ಅನ್ಯಾಯದ ದ್ರೋಹದ ಟಿಪ್ಪಣಿ ರೂಪಿಸಿ ಕ್ಯಾಬಿನೆಟ್ ಅನುಮೋದನೆ ಪಡೆದು ವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದರು.

ಸರ್ಕಾರಕ್ಕೆ ಬುದ್ಧಿ ಕಲಿಸಿ ಅಲೆಮಾರಿಗಳಿಗೆ ಅವರ ಪಾಲಿನ ನ್ಯಾಯ ಧಕ್ಕಿಸಬೇಕು.ಕರ್ನಾಟಕದಲ್ಲಿ ಅಂಬೇಡ್ಕರ್ ಸಿದ್ದಾಂತ ನೇಣಿಗೆರಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ಬುದ್ಧನ ಕರುಣೆಯನ್ನು ಸಮಾಧಿ ಮಾಡಿದವರು ನಾವಾಗುವುದು ಬೇಡ. ಬುದ್ಧ ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಹೋರಾಟ ಯಶಸ್ವಿ ಗೊಳ್ಳಿಸಬೇಕು. ಅಲೆಮಾರಿಗಳನ್ನು ಭೋವಿ ಲಂಬಾಣಿಗಳಿಂದ ಪ್ರತ್ಯೇಕಿಸಿ ಅವರ ಪಾಲು ಕೊಡಿಸಬೇಕು. ಅಲೆಮಾರಿಗಳ ಮಕ್ಕಳ ಶಿಕ್ಷಣ ಉದ್ಯೋಗ ದೊರಕಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಅಲೆಮಾರಿಗಳಿಗೆ ವಿಷ ಕೊಡುವ ಸಂದರ್ಭ ಬರಬಹುದು ಎಂದರು.

ಇದೇ ಸಂದರ್ಭದಲ್ಲಿ ಗುಬ್ಬಿ ಹಂದಿ ಜೋಗಿ ಮುಖಂಡ ಮಾರಣ್ಣ, ತುಮಕೂರು ಅಲೆಮಾರಿ ಸಂಘದ ವೆಂಕಟೇಶ್,  ತುಮಕೂರು ಸ್ಲಂ ಸಮಿತಿಯ ಕಣ್ಣನ್ ಅನುಪಮಾ,  ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ತುಮಕೂರು ದಸರಾಕ್ಕೆ ತಾರಾ ಮೆರುಗು : 11 ದಿನ, ನೂರಾರು ಆಕರ್ಷಣೆ

ದೇವಿಯ ಆರಾಧನೆ, ತಾರೆಯರ ಕಲರವ, ಸಂಗೀತದ ರಸದೌತಣ, ನೃತ್ಯ ವೈಭವ, ಕ್ರೀಡಾ...